ಹಿರಿಯ ಸಾಹಿತಿ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಪ್ರವಾಸ ಕಥನ-ಅಮೆರಿಕಾದಲ್ಲಿ ಗೊರೂರ.. 1977ರ ಆಗಸ್ಟ್ ನಲ್ಲಿ ಪತ್ನಿ ಸಮೇತ ಅಮೆರಿಕಾ ಪ್ರವಾಸ ಕೈಗೊಂಡಿದ್ದ ಅವರಿಗೆ ಆಗ 80 ವರ್ಷ ವಯಸ್ಸು. ಕೆನಡಾ, ದೇಶವನ್ನು ಸುತ್ತಿದ ರೀತಿ, ಪಡೆದ ಅನುಭವಗಳು, ನಂಬಿಕೊಂಡು ಬಂದಿದ್ದ ಕೆಲ ತತ್ವಗಳನ್ನು ಪಾಲಿಸಿದ ಪರಿ ಎಲ್ಲವೂ ಸವಿವರವಾಗಿ ದಾಖಲಿಸಿದ್ದಾರೆ. ಅಲ್ಲಿಯ ಜನರ ನಂಬಿಕೆ, ರೀತಿ ನೀತಿ ಎಲ್ಲವನ್ನೂ ವಿಶ್ಲೇಷಿಸುವಾಗ ಎಲ್ಲಿಯೂ ಪೂರ್ವಗ್ರಹ ನುಸುಳುವುದಿಲ್ಲ. ಅತ್ಯಂತ ಸಮತೂಕದಲ್ಲಿ ವಸ್ತುಸ್ಥಿತಿಯನ್ನು ಕಾಣಿಸುತ್ತಾರೆ. ಕನ್ನಡದಲ್ಲಿ ಬಂದ ಪ್ರವಾಸ ಕಥನಗಳಲ್ಲೇ ಹೆಚ್ಚು ಪರಿಣಾಮಕಾರಿಯಾದ ಕೃತಿ ಎಂದು ಹೇಳಲಾಗಿದೆ.
ಗಾಂಧಿವಾದಿ ಮತ್ತು ಸ್ವಾತಂತ್ರ್ಯ ಹೋರಾಟಗಾರರಾದ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಕನ್ನಡದ ಜನಪ್ರಿಯ ಸಾಹಿತಿಗಳಲ್ಲಿ ಒಬ್ಬರಾಗಿದ್ದರು. ಗೊರೂರು ಗ್ರಾಮದಲ್ಲಿ 1904ರ ಜುಲೈ 4ರಂದು ಜನಿಸಿದರು. ತಂದೆ ಶ್ರೀನಿವಾಸ ಅಯ್ಯಂಗಾರ್ ತಾಯಿ ಲಕ್ಷ್ಮಮ್ಮ. ಗೊರೂರಿನಲ್ಲಿ ಪ್ರಾಥಮಿಕ ಶಾಲಾ ಶಿಕ್ಷಣವನ್ನು ಮುಗಿಸಿದ ಮೇಲೆ ಹಾಸನದಲ್ಲಿ ಪ್ರೌಢಶಾಲಾ ಶಿಕ್ಷಣ ಪಡೆಯುತ್ತಿದ್ದಾಗಲೇ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದರು. ಅನಂತರ ಗುಜರಾತ್ ಗಾಂಧಿ ಆಶ್ರಮದಲ್ಲಿದ್ದ ವಿದ್ಯಾ ಪೀಠದಲ್ಲಿ ಓದು ಮುಂದುವರೆಸಿದರು. ಅನಂತರ ಪತ್ರಿಕಾರಂಗ ಪ್ರವೇಶಿಸಿದರು. ಮದರಾಸಿನ `ಲೋಕಮಿತ್ರ’ ಆಂಧ್ರ ಪತ್ರಿಕೆ `ಭಾರತಿ’ ಪತ್ರಿಕೆಗಳಲ್ಲಿ ಉಪಸಂಪಾದಕರಾಗಿ, ಸಂಪಾದಕರಾಗಿ ಸೇವೆ ಸಲ್ಲಿಸಿದರು. 1952ರಲ್ಲಿ ವಿಧಾನಸಭೆಗೆ ನಾಮಕರಣಗೊಂಡಿದ್ದ ಅವರು ಅದಕ್ಕೂ ...
READ MORE