‘ಒಂದು ಕನಸಿನ ಪಯಣ’ ಖ್ಯಾತ ಲೇಖಕಿ ನೇಮಿಚಂದ್ರ ಅವರ ಪ್ರವಾಸ ಕಥನ. 1999 ರಲ್ಲಿ ಪ್ರಥಮ ಮುದ್ರಣ ಕಂಡ ಈ ಕೃತಿ 2021ರಲ್ಲಿ ಮರುಮುದ್ರಣಗೊಂಡಿದೆ. ಇದು ನನ್ನ ಕನಸಿನ ಪಯಣದ ಕತೆ ಎಂದು ತಮ್ಮ ಈ ಕೃತಿಯ ಪ್ರಥಮ ಮುದ್ರಣಕ್ಕೆ ಅರ್ಥಪೂರ್ಣವಾದ ಪ್ರವೇಶಿಕೆಯನ್ನು ಲೇಖಕಿ ನೇಮಿಚಂದ್ರ ಅವರು ಬರೆದಿದ್ದರು. ಜೊತೆಗೆ ಇದು ಕೇವಲ ಊರು ಸುತ್ತಿಬಂದ ಪ್ರವಾಸ ಕಥನವಾಗಿ ಮುಗಿಯದೆ, ಧಾರಾಳವಾಗಿ ಉಪಕತೆಗಳನ್ನೂ ಒಳಗೊಂಡಿದೆ. ಅದು, ಸ್ತ್ರೀವಾದಿ ಲೇಖಕಿ ಆಫ್ರಾಳ ಕತೆಯಾಗಿರಬಹುದು, ವಿಜ್ಞಾನಿ ರೋಸಲಿಂಡ್ ಳ ಕತೆ, ಖಗೋಳಶಾಸ್ತ್ರಜ್ಞೆ ಕ್ಯಾರೊಲಿನ್ ಹರ್ಷಲ್ ಕತೆಯಾಗಿರಬಹುದು, ದಟ್ಟ ಏಕಾಂಗಿತನದ ಬ್ರಾಂಟೆಯ ಬೋಡು ಬೆಟ್ಟಗಳಾಗಿರಬಹುದು, ಐನ್ ಸ್ಟೈನ್ ರ ಪತ್ನಿಯ ವಿವರಗಳಾಗಿರಬಹುದು, ಅವೆಲ್ಲವುಗಳ ಒಂದಿಷ್ಟು ವಿವರಗಳನ್ನಿಲ್ಲಿ ಸೇರಿಸದೆ ನನ್ನ ಪ್ರವಾಸ ಕಥನ ಪೂರ್ಣವಾಗುತ್ತಿರಲಿಲ್ಲ ಎನ್ನುತ್ತಾರೆ.
'ಒಂದು ಕನಸಿನ ಪಯಣ' ನೇಮಿಚಂದ್ರ ಅವರ ಪ್ರಥನ ಪ್ರವಾಸದ ಕಥನವಾಗಿದ್ದು ಸುಮಾರು ಕಾಲು ಶತಮಾನದ ಹಿಂದೆ ಮಹಿಳೆಯರಿಬ್ಬರು, ತಮ್ಮಂತೆ ತಾವು ಇಂಗ್ಲೆಂಡ್ ಮತ್ತು ಯುರೋಪನ್ನು ಅಲೆದು ಬಂದ ರೋಮಾಂಚನದ ಕತೆ ಇಲ್ಲಿದೆ. ಅಲ್ಪ ಹಣದಲ್ಲಿ ಅಗಾಧ ಅನುಭವಗಳನ್ನು ಜೋಳಿಗೆಯಲ್ಲಿ ಹೊತ್ತು ಬಂದ ಲೇಖಕಿ ‘ಕನಸು ಕಂಡರೆ ಸಾಕು, ಹಾರಲಿಕ್ಕೆ ರೆಕ್ಕೆಗಳು ಮೊಳೆಯುತ್ತವೆ’ ಎನ್ನುತ್ತಾರೆ.
‘ಒಂದು ಕನಸಿನ ಪಯಣ’ ಕೃತಿಯ ಕುರಿತು ಲೇಖಕಿ ನೇಮಿಚಂದ್ರ ಅವರ ಮಾತುಗಳು.
©2024 Book Brahma Private Limited.