ಮಕ್ಕಳಿಗಾಗಿ ಕಾಡಿನ ಕಥೆಗಳು-ಲೇಖಕ ಮತ್ತೂರು ಸುಬ್ಬಣ್ಣ ರಚಿಸಿದ ಕೃತಿ ಇದು. ಕಾಡು, ಪಕ್ಷಿ ಪ್ರಾಣಿ, ನೀರು, ಕಂದಕ, ಹೊಂಡ ಇವೆಲ್ಲವೂ ಮಕ್ಕಳು ಮಾತ್ರವಲ್ಲ; ದೊಡ್ಡವರಿಗೂ ಪ್ರಿಯವಾಗುತ್ತವೆ. ಕಾಡು-ಪ್ರಾಣಿ-ಪಕ್ಷಿ-ನೀರು ಹೀಗೆ ವಿವಿಧ ಜೀವನ ಶೈಲಿ ಹೊಂದಿದ್ದರೂ ಕಾಡಿನಲ್ಲಿ ಅವುಗಳ ಹೊಂದಾಣಿಕೆಯ ಬದುಕು ಮಾದರಿ. ಹೊಟ್ಟೆ ತುಂಬಿಸಿಕೊಳ್ಳುವುದಕ್ಕಾಗಿ ಮಾತ್ರ ಬೇಟೆಯಾಡುತ್ತವೆ. ಹೊಟ್ಟೆ ತುಂಬಿದ ಮೇಲೆ ಅವು ಮತ್ತೊಂದು ಪ್ರಾಣಿಯ ಬದುಕಿನೊಂದಿಗೆ ಚೆಲ್ಲಾಟವಾಡುವುದಿಲ್ಲ. ಇಂತಹ ಸಂದೇಶದ ಕತೆಗಳು ಈ ಕಥೆಯ ಹಂದರವಾಗಿದೆ. ಆದ್ದರಿಂದ, ಮಕ್ಕಳ ಮನಸ್ಸಿಗೆ ಮುದ ನೀಡುತ್ತವೆ. ಕೃತಿಯ ಕರ್ತೃ ಮತ್ತೂರು ಸುಬ್ಬಣ್ಣ.
©2024 Book Brahma Private Limited.