ದಕ್ಷಿಣ ಧ್ರುವದಿಂ

Author : ನಾಗತಿಹಳ್ಳಿ ಚಂದ್ರಶೇಖರ್‌

Pages 76

₹ 60.00




Year of Publication: 2004
Published by: ಅಭಿವ್ಯಕ್ತಿ ಸಾಂಸ್ಕೃತಿಕ ವೇದಿಕೆ
Address: Abhivyakti Samskruthika Vedike, No 166, 28th cross, 17th Main, BSK 2nd Stage, Bengaluru-560070
Phone: 080-26712230/ 9845878899

Synopsys

ನ್ಯೂಜಿಲ್ಯಾಂಡ್ ಹಾಗೂ ಆಸ್ಟ್ರೇಲಿಯಾದಂತಹ ದಕ್ಷಿಣ ಧ್ರುವದ ಈ ದೇಶಗಳಿಗೆ ತೆರಳಿ, ಲೇಖಕ ನಾಗತಿಹಳ್ಳಿ ಚಂದ್ರಶೇಖರ ಅವರು ತಮ್ಮ ಅನುಭವಗಳನ್ನು ದಾಖಲಿಸಿದ ಕೃತಿ ಇದು. ಮನಮೋಹಕವಾದ ನ್ಯೂಜಿಲ್ಯಾಂಡ್, ಅಲ್ಲಿಯ ಹಸಿರು, ಕಾಡು, ಬೆಟ್ಟ, ಕಣಿವೆ, ಬಿಸಿ ನೀರಿನ ಬುಗ್ಗೆಗಳು ಕಿವಿ ಪಕ್ಷಿ, ಪೆಂಗ್ವಿನ್ -ಸಮುದ್ರ ಪ್ರಾಣಿ, ಅಸಂಖ್ಯಾತ ಸಸ್ಯ ಸಂಕುಲ ಹೀಗೆ ಎಲ್ಲವನ್ನೂ ಅಕ್ಷರಕ್ಕೆ ಇಳಿಸಿದ್ದಾರೆ. ಈ ದೇಶಗಳ ಸೌಂದರ್ಯವನ್ನು ಲೇಖಕರು ’ಸಜೀವ ಸುರಮ್ಯ ವರ್ಣಚಿತ್ರ’ ಎಂದೇ ವರ್ಣಿಸಿದ್ದಾರೆ.

About the Author

ನಾಗತಿಹಳ್ಳಿ ಚಂದ್ರಶೇಖರ್‌
(15 August 1958)

ನಾಗತಿಹಳ್ಳಿ ಚಂದ್ರಶೇಖರ್ ಮೂಲತಃ ಮಂಡ್ಯ ಜಿಲ್ಲೆಯ ನಾಗತಿಹಳ್ಳಿಯವರು. ತಂದೆ ತಿಮ್ಮಶೆಟ್ಟಿ ಗೌಡರು, ತಾಯಿ ಪಾರ್ವತಮ್ಮ. ಪ್ರಾರಂಭಿಕ ಶಿಕ್ಷಣವನ್ನು ತಮ್ಮಊರಾದ ನಾಗತಿಹಳ್ಳಿಯಲ್ಲಿ ಪಡೆದ ಅವರು ಮುಂದೆ ತಮ್ಮ ವಿದ್ಯಾಭ್ಯಾಸವನ್ನು ಮೈಸೂರಿನಲ್ಲಿ ಪೂರ್ಣಗೊಳಿಸಿದರು. ಸ್ನಾತಕೋತ್ತರ ಪದವಿಯನ್ನು ಹಲವಾರು ಸ್ವರ್ಣಪದಕಗಳೊಂದಿಗೆ ಗಳಿಸಿದ ಚಂದ್ರಶೇಖರ್ ತಮ್ಮ ಗ್ರಾಮ ನಾಗತಿಹಳ್ಳಿಯಲ್ಲಿ ‘ಅಭಿವ್ಯಕ್ತಿ ಸಾಂಸ್ಕೃತಿಕ ವೇದಿಕೆ’ಯನ್ನು ಆರಂಭಿಸಿದರು. ಜೊತೆಗೆ ಪ್ರತಿ ಯುಗಾದಿಯ ಸಂದರ್ಭದಲ್ಲಿ `ನಾಗತಿಹಳ್ಳಿ ಸಾಂಸ್ಕೃತಿಕ ಹಬ್ಬ’ಕ್ಕೆ ಸಹಾ ಚಾಲನೆ ನೀಡಿದರು. ಈ ವೇದಿಕೆಯ ಮೂಲಕ ಗ್ರಾಮದಲ್ಲಿ ಸುಸಜ್ಜಿತ ಗ್ರಂಥಾಲಯ, ರಂಗಮಂದಿರ, ಕಂಪ್ಯೂಟರ್ ಕೇಂದ್ರಗಳನ್ನು ತೆರೆಯುವ ಮೂಲಕ ಗ್ರಾಮೀಣ ಜನರ ಸಾಂಸ್ಕೃತಿಕ ಪ್ರಜ್ಞೆಯನ್ನು ಜಾಗೃತಿಗೊಳಿಸುವ ಕೆಲಸವನ್ನು ...

READ MORE

Related Books