ಕನ್ನಡ ಪ್ರವಾಸ ಸಾಹಿತ್ಯದಲ್ಲಿ ನಾಗತಿಹಳ್ಳಿ ಚಂದ್ರಶೇಖರ ಅವರದ್ದು ಪ್ರಖ್ಯಾತ ಹೆಸರು. ನನ್ನ ಗ್ರಹಿಕೆಯ ಅಲಾಸ್ಕ ಕೃತಿಯಂತೆ ನನ್ನ ಗ್ರಹಿಕೆಯ ಅಮೆರಿಕಾ ಅಮೆರಿಕಾ! ಅಮೆರಿಕಾ!! -ಈ ಪ್ರವಾಸ ಕೃತಿಯನ್ನು ರಚಿಸಿದ್ದು, ಇದನ್ನು ಆಧರಿಸಿ ಕನ್ನಡ ಚಲನಚಿತ್ರವೂ ನಿರ್ಮಿಸಲಾಯಿತು. ಸಾಹಿತ್ಯ ಹಾಗೂ ಕನ್ನಡ ಚಲನಚಿತ್ರ- ಹೀಗೆ ಎರಡೂ ಕಡೆ ಜನಮೆಚ್ಚುಗೆ ಗಳಿಸಿದ ಕೃತಿ ಇದು. ಅಮೆರಿಕಾ ಪ್ರವಾಸದಲ್ಲಿ ತಾವು ಕಂಡು, ತಿಳಿದ ಅನುಭವಗಳನ್ನು ಇಲ್ಲಿ ಕಟ್ಟಿಕೊಟ್ಟಿದ್ದಾರೆ. ತಮ್ಮ ಸೂಕ್ಷ್ಮ ಅನುಭವಗಳಿಗೆ ಬರೆಹ ಹಾಗೂ ಚಲನಚಿತ್ರಕ್ಕೆ ಉತ್ತಮ ಅಭಿವ್ಯಕ್ತಿ ನೀಡಿದ್ದಾರೆ.
ನಾಗತಿಹಳ್ಳಿ ಚಂದ್ರಶೇಖರ್ ಮೂಲತಃ ಮಂಡ್ಯ ಜಿಲ್ಲೆಯ ನಾಗತಿಹಳ್ಳಿಯವರು. ತಂದೆ ತಿಮ್ಮಶೆಟ್ಟಿ ಗೌಡರು, ತಾಯಿ ಪಾರ್ವತಮ್ಮ. ಪ್ರಾರಂಭಿಕ ಶಿಕ್ಷಣವನ್ನು ತಮ್ಮಊರಾದ ನಾಗತಿಹಳ್ಳಿಯಲ್ಲಿ ಪಡೆದ ಅವರು ಮುಂದೆ ತಮ್ಮ ವಿದ್ಯಾಭ್ಯಾಸವನ್ನು ಮೈಸೂರಿನಲ್ಲಿ ಪೂರ್ಣಗೊಳಿಸಿದರು. ಸ್ನಾತಕೋತ್ತರ ಪದವಿಯನ್ನು ಹಲವಾರು ಸ್ವರ್ಣಪದಕಗಳೊಂದಿಗೆ ಗಳಿಸಿದ ಚಂದ್ರಶೇಖರ್ ತಮ್ಮ ಗ್ರಾಮ ನಾಗತಿಹಳ್ಳಿಯಲ್ಲಿ ‘ಅಭಿವ್ಯಕ್ತಿ ಸಾಂಸ್ಕೃತಿಕ ವೇದಿಕೆ’ಯನ್ನು ಆರಂಭಿಸಿದರು. ಜೊತೆಗೆ ಪ್ರತಿ ಯುಗಾದಿಯ ಸಂದರ್ಭದಲ್ಲಿ `ನಾಗತಿಹಳ್ಳಿ ಸಾಂಸ್ಕೃತಿಕ ಹಬ್ಬ’ಕ್ಕೆ ಸಹಾ ಚಾಲನೆ ನೀಡಿದರು. ಈ ವೇದಿಕೆಯ ಮೂಲಕ ಗ್ರಾಮದಲ್ಲಿ ಸುಸಜ್ಜಿತ ಗ್ರಂಥಾಲಯ, ರಂಗಮಂದಿರ, ಕಂಪ್ಯೂಟರ್ ಕೇಂದ್ರಗಳನ್ನು ತೆರೆಯುವ ಮೂಲಕ ಗ್ರಾಮೀಣ ಜನರ ಸಾಂಸ್ಕೃತಿಕ ಪ್ರಜ್ಞೆಯನ್ನು ಜಾಗೃತಿಗೊಳಿಸುವ ಕೆಲಸವನ್ನು ...
READ MORE