ಪ್ರಬುದ್ಧತೆಯ ಹೊಸ್ತಿಲಲ್ಲಿರುವ ಮಕ್ಕಳಿಗಾಗಿ ಕತೆಗಳು
ಇದುವರೆಗೆ ಮಕ್ಕಳಿಗಾಗಿ ಬಂದಿರುವ ಕಥೆಗಳು ಪಂಚತಂತ್ರ, ಅಕಬರ್-ಬೀರಬಲ್, ನಸ್ರುದ್ದೀನ್ ಕಥೆಗಳು ಈ ರೀತಿ ಪುರಾತನ ಹಾಗೂ ಪರಂಪರಾಗತ ವಸ್ತುಗಳನ್ನೊಳಗೊಂಡವು. ಆದರೆ ಇಂದು ಮಕ್ಕಳ ಪರಿಪೇಕ್ಷ ಬದಲಾಗಿದೆ, ಇಂದೂ ಕೂಡ ಅವರಿಗೆ ರಾಜರಾಣ ಕಥೆಗಳು, ಪ್ರಾಣ ಪಕ್ಷಿ ಕತೆಗಳು ಹೇಳುವುದು ಸಮಂಜಸವಲ್ಲ. ಅಲ್ಲದೆ ಮಕ್ಕಳ ವಯಸ್ಸಿಗೆ ಅನುಗುಣವಾಗಿಯೂ ಸಾಹಿತ್ಯದ ವಸ್ತು, ವಿನ್ಯಾಸಗಳು ಬದಲಾಗುತ್ತವೆ. ಅಂತೆಯೇ ಜುಗ್ನು ಕಥೆಯಲ್ಲಿ ಹದಿಹರೆಯಕ್ಕೆ ಸಮೀಪಿಸುತ್ತಿರುವ ಮಕ್ಕಳಿಗಾಗಿ ವಾಸ್ತವದ ನೆಲೆಗಟ್ಟಿನ ಕಥೆಗಳನ್ನು ನೀಡುವ ಪ್ರಯತ್ನ ಮಾಡಲಾಗಿದೆ. ಮಕ್ಕಳ ಸುತ್ತಮುತ್ತಲಿನ ಸಮಾಜಜೀವನದಲ್ಲಿ ಕಂಡುಬರುವ ಪ್ರಸಂಗಗಳನ್ನು ಕಥೆಯಾಗಿ ಕಟ್ಟಿಕೊಡಲಾಗಿದೆ. ಇಲ್ಲಿ ಗಡಿನಾಡಿನ ಭಾಷೆ, ನುಡಿಗಟ್ಟು ಬಳಸಲಾಗಿದೆ. ಇಲ್ಲಿ ಬರುವ ಹತ್ತೂ ಕಥೆಗಳು ಭಿನ್ನ ವಿಭಿನ್ನ ಸನ್ನವೇಶಗಳನ್ನುಳ್ಳವು. ಹಾಗೆಂದು ಫ್ಯಾಂಟಸಿಯುಳ್ಳ ಕಥೆಗಳು ಇಲ್ಲವೆಂದಲ್ಲ; ಸೂರ್ಯ ಶಿಕಾರಿ ಮತ್ತು ರೈಟ್ ಬಂಡಿ ಕತೆಗಳು ಫ್ಯಾಂಟಸಿ ಸ್ವರೂಪದ್ದಾಗಿವೆ. ಉಳಿದ ಎಲ್ಲ ಕಥೆಗಳು ಮನರಂಜನೆಯೊಂದಿಗೆ ಮಕ್ಕಳ ಮನೋವಿಸ್ತಾರಕ್ಕೆ ಪೂರಕವಾಗಿವೆ. ಈ ಕೃತಿಗೆ ಡಾ. ಆನಂದ ಪಾಟೀಲರ ಮುನ್ನುಡಿ ಇದೆ.
©2024 Book Brahma Private Limited.