‘ಕಾಡು ತೋಟ’ ಶಿವಾನಂದ ಕಳವೆ ಅವರ ಕೃತಿ. ಮಾರುಕಟ್ಟೆಯಿಂದ ತರಕಾರಿ, ದಿನಸಿ, ಹಣ್ಣುಹಂಪಲು ಖರೀದಿಸಿ ತರುವುದು ಕಷ್ಟವಾಗಿ ಕೊರೊನಾ ಲಾಕ್ ಡೌನ್ ಹಲವು ಸವಾಲು ಒಡ್ಡಿದ್ದು ನೆನಪಿದೆ. ಕೈಯಲ್ಲಿ ಹಣವಿಲ್ಲದಿದ್ದರೂ ಹೊರಗಡೆ ಹೋಗಲಾಗದ ಪರಿಸ್ಥಿತಿ ಅನುಭವಿಸಿದ್ದೇವೆ. ಅಡಿಕೆ ಉಣ್ಣಲಾಗದು, ರಬ್ಬರ್ ತಿನ್ನಲಾಗದೆಂದು ಏಕಜಾತಿಯ ವಾಣಿಜ್ಯ ತೋಟ ಮಾಡಿದವರಿಗೆಲ್ಲ ಬೆಳೆ ಭವಿಷ್ಯದ ಬಗ್ಗೆ ಯೋಚಿಸುವಂತಾಯ್ತು. ನಮ್ಮದೇ ತೋಟದಲ್ಲಿ ಆಹಾರ ಬೆಳೆ, ಔಷಧ, ಹೂವು, ಸೊಪ್ಪು, ತರಕಾರಿ ಬೆಳೆದಿದ್ದರೆ ಆಹಾರ-ಆರೋಗ್ಯ ಸುಸ್ಥಿರತೆ ಸಾಧ್ಯವೆಂದು ಮನದಟ್ಟಾಯ್ತು ಎನ್ನುತ್ತಾರೆ ಎಂ.ಎ. ಸುಬ್ರಹ್ಮಣ್ಯ. ಈ ಕೃತಿಗೆ ಬೆನ್ನುಡಿ ಬರೆದಿರುವ ಅವರು ಕಾಡು ತೋಟ- ಆರೋಗ್ಯ ಭಾಗ್ಯದ ಅನ್ನದ ತಟ್ಟೆ ರಚಿಸಿದ ಲೇಖಕರು ಈ ಸಂಕಷ್ಟದ ಸಮಯದಲ್ಲೂ ನೆಮ್ಮದಿಯಿಂದ ಇದ್ದಾರೆ ಎಂಬುದನ್ನು ವಿವರಿಸಿದ್ದಾರೆ.
ಶಿವಾನಂದ ಕಳವೆ ಅವರು ಶಿರ್ಸಿ ಬಳಿಯ ಕಳವೆ ಗ್ರಾಮದವರು. ವೃತ್ತಯಿಂದ ಪತ್ರಕರ್ತರು. ಪರಿಸರ ಜಾಗೃತಿ ಮೂಡಿಸುವ ಬರೆಹಗಳು ಇವರ ವೃತ್ತಿ ವೈಶಿಷ್ಟತೆ. ಶಿರಸಿ ಸಮೀಪದ ನೀರ್ನಳ್ಳಿಯ ‘ಮಲೆನಾಡ ಮಳೆಕೇಂದ್ರ’ದ ರೂವಾರಿಯೂ ಹೌದು. ಉತ್ತರ ಕನ್ನಡ ಜಿಲ್ಲೆಯಾದ್ಯಂತ ಪ್ರವಾಸ ಮಾಡಿ, ಅಲ್ಲಿಯ ಕೃಷಿ, ಪರಿಸರ, ಪರಿಸರ, ಜನಜೀವನಗಳನ್ನು ದಾಖಲಿಸಿದ್ದಾರೆ. ಈ ಪ್ರವಾಸದ ಬರವಣಿಗೆ ‘ಕಾಡುನೆಲದ ಕಾಲಮಾನ’. ದೇಸೀ ಜ್ಞಾನದ ವಿವಿಧ ಮಜಲುಗಳ ಅಧ್ಯಯನ ನಡೆಸಿದ್ದಾರೆ. ಮುಡೇಬಳ್ಳಿ, ಮುಳ್ಳೆಹಣ್ಣು (ಸಂಪದ.ನೆಟ್ ಅಂತರ್ಜಾಲ ಪತ್ರಿಕೆ), ಬಹುಧಾನ್ಯ (ಉದಯವಾಣಿ), ದಾಟ್ ಸಾಲು (ನೀರ ಸಂರಕ್ಷಣೆಯ ಕಾರ್ಯದ ದಾಖಲಾತಿ)-ಇವು ಅಂಕಣಗಳ ಶೀರ್ಷಿಕೆಗಳು. ಪ್ರಮುಖ ಕೃತಿಗಳು: ಕಾನ್ ಗೌರಿ, ಗೌರಿ ಜಿಂಕೆಯ ಆತ್ಮಕಥೆ, ಅರಣ್ಯ (ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಿತ), ಅರಣ್ಯ ಜ್ಞಾನದ ...
READ MORE