ಇಂಗ್ಲೆಂಡಿನ ರಾಜ ರಾಣಿಯರ ಕಥೆಗಳು

Author : ಆಗುಂಬೆ ಎಸ್. ನಟರಾಜ್‌

Pages 342

₹ 250.00




Year of Publication: 2019
Published by: ಎಎಸ್‌ಬಿ ಮೆಮೋರಿಯಲ್‌ ಟ್ರಸ್ಟ್
Address: #947, 1ನೇ ಮಹಡಿ, 3ನೇ ಮುಖ್ಯ ರಸ್ತೆ, ವಿಜಯನಗರ, ಬೆಂಗಳೂರು
Phone: 9481423004

Synopsys

ಲಂಡನ್ ನಗರದ ಪ್ರವಾಸ ಕೈಗೊಂಡಿದ್ದ ಲೇಖಕರು ಪ್ರಸಿದ್ಧ ಬಕಿಂಗ್ ಹ್ಯಾಮ್‌ ಅರಮನೆಯ ವಿಶೇಷತೆ, ಇತಿಹಾಸವನ್ನು ತಿಳಿದು, ಬ್ರಿಟಿಷ್ ಚಕ್ರಾಧಿಪತ್ಯವನ್ನು ಆಳಿ, ಮೆರೆದ ಬ್ರಿಟಿಷ್ ರಾಜ ರಾಣಿಯರ ಜೀವನಚರಿತ್ರೆಯನ್ನು ಇಲ್ಲಿ ದಾಖಲಿಸಿದ್ದಾರೆ.

ಇಂಗ್ಲೆಂಡಿನ ವೈಶಿಷ್ಟ್ಯವೆಂದರೆ, ಅಲ್ಲಿ ರಾಜಪ್ರಭುತ್ವ ಮತ್ತು ಪ್ರಜಾಪ್ರಭುತ್ವ ಹಾಸು ಹೊಕ್ಕಾಗಿವೆ. Monarchy ಮತ್ತು Democracy ಒಟ್ಟೊಟ್ಟಿಗೆ ಸಹವರ್ತಿಗಳಾಗಿ ದೇಶವನ್ನು ಆಳುತ್ತಿವೆ. ಇಂಗ್ಲೆಂಡನ್ನು ಆಕ್ರಮಿಸಿ ಆಳಿದ ಫ್ರೆಂಚ್ ರಾಜ ವಿಲಿಯಮ್ ದಿ ಕಾನ್ ಖ್ವರರ್ ನಿಂದ ಹಿಡಿದು ಎರಡನೆಯ ಎಲಿಝಬೆತ್ ರಾಣಿಯವರೆಗಿನ ಕಥಾಪುಂಜವನ್ನು ಈ ಪುಸ್ತಕದಲ್ಲಿ ಸವಿಸ್ತಾರವಾದ ವಿವರಗಳಿವೆ. ಇಂಗ್ಲೆಂಡ್ ನ ರಾಜ ರಾಣಿಯರು ಆಡಳಿತ, ತಮ್ಮ ಶೌರ್ಯ, ಪ್ರತಾಪ, ಕುಟಿಲತೆ, ಕ್ರೂರತೆ, ರಾಜಕೀಯ ಕುಶಲತೆ, ಪರರಾಷ್ಟ್ರಗಳ ವಿರುದ್ಧ ಜರುಗಿಸಿದ ಆಕ್ರಮಣಕಾರಿ ಯುದ್ಧಗಳು, ದುರಾಕ್ರಮಣಗಳು, ಹತ್ಯೆಗಳು, ಪಿತೂರಿಗಳು ಮುಂತಾದ ಐತಿಹಾಸಿಕ ಸಂಗತಿಗಳು ರೋಚಕ ಹಾಗೂ ಮನರಂಜನೆಯಿಂದ ಕೂಡಿದೆ.

About the Author

ಆಗುಂಬೆ ಎಸ್. ನಟರಾಜ್‌
(20 November 1939)

ಲೇಖಕ ನಟರಾಜ್, 1939 ನವೆಂಬರ್‌ 20 ರಂದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಹುಟ್ಟಿದರು. ತಂದೆ ಎ. ಎಸ್. ಭಟ್, ತಾಯಿ ಲಕ್ಷ್ಮಮ್ಮ. ಕಾಲೇಜು ದಿನಗಳಿಂದಲೂ ಸಾಹಿತ್ಯದ ಬಗ್ಗೆ ಒಲವಿದ್ದು, ನಿವೃತ್ತಿಯ ನಂತರ ಈಗ ಪೂರ್ಣ ಪ್ರಮಾಣದ ಬರಹಗಾರರು. ಸದಾ ಒಂದಿಲ್ಲೊಂದು ಕಡೆ ಪ್ರವಾಸ ಅಥವಾ ಬಿಡುವಿನ ವೇಳೆಯಲ್ಲಿ ಸಾಹಿತ್ಯ ರಚನೆಯಲ್ಲಿ ತೊಡಗುತ್ತಾರೆ. ಅವರ ಪ್ರವಾಸಾನುಭವದ ಲೇಖನಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ‘ಬಾತುಕೋಳಿ’ ಮತ್ತು ‘ಆತಂಕ’ ಎಂಬ ಎರಡು ಕಾದಂಬರಿಗಳು. ‘ಚಕ್ಕಂದ’ ಎಂಬ ಹನಿಗವನ ಸಂಕಲನ, ‘ರಸನಿಮಿಷ’ ಎಂಬ ಹಾಸ್ಯಕಥೆಗಳ ಸಂಗ್ರಹ. ‘ರಸ ವೈಚಾರಿಕತೆ’ ಎಂಬ ವೈಚಾರಿಕ ...

READ MORE

Related Books