"ಪುಣ್ಯಕೋಟಿ" ಕೃತಿಯು ಸು. ರುದ್ರಮೂರ್ತಿ ಶಾಸ್ತ್ರಿ ಅವರ ಮಕ್ಕಳ ಸಾಹಿತ್ಯ ಕೃತಿಯಾಗಿದೆ. ಹಲವಾರು ವರ್ಷಗಳಿಂದ ಕನ್ನಡನಾಡಿನಲ್ಲಿ ಪುಣ್ಯಕೋಟಿಯ ಸರಳ ಕಥನಕಾವ್ಯ ಅತ್ಯಂತ ಜನಪ್ರಿಯವಾಗಿದೆ. ನಮ್ಮ ಸಾಮಾಜಿಕ ಜೀವನದ ಅವಿಭಾಜ್ಯ ಅಂಗವಾಗಿದೆ ಎಂದೂ ಹೇಳಬಹುದು. ಕನ್ನಡ ಬಲ್ಲ ಪ್ರತಿಯೊಬ್ಬರಿಗೂ ಈ ಕಥೆ ಗೊತ್ತಿದೆ. ಇದರಲ್ಲಿ ವ್ಯಕ್ತವಾಗುವ ಆದರ್ಶ ಈಗಲೂ ಮನಮುಟ್ಟುತ್ತದೆ. ಅದರಲ್ಲೂ ಗೋವುಗಳನ್ನೇ ಅವಲಂಬಿಸಿದ ನಮ್ಮ ಗ್ರಾಮೀಣ ಬದುಕಿನ ಹಿನ್ನೆಲೆ ಈ ಕಥೆಯ ಸೊಗಸನ್ನು ಇಮ್ಮಡಿಸಿದೆ. ಸತ್ಯ ನೀತಿ ಧರ್ಮಗಳು ನಮ್ಮ ಸನಾತನ ಧರ್ಮದ ಆದರ್ಶಗಳು. 'ಸತ್ಯಮೇವ ಜಯತೆ' ಎಂಬುದು ನಮ್ಮ ರಾಷ್ಟ್ರದ ಘೋಷವಾಕ್ಯವಾಗಿದೆ. ನಮ್ಮ ಪುರಾಣ ಪುಣ್ಯ ಕಥೆಗಳು ವಿಸ್ತರಿಸುವ ಆದರ್ಶಗಳೂ ಇವೇ. ಇಂಥ ಸರಳ ಸುಂದರವಾದ, ಆಕರ್ಷಕವಾದ, ಅರ್ಥಪೂರ್ಣ ಕಥೆಗಳು ನಮ್ಮ ಮಕ್ಕಳಲ್ಲಿ ಉತ್ತಮ ಸಂಸ್ಕಾರ ನೀಡಲು ಸಹಕಾರಿಯಾಗುತ್ತವೆ.
©2024 Book Brahma Private Limited.