‘ಚಿನ್ನದ ಹುಡುಗಿ ಚಿನ್ನಮ್ಮ’ ಲೇಖಕ ಆರ್.ವಿ. ಭಂಡಾರಿ ಅವರು ಮಕ್ಕಳಿಗಾಗಿ ಬರೆದ ಕಾದಂಬರಿ. ಈ ಕೃತಿಯ ಕುರಿತು ಬರೆಯುತ್ತಾ ಮಕ್ಕಳಿಗಾಗಿ ಬರೆದ ಚಿನ್ನದ ಹುಡುಗಿ ಚಿನ್ನಮ್ಮ ಕಾದಂಬರಿ ನನಗೆ ಅತ್ಯಂತ ಪ್ರಿಯವಾದುದು. ಚಿನ್ನಮ್ಮ ಅತ್ಯಂತ ಕೆಳ ಜಾತಿಯ ಬಡ ಹೆಣ್ಣು ಮಗಳು. ಬೇರೆಯವರ ಮನೆಕೆಲಸವನ್ನು ಮಾಡುತ್ತಿರುವುದರಿಂದ ಶಾಲೆಗೆ ಹೋಗಿ ಓದು-ಬರಹ ಕಲಿಯಲು ಸಾಧ್ಯ ಆಗದಿದ್ದರೂ ಮನೆಯಲ್ಲಿಯೇ ಸ್ವಪ್ರಯತ್ನದಿಂದ ಕಲಿತು, ನಂತರ ಶಾಲೆಗೆ ಸೇರಿ, ಕ್ರೀಡೆಯಲ್ಲಿ ಮಹತ್ತನ್ನು ಸಾಧಿಸಿ ಚಿನ್ನದ ಹುಡುಗಿ ಎಂಬ ಅಭಿದಾನಕ್ಕೆ ಪಾತ್ರವಾಗುವುದು ಮೆಚ್ಚಿಗೆಯ ಸಂಗತಿ ಎನ್ನುತ್ತಾರೆ ಲೇಖಕ ಆರ್.ವಿ. ಭಂಡಾರಿ. ಈ ಕಾದಂಬರಿ ಮಕ್ಕಳ ಮನಸ್ಸಿನಲ್ಲಿ ಸಾಧನೆಯ ಛಲ ಹುಟ್ಟಿಸಿ ಅವರ ಗಮ್ಯವನ್ನು ತಲುಪಲು ಸಹ ಕರಿಸುತ್ತದೆ.
©2024 Book Brahma Private Limited.