‘ಥಾಯ್ ಲ್ಯಾಂಡ್ ಇಂಡೋನೇಶಿಯಾ ತಿರುಗಾಟ’ ಗುರುಮೂರ್ತಿ ಪೆಂಡಕೂರು ಅವರ ಪ್ರವಾಸಕಥನವಾಗಿದೆ. ತಮ್ಮ ಪ್ರವಾಸದ ಅವಧಿಯಲ್ಲಿ ನಾಣ್ಯ-ಶಾಸನ-ಸ್ಥಳನಾಮ ಇವು ಗಳತ್ತ ಹೆಚ್ಚಿನ ಗಮನವಿಟ್ಟು ಸಂಚರಿಸಿದ ಲೇಖಕರು ಭಾರತೀಯ ಸಂಸ್ಕೃತಿಯೇ ಹಿಂದೆ ಬಹಳ ದೂರದವರೆಗೂ ಹರಡಿ ಇಂಡೋನೇಶಿಯಾ ಥಾಯ್ ಲ್ಯಾಂಡ್‌ನ್ನು ತಲುಪಿ ತನ್ನ ಛಾಪು ಮೂಡಿಸಿತ್ತೆಂದು ಅಭಿಪ್ರಾಯಪಡುತ್ತಾರೆ. ಅಲ್ಲಿನ ಹಿಂದೂ ದೇವಾಲಯ, ಬೌದ್ಧ ಸ್ಮಾರಕ, ಮೂರ್ತಿಶಿಲ್ಪಗಳನ್ನವಲೋಕಿಸಿದಾಗ ಅನ್ಯವಲ್ಲದ ಆತ್ಮೀಯಭಾವನೆ ಮೂಡಿಸುವ ನಮ್ಮ ಪುರಾಣ ಕಥೆಗಳನ್ನೇ ಹೋಲುವ ಬಹಳಷ್ಟು ವಿಷಯ ಗಳನ್ನು ಸಂಗ್ರಹಿಸಿ ನಮಗಾಗಿ ಕಥೆ ಹೇಳುವ ಕಲೆಗಾರಿಕೆಯೊಂದಿಗೆ ನಮ್ಮ ಮುಂದಿಟ್ಟಿದ್ದಾರೆ.
ಬರಹಗಾರ ಗುರುಮೂರ್ತಿ ಪೆಂಡಕೂರು ಅವರು ಜನಿಸಿದ್ದು 1938 ಜೂನ್ 9ರಂದು. ವೃತ್ತಿಯಲ್ಲಿ ವ್ಯಾಪಾರಿಯಾಗಿದ್ದ ಇವರು ಪ್ರವೃತ್ತಿಯಲ್ಲಿ ಬರಹಗಾರರು. ಸಾಹಿತ್ಯ ಪ್ರಿಯರಾಗಿದ್ದ ಇವರ ಹುಟ್ಟೂರು ಬಳ್ಳಾರಿ ಜಿಲ್ಲೆ ದೇವರಕೆರೆ. ತಾಯಿ ರಾಮಕ್ಕ, ತಂದೆ ವಿರೂಪಣ್ಣ. ಬಳ್ಳಾರಿಯಲ್ಲಿ ಪ್ರೌಢಶಾಲೆ ಶಿಕ್ಷಣ ಪಡೆದ ಇವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಪದವಿ ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಪ್ರವಾಸಿ ಪ್ರಿಯರಾಗಿರುವ ಇವರು ವಿಶ್ವದ ಹಲವಾರು ದೇಶಗಳನ್ನು ಸುತ್ತಿದ್ದಾರೆ. ಗುರುಮೂರ್ತಿ ಅವರ ಪ್ರಮುಖ ಕೃತಿಗಳೆಂದರೆ ಬಹುರೂಪಿ ವಸುಂಧರಾ, ಆಂಧ್ರ ಪ್ರಪಂಚ, ಅಮರನಾಥ ಪ್ರವಾಸ, ಥಾಯ್‌ಲ್ಯಾಂಡ್-ಇಂಡೋನೇಷಿಯಾ ತಿರುಗಾಟ, ಓ ! ಕೆನಡಾ, ಅವಕಾಶಗಳ ...
READ MORE