ಚಂದಾಮಾಮ ಕಥೆಗಳು

Author : ರಾಜೇಶ್ವರಿ ಕೆ.ವಿ.

Pages 144

₹ 360.00




Year of Publication: 2023
Published by: ಹೇಮಂತ ಸಾಹಿತ್ಯ ಪ್ರಕಾಶನ
Address: ನಂ.972, ಸಿ, 4ನೇ ಇ ಬ್ಲಾಕ್, 10ನೇ ಮುಖ್ಯರಸ್ತೆ, ರಾಜಾಜಿನಗರ, ಬೆಂಗಳೂರು-560060\n

Synopsys

ಚಂದಮಾಮ ಕಥೆಗಳು ತೆಲುಗುಮೂಲವಾಗಿದ್ದು ಕನ್ನಡಕ್ಕೆ ರಾಜೇಶ್ವರಿ ಕೆ ವಿ ಅನುವಾದಿಸಿದ್ದಾರೆ. ಮಕ್ಕಳಿಗೆ ಕಥೆಗಳೆಂದರೆ ಪಂಚಪ್ರಾಣ. ಅಂತಹ ಮಕ್ಕಳ ಕಥೆಗಳು ಹೇಗಿರಬೇಕೆಂದರೆ ಮಕ್ಕಳು ಓದುವ ಕಥೆಗಳಲ್ಲಿ ಜ್ಞಾನ, ವಿಜ್ಞಾನ, ವಿನೋದ, ಉತ್ಸಾಹ, ಉಲ್ಲಾಸ, ನೀತಿ ಇವುಗಳಿದ್ದರೆ ಅವು ಮಕ್ಕಳ ಮಾನಸಿಕ ಬೆಳವಣಿಗೆಗೆ ಬಹಳ ಸಹಾಯವಾಗುತ್ತವೆ. ಇಂತಹ ಕಥೆಗಳನ್ನು ಕಟ್ಟಿಕೊಡುವುದರಲ್ಲಿ ಮುಂದಿರುವುದು ಹೆಸರಾಂತ ಮಕ್ಕಳ ಪತ್ರಿಕೆ 'ಚಂದಮಾನು". ಚಂದಮಾಮ ಕಥೆಗಳನ್ನು ಓದುವುದರಿಂದ ಮಕ್ಕಳಿಗೆ ಪ್ರಪಂಚದ ಪರಿಚಯವಾಗುತ್ತದೆ. ನಮ್ಮ ಸಂಪ್ರದಾಯದ ಹಿರಿಮೆ ತಿಳಿಯುತ್ತದೆ. ಅವರಲ್ಲಿ ನೀತಿ, ನಿಯಮಗಳನ್ನು ಒಳ್ಳೆಯ ಶಿಕ್ಷಣವನ್ನು ತರುತ್ತದೆ. ಅವರಲ್ಲಿ ಉತ್ಸಾಹ ಉಲ್ಲಾಸ,ಆನಂದ ಮೂಡಿಸುತ್ತವೆ. ಒಟ್ಟಿನಲ್ಲಿ ಹೇಳಬೇಕೆಂದರೆ ಚಂದಮಾಮ ಕಥೆಗಳೆಂದರೆ ಮಕ್ಕಳಿಗೆ ಬಹಳ ಇಷ್ಟ. 1947ರಲ್ಲಿ ಪ್ರಾರಂಭವಾದ ಚಂದಮಾಮ 66 ವರ್ಷಗಳು ಪ್ರಕಟವಾಗಿ 2013ರಲ್ಲಿ ನಿಂತು ಹೋಯಿತು. ಆ ಕಥೆಗಳನ್ನು ಮಕ್ಕಳಿಗೆ ಆಷ್ಟೇ ಅಂದವಾಗಿ, ಚಿತ್ರಗಳೊಂದಿಗೆ ಮತ್ತೆ ಪ್ರಕಟಿಸಲು ಹೇಮಂತ ಸಾಹಿತ್ಯ ಟೊಂಕಕಟ್ಟಿ ನಿಂತಿದೆ.

About the Author

ರಾಜೇಶ್ವರಿ ಕೆ.ವಿ.

ಕಾದಂಬರಿಗಾರ್ತಿ ರಾಜೇಶ್ವರಿ ಕೆ. ವಿ.  ಅವರು  ಕನ್ನಡದ ಜನಪ್ರಿಯ ಕಾದಂಬರಿಗಾರ್ತಿಯರಲ್ಲಿ ಒಬ್ಬರು. ಅಂಚೆ ಕಛೇರಿಯಲ್ಲಿ ವೃತ್ತಿ ಆರಂಭಿಸಿದ ಅವರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ತಂದೆ ವೆಂಕಟಪತಿ, ತಾಯಿ ಸಾವಿತ್ರಮ್ಮ.  ‘ಬಾಳೆಂಬ ದೋಣಿ, ವಂಶೋದ್ದಾರಕ, ಮಧೂಲಿಕ, ಚಿಗುರಿದ ಕುಡಿ, ಪಂಜರದ ಗಿಳಿ, ಸೌಂದರ್ಯ, ಮೊದಲ ಮೆಟ್ಟಿಲು, ಸೂತ್ರಧಾರ, ಹೊಸ ಬದುಕು, ಹರ್ಷದ ಹೊನಲು, ಹೊನ್ನ ಹರಿಗೋಲು’ ಕಾದಂಬರಿಗಳನ್ನು ರಚಿಸಿದ್ದಾರೆ. ಅವರು ಕಾದಂಬರಿಗಳಲ್ಲದೆ ವಾಸ್ತುಶಿಲ್ಪ, ವಿಜ್ಞಾನ, ಹೊಲಿಗೆ, ಪಾಕಶಾಸ್ತ್ರ, ಹಾಸ್ಯ, ಕಾವ್ಯ, ಕಂಪ್ಯೂಟರ್ ಮೊದಲಾಗಿ ವಿಷಯ ವಸ್ತುಗಳಿಗೆ ಸಂಬಂಧಿಸಿದಂತೆ ಅನೇಕ ಪುಸ್ತಕಗಳನ್ನು ರಚಿಸಿದ್ದಾರೆ.  ...

READ MORE

Related Books