ʼಕುಲು ಕಣಿವೆಯಲ್ಲಿʼ ಲೇಖಕ ಜಿ.ಪಿ.ಬಸವರಾಜು ಅವರ ಪ್ರವಾಸ ಕಥನ. ಹಿಮಾಲಯದ ತಪ್ಪಲಿನ ನಿವಾಸಿಗಳ ವಿವರ ನೀಡುತ್ತ ಅವರ ಬದುಕಿನ ಕಷ್ಟ-ನಷ್ಟ-ಬವಣೆಗಳತ್ತ ಒಂದು ಸೂಕ್ಷ್ಮ ನೋಟ ಹರಿಸಿಯೇ ಎಲ್ಲ ಸೌಂದರ್ಯಾನುಭೂತಿ, ಚಾರಣದ ನೋವು-ನಲಿವುಗಳು, ಪ್ರಕೃತಿ-ಪರಿಸರದ ಏರುಪೇರುಗಳು, ಹಕ್ಕಿಪಿಕ್ಕಿಗಳು, ಹಿಮ-ಮಳೆ-ಗುಡುಗು-ಮಿಂಚು-ಬಿಸಿಲು, ಹೂವು ಹುಲ್ಲುಗಳ ಕಡೆ ನಮ್ಮ ಮನಸ್ಸು ಕೊಂಡೊಯ್ಯುತ್ತಾರೆ ಲೇಖಕರು. ಚಾರಣಿಗನಾಗಿ ತಮ್ಮ ಅನುಭವ, ಉತ್ಸಾಹ, ಸಡಗರ ಅದೇನೇ ಇರಲಿ, ಲೇಖಕ ಬಸವರಾಜು ಅವರು ತಮ್ಮ ಸೂಕ್ಷ್ಮವಾದ ಅವಲೋಕನ ಪ್ರಜ್ಞೆಯಿಂದ ಅಲ್ಲಿಯೇ ಬದುಕು ಭವಿಷ್ಯ ಅರಸುತ್ತಿರುವ ಬಡ ಮಂದಿಯ ನೋವು ನಲಿವಿನ, ಬವಣೆಯ ಕುರಿತು ಸ್ಪಂದಿಸದೇ ಮುಂದಡಿಯಿಡುವುದಿಲ್ಲ ಎನ್ನುವಲ್ಲೇ ಈ ಚಾರಣ ಕಥನದ ಹೆಚ್ಚುಗಾರಿಕೆ ಇದೆ. ಮಾನವೀಯ ನೆಲೆಗಟ್ಟಿನಲ್ಲಿ ನಮ್ಮೊಳಗಿನ ಮನುಷ್ಯನನ್ನು ಜೀವಂತಗೊಳಿಸುತ್ತ ಸಾಗುವ ಈ ಕಥನ ಈ ಕಾರಣಕ್ಕೇ ಹೆಚ್ಚು ಆಪ್ತವಾಗುತ್ತದೆ.
©2024 Book Brahma Private Limited.