‘ನಾನೂ ಅಮೇರಿಕೆಗೆ ಹೋಗಿದ್ದೆ’ ಕೃತಿಯು ಕೃಷ್ಣಾನಂದ ಕಾಮತ್ ಅವರ ಪ್ರಯಾಣದ ಕುರಿತ ಬರವಣಿಗೆಯಾಗಿದೆ. ಕೃತಿಯ ಪರಿವಿಡಿಯಲ್ಲಿ ಭಾಗ-1, ಭಾಗ-2, ಭಾಗ-3ಗಳ ಕುರಿತು ವಿಚಾರಗಳಿದ್ದು, ಹಿನ್ನೆಲೆಯಲ್ಲಿ, ಹಿಮಾಲಯದಲ್ಲಿ, ಹಾಯ್, ವರ್ಗ, ನಾಮಾಂತರ, ಕಣ್ಣಿನ ಪರೀಕ್ಷೆ, ನವ್ಯಭೂತಗಳು, ಇದೂ ಇದೆಯೇ, ಗಂಡು ಹೆಣ್ಣು, ಗೃಹ ವಿಜ್ಞಾನ. ಭಾಗ-2ರಲ್ಲಿ : ಅಮೇರಿಕನ್ ಕುಟುಂಬದೊಡನೆ, ಯಾಂಕಿ ಗೆಳೆಯರು. ಹೆಮಲಿನ್ ಕುಟುಂಬದೊಡನೆ, ಲೇಖನಿಯ ಸಂಹಿತೆ. ಭಾಗ-3ರಲ್ಲಿ: ಸಿರಿ ಇಲ್ಲದ ಸಿರಿವಂತರು, ಶಿಕ್ಷಣ ಪದ್ದತಿ, ದೇವರ ಮಕ್ಕಳು, ಅಮೇರಿಕೆಯಲ್ಲಿ ಭಾರತೀಯರು, ದಿನಕ್ಕೊಂದು ಡಾಲರ್ ಗಳನ್ನು ಒಳಗೊಂಡಿದೆ. ಕೃತಿಯ ವಿಚಾರದಲ್ಲಿ ಕೆಲವೊಂದು ವಿಚಾರಗಳು ಹೀಗಿವೆ : ಕೃಷ್ಣಾನಂದ ಕಾಮತರನ್ನು ಪರಿಸರ ಧ್ಯಾನಿ, ಅಪರೂಪದ ಛಾಯಾಗ್ರಾಹಕ, ಅತ್ಯದ್ಭುತ ಕುಂಚಕಲಾವಿದ, ಕಾಲಿಗೆ ಚಕ್ರಗಳನ್ನು ಕಟ್ಟಿಕೊಂಡು ಪ್ರಪಂಚ ಪರ್ಯಟನೆ ಮಾಡಿದ ಪ್ರವಾಸಿ, ಬುಡಕಟ್ಟು ಲೋಕದರ್ಶಕ… ಏನೆಂದು ಪರಿಚಯಿಸುವುದು ಸೂಕ್ಷ್ಮಾತಿ ಸೂಕ್ಷ್ಮಗಳನ್ನು ಸರಳವಾಗಿ ಅರ್ಥವಾಗುವ ಹಾಗೆ ತಮ್ಮದೇ ಧಾಟಿಯಲ್ಲಿ ಓದುಗರಿಗೆ ದಾಟಿಸುವ ಅಪೂರ್ವ ಪ್ರತಿಭೆ. ಕೃಷ್ಣಾನಂದ ಕಾಮತರ ಆಸಕ್ತಿಯ ಕ್ಷೇತ್ರ ಹಲವು. ಕೀಟಗಳನ್ನು ನೋಡಿ ಅವರ ಹೃದಯ ಮೀಟುತ್ತದೆ. ಇರುವೆಯ ಇರವನ್ನು ಗುರುತಿಸಿ, ಅದರ ಜೀವನ ವಿಧಾನ ಕರಾರುವಾಕ್ಕಾಗಿ ದಾಖಲಾಗುತ್ತದೆ. ಕಣ್ಣಲ್ಲಿ ಕಣ್ಣಿಟ್ಟು ಕಾದು ಕುಳಿತು ಕಾಗೆಯ ಕತೆ ರೂಪುಗೊಳ್ಳುತ್ತದೆ... ಹೀಗೆ ಹತ್ತು ಹಲವು ವಿಚಾರಗಳ ಮೂಲಕ ಕೃಷ್ಣಾನಂದ ಕಾಮತರು ವೈಚಾರಿಕ ಪ್ರಜ್ಞೆಯಾಗಿ ಸದಾ ನಮ್ಮೊಡನಿದ್ದಾರೆ. ಅವರು ಬರೆದ ನಾನೂ ಅಮೇರಿಕೆಗೆ ಹೋಗಿದ್ದೆ ಪ್ರವಾಸ ಕಥನ ಮೂರು ಮುದ್ರಣಗಳನ್ನು ಕಂಡು ಏಳನೆಯ ಮುದ್ರಣವಾಗಿ ನಿಮ್ಮ ಕೈ ಸೇರಿದೆ. ಪ್ರವಾಸಕಥನಗಳಿಗೆ ಮಾದರಿಯೆನಿಸುವ ಈ ಕೃತಿಯನ್ನು ಮೈಸೂರು ವಿಶ್ವವಿದ್ಯಾಲಯದ ಬಿಕಾಂ ಮತ್ತು ಬಿಬಿಎಂ ಪದವಿಯ ಮೂರನೇ ಸೆಮಿಸ್ಟರ್‌ಗೆ ಪಠ್ಯವಾಗಿಸುವ ಮೂಲಕ ತಡವಾಗಿ ಆದರೂ ಕೃಷ್ಣಾನಂದ ಕಾಮತರಿಗೆ ತೋರುವ ಗೌರವವಾಗಿದೆ ಎಂದು ಕೃತಿಯಲ್ಲಿ ವಿಶ್ಲೇಷಿಸಲಾಗಿದೆ.
©2024 Book Brahma Private Limited.