ಲೇಖಕಿ ಉಮಾದೇವಿ ಉರಾಳ ಅವರ ಯೂರೋಪ್, ಚೀನಾ, ಸ್ಕಾಂಡಿನೇವಿಯಾ, ಈಶಾನ್ಯ ಭಾರತದ ಪ್ರವಾಸ ಕಥನದ ಗುಚ್ಛವೆ ‘ಬಾನಾಡಿ ಕಂಡ ಬೆಡಗು’. ಈ ಸ್ಥಳಗಳಿಗೆ ಪ್ರವಾಸ ಹೋಗಲು ಬಯಸುವ ಪ್ರವಾಸಿಗರಿಗೆ ಕೈಪಿಡಿಯಂತಿರುವ ಕೃತಿ, ಲೇಖಕಿಯ ಅನನ್ಯ ಅನುಭವಗಳ ಮೂಟೆಯೂ ಹೌದು. ಒಟ್ಟು 19 ಲೇಖನಗಳು ಈ ಪುಸ್ತಕದಲ್ಲಿದೆ. ಇಂಗ್ಲೆಂಡಿನ ರಾಜಧಾನಿ ಲಂಡನ್ನಿನ ಪ್ರವಾಸ ಲೇಖನದೊಂದಿಗೆ ಕೃತಿ ಪ್ರಾರಂಭವಾಗುತ್ತದೆ. ಪ್ಯಾರಿಸ್, ಬ್ರಸೆಲ್ಸ್, ಹಾಲೆಂಡ್, ಜರ್ಮನಿ, ಸ್ವಿಟ್ವರ್ಲೆಂಡ್ ಮೊದಲಾದ ದೇಶಗಳ ಬದುಕು, ಬವಣೆಯನ್ನು ಕಟ್ಟಿಕೊಡುತ್ತ ಸೊಬಗನ್ನು ವರ್ಣಿಸುತ್ತದೆ.
ಕೆ. ಆರ್. ಉಮಾದೇವಿ ಉರಾಳ ಅವರು ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಕಮ್ಮರಡಿಯವರು. ಆಂಗ್ಲಭಾಷಾ ಉಪನ್ಯಾಸಕಿಯಾಗಿ, ಮೂವತ್ತೊಂಬತ್ತು ವರ್ಷಗಳ ಸೇವಾವಧಿಯ ನಂತರ ನಿವೃತ್ತಿ. ಓದುವಿಕೆ, ಬರಹ, ಭಾಷಣ, ವಿಚಾರಗೋಷ್ಠಿಗಳಲ್ಲಿ ಪ್ರಬಂಧ ಮಂಡನೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸಕ್ರಿಯ ಪಾತ್ರ. ರಾಜ್ಯದ ಪ್ರಮುಖ ಪತ್ರಿಕೆಗಳು, ಸಂಚಿಕೆಗಳಲ್ಲಿ ಲೇಖನಗಳು ಪ್ರಕಟವಾಗಿವೆ. "ಮುಂಬೆಳಕಿನ ಮಿಂಚು", "ಮಕ್ಕಳಿಗಿದು ಕಥಾಸಮಯ" ಪ್ರಕಟಿತ ಕೃತಿಗಳು. ಜಾನಪದ ವಿಶ್ವವಿದ್ಯಾಲಯವು ಪ್ರಕಟಿಸಿರುವ ಕರ್ನಾಟಕ ಗ್ರಾಮ ಚರಿತ್ರೆ ಕೋಶದಲ್ಲಿ ತೀರ್ಥಹಳ್ಳಿ ತಾಲ್ಲೂಕಿನ ನೂರಾರು ಗ್ರಾಮಗಳಲ್ಲಿ ಕ್ಷೇತ್ರಕಾರ್ಯ: ಅವು ವಿವಿಧ ಸಂಕಲನಗಳಲ್ಲಿ ಸೇರ್ಪಡೆಯಾಗಿವೆ. ಕೆಲವು ...
READ MORE