‘ನಾಲ್ದೇರಾ’ ಲೇಖಕ ಶಿವಕುಮಾರ ಕಟ್ಟೆ ಅವರ ಪ್ರವಾಸ ಕಥನ. ವಿವಿಧ ರಾಜ್ಯಗಳಲ್ಲಿ ಪ್ರವಾಸ ಕೈಗೊಂಡಿದ್ದ ವೇಳೆ ತಾವು ಕಂಡ ದೃಶ್ಯಗಳು ಮತ್ತು ವಿಭಿನ್ನ ಅನುಭವಗಳನ್ನು ಅತ್ಯಂತ ಸುಂದರವಾಗಿ ಈ ಕೃತಿಯಲ್ಲಿ ದಾಖಲಿಸಿದ್ದಾರೆ. ಸಾಮಾನ್ಯ ವ್ಯಕ್ತಿಯೂ ಸುಲಭವಾಗಿ ಅರ್ಥ ಮಾಡಿಕೊಳ್ಳುವ ಸರಳ ಭಾಷೆಯಲ್ಲಿ ಕಥನವ ಶೈಲಿ ಇದೆ. ಅವರು ಪ್ರವಾಸದ ವೇಳೆ ವಿಶೇಷವಾಗಿ ಉತ್ತರ ಭಾರತದಲ್ಲಿ ಕಂಡ ಅತೀ ಸೌಂದರ್ಯದಿಂದ ಕೂಡಿದ ಪರ್ವತ ಪ್ರದೇಶವನ್ನು ಕೇಂದ್ರವಾಗಿಟ್ಟುಕೊಂಡು ನಾಲ್ದೇರಾ ಕೃತಿಯನ್ನು ರಚಿಸಿದ್ದಾರೆ.
ಲೇಖಕ ಶಿವಕುಮಾರ ಕಟ್ಟೆ ಅವರು ಮೂಲತಃ ಬೀದರ ಜಿಲ್ಲೆಯ ಔರಾದ್ ತಾಲೂಕಿನವರು. ನ್ಯಾಯಾಂಗ ಇಲಾಖೆ, ಕಾರ್ಮಿಕ ಇಲಾಖೆಯಲ್ಲಿ ಕೆಲಸ ಮಾಡಿ ಸದ್ಯ ಬೀದರ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದಾರೆ. ತಾವು ವಿದ್ಯಾರ್ಥಿ ಆಗಿದ್ದಾಗಲೇ ಅವರು ‘ನೆನಪು’ ಕವನ ಸಂಕಲನ ಪ್ರಕಟಿಸಿದ್ದರು. ಕೃತಿಗಳು: ಅಂತಃಪುರ, ಕನ್ನಡ ಡಿಂ ಡಿಂ, ಔರಾದ ತಾಲೂಕು ದರ್ಶನ, ಸಾಹಿತ್ಯ ಸಮ್ಮೇಳನಾಧ್ಯಕ್ಷರ ಭಾಷಣಗಳು ಪ್ರಕಟವಾಗಿವೆ. ನಾಲ್ದೇರಾ ಎಂಬ ಪ್ರವಾಸ ಕಥನ ಪ್ರಕಟಗೊಂಡಿದೆ. 2014ರಲ್ಲಿ ಔರಾದ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರು, 2019ರಲ್ಲಿ ಮಂದಾರ ಕಲಾವಿದರ ವೇದಿಕೆಯ ರಾಜ್ಯಮಟ್ಟದ ರಜತ ಕವಿ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು. ಧರಿನಾಡ ಸಿರಿ, ಕವಿಭಾರ್ಗವ ಪ್ರಶಸ್ತಿಗಳ ...
READ MORE