ಜೋಕಟ್ಟೆಯವರ ಹಿಮವರ್ಷದಲ್ಲಿರುವ 34 ಲೇಖನಗಳು ವೈವಿಧ್ಯ ವಿಷಯಗಳನ್ನು ಒಳಗೊಂಡಿವೆ. ಕುತೂಹಲಕಾರಿ ಮಾಹಿತಿಗಳನ್ನು ನೀಡುತ್ತವೆ. ಜನಪ್ರಿಯ ಮಾದರಿಯ ಬರಹಗಳು ಇದಾಗಿರುವುದರಿಂದ, ಸಂಕೀರ್ಣತೆಯಿಲ್ಲ. ಸರಳತೆ ಅವರ ನಿರೂಪಣೆಯ ಹೆಗ್ಗಳಿಕೆ. ಈ ಕೃತಿಯಲ್ಲಿ ಬೇರೆ ಬೇರೆ ಕ್ಷೇತ್ರಗಳನ್ನು ಜೋಕಟ್ಟೆ ಮುಟ್ಟಿ ನೋಡಿದ್ದಾರೆ. ಪ್ರವಾಸ ಕಥನವಿದೆ. ಡ್ಯಾನ್ಸ್ ಬಾರ್‌ನ ಪಿಂಕಿ, ಬಬ್ಲಿಯರ ಅಂತರಂಗವಿದೆ. ಮುಂಬಯಿಯಲ್ಲಿ ಕನ್ನಡ ಅಕ್ಷರ ಸೇವೆ ಮಾಡುವ ನವೀನ್ ಪ್ರಿಂಟರ್ಸ್ ಕುರಿತ ವಿವರಗಳಿವೆ. ಕನ್ನಡ-ಮರಾಠಿ ಸಂಬಂಧಗಳ ಚರ್ಚೆಯಿದೆ. ಮುಂಬೈ ಕನ್ನಡದ ಹಿರಿಮೆಯ ಬಗ್ಗೆ ಬರೆಯುತ್ತಾರೆ. ಬಾಲಿವುಡ್, ಬ್ಲೂಫಿಲಂ, ಬಗ್ಗೆಯೂ ಬರೆಯುವ ಇವರು ಮಗದೊಂದೆಡೆ ನೇಪಾಳ ಕರ್ನಾಟಕದ ನಡುವಿನ ಸಂಬಂಧಗಳನ್ನೂ ಕಟ್ಟಿಕೊಡುತ್ತಾರೆ. ಹಾಗೆಯೇ ಕೆಲವು ವೈಚಾರಿಕ ಬರಹಗಳೂ ಇಲ್ಲಿವೆ. ಸಾಂಸ್ಕೃತಿಕ ವಿಷಯಗಳನ್ನೂ ಅವರು ಆರಿಸಿಕೊಂಡಿದ್ದಾರೆ. ಇಲ್ಲಿರುವ ಎಲ್ಲ ಬರಹಗಳು ಬೇರೆ ಬೇರೆ ಕಾರಣಗಳಿಗಾಗಿ ನಮ್ಮಲ್ಲಿ ಓದುವ ಉತ್ಸಾಹವನ್ನು ಮೂಡಿಸುತ್ತವೆ ಎನ್ನುವುದರಲ್ಲಿ ಎರಡು ಮಾತಿಲ್ಲ.
©2024 Book Brahma Private Limited.