ನಾಲ್ಕು ದಶಕಗಳಿಗೂ ಹೆಚ್ಚುಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದ ಮಕ್ಕಳ ಸಾಹಿತಿ ಮತ್ತೂರು ಸುಬ್ಬಣ್ಣ ಅವರು ರಚಿಸಿದ ಕತೆಗಳ ಸಂಕಲನ- ಮಕ್ಕಳ ಕಥಾಲೋಕ ಭಾಗ-1. ಧೈರ್ಯ, ನೀತಿ, ಪ್ರೀತಿ, ಹೀಗೆ ಕಲಿಕೆಗೆ ಪೂರಕವಾಗುವ ವಿಷಯ ವಸ್ತು ಇಲ್ಲಿಯ ಕತೆಗಳಲ್ಲಿವೆ.
ಸುಬ್ಬಣ್ಣನವರ ಸಣ್ಣ ಕತೆಗಳ ಒಂದು ವಿಶಿಷ್ಟ ಲಕ್ಷಣವೆಂದರೆ ಕತೆಗಳಲ್ಲಿ ಆಧುನಿಕತೆಯನ್ನು ತರುವ ಪ್ರಯತ್ನ. ರೋಬೋಗಳನ್ನು ಬಳಸುವುದು, ಇಂದಿನ ಮಕ್ಕಳ ಕಲ್ಪನೆಗೆ ಒಗ್ಗುವ ವಿಷಯಗಳು, ಪರಿಸರ ಪ್ರಜ್ಞೆ, ಮನೋವಿಜ್ಞಾನ, ಸಾಕ್ಷರತೆ, ವಿದ್ಯೆಯ ಪ್ರಾಮುಖ್ಯತೆ ಕಥಾವಸ್ತುಗಳನ್ನು ಒಳಗೊಂಡಿದ್ದು, ಮಕ್ಕಳ ಕುತೂಹಲವನ್ನು ಕೆರಳಿಸಿ ತಣಿಸುವ ಗುಣ ಹೊಂದಿವೆ.
©2024 Book Brahma Private Limited.