ಸತ್ಯದ ಎರಡು ಮುಖಗಳು

Author : ವಿ.ಗಣೇಶ್‌

Pages 208

₹ 175.00




Year of Publication: 2020
Published by: ಸ್ಕಾಲರ್ಸ್ ಬುಕ್ ಸೀರಿಸ್
Address: ಮೈಸೂರು

Synopsys

‘ಸತ್ಯದ ಎರಡು ಮುಖಗಳು’ ವಿ. ಗಣೇಶ್‌ ಅವರ ಮಕ್ಕಳ ಕಥಾಸಂಕಲನವಾಗಿದೆ. ಸತ್ಯಕ್ಕೆ ಎರಡು ಮುಖಗಳಿರುತ್ತವೆ, ಅದು ಹೇಳುವವನಿಗೂ ಕೇಳುವವನಿಗೂ ನೆಮ್ಮದಿ ಹಾಗೂ ಸಂತೋಷ ವಿರಬೇಕು. ನೀವು ಕಳ್ಳನ ಹತ್ತಿರ ಹೋಗಿ ಕಳ್ಳತನ ಮಾಡಬಾರದು, ಸುಳ್ಳು ಹೇಳಬಾರದು ಮುಂತಾದ ಒಳರಚನಗಳನ್ನು ಹೇಳಿದರೆ ಅದು ಕಳ್ಳನಿಗೆ ಸಹ್ಯವಾಗುವುದಿಲ್ಲ. ಏಕೆಂದರೆ ಅವರು ಆ ಮಾರ್ಗದಲ್ಲಿ ಬದುಕುತ್ತಿರುವುದಿಲ್ಲ. ಆತನಿಗೆ ತಾನು ಮಾಡುತ್ತಿರುವ ಕೊಲೆ, ಸುಲಿಗೆ, ದರೋಡೆಯು ಸಹ್ಯವಾಗಿ ಕಾಣುತ್ತದೆ. ಅವನಿಗೆ ನಿನ್ನು ಮೇಲೆ ವಿಶ್ವಾಸ ಅಥವಾ ನಂಬಿಕೆಯುಂಟಾಗುವುದಿಲ್ಲ. ಅದೇ ವಿಷಯಗಳನ್ನು ನೀವು ಒಬ್ಬ ಸಾತ್ವಿಕನಿಗೆ ಹೇಳಿದರೆ ಅವರು ನಿಮ್ಮ ಮಾತುಗಳನ್ನು ತುಂಬಾ ಇಷ್ಟಪಡುತ್ತಾರೆ, ಏಕೆಂದರೆ ಅವರು ಆ ಮಾರ್ಗದಲ್ಲಿಯೇ ಬದುಕುತ್ತಿರುತ್ತಾರೆ. ಅವರ ಬಳಿ ನೀವು ಸತ್ಯ ಹೇಳಿದ್ದರೂ ಕಳ್ಳರ ಬಳಿ ಸತ್ಯ ಹೇಳಿದ ಹಾಗುವುದಿಲ್ಲ. ಹಾಗಾಗಿ ಹೇಳುವುದರ ಹಾಗೂ ಕೇಳುದವರ ರೀತಿ ನೀತಿಗಳು ಒಂದೇ ತೆರನಾಗಿದ್ದರೆ ಮಾತ್ರ ಸತ್ಯ ಹೇಳಿದಂತಾಗುತ್ತದೆ. ಇಂಥ ಸೂಕ್ಷ್ಮ ವಿಚಾರಗಳನ್ನು ಒಳಗೊಂಡ ಕಥೆಗಳನ್ನು ಈ ಕೃತಿ ಒಳಗೊಂಡಿದೆ. 

About the Author

ವಿ.ಗಣೇಶ್‌

ವಿ.ಗಣೇಶ ಅವರು ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದವರು. ಎಂ.ಎಸ್.ಸಿ, ಎಂ.ಎ., ಬಿ.ಎಡ್. ಪದವಿಯನ್ನು ಪೂರ್ಣಗೊಳಿಸಿದ್ದಾರೆ. ಪ್ರೌಢಶಾಲಾ ಅಧ್ಯಾಪಕರಾಗಿ, ಗಣಿತ ಉಪನ್ಯಾಸಕರಾಗಿ, ಇಂಗ್ಲೀಷ್ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಬಿ.ಎಡ್.ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸುಮಾರು 36 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. 75ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ...

READ MORE

Related Books