ಲೇಖಕ, ಸಾಹಿತಿ ನಿಡಸಾಲೆ ಪುಟ್ಟಸ್ವಾಮಯ್ಯ ಅವರ ಪ್ರವಾಸ ಕಥನ-ಹಳ್ಳಿ ಹದನ ವಿದೇಶ ಪ್ರವಾಸ (ದುಬೈ-ಚೀನಾ) ಭಾಗ-2. ಕಥೆ, ಕಾದಂಬರಿ, ನಾಟಕಗಳನ್ನು ಬರೆದ ಲೇಖಕರು ಪ್ರವಾಸ ಕಥನವನ್ನೂ ಬರೆದು ಸಾಹಿತ್ಯ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಅವರು ದುಬೈ ಹಾಗೂ ಚೀನಾ ದೇಶಗಳಿಗೆ ಕೈಗೊಂಡ ಪ್ರವಾಸದ ಕಥನವಿದು. ಕೃತಿಗೆ ಬೆನ್ನುಡಿ ಬರೆದ ಲೇಖಕಿ ತ್ರಿವೇಣಿ ಶಿವಕುಮಾರ್ ‘ಮೆಟ್ರೋ ರೈಲಿನ ಒಳಗಿನಿಂದ ದುಬೈನ ಎತ್ತರದ ಕಟ್ಟಡಗಳನ್ನು ನೋಡುತ್ತಿದ್ದರೆ ಮೈ-ಕಣ್ಣು ತೆರೆದ ಬಾಯಿಯನ್ನು ಮುಚ್ಚುವುದನ್ನೇ ಮರೆಯುತ್ತೇವೆ’ ಎಂದು ಶೈಲಿಯನ್ನು ಪ್ರಶಂಸಿಸಿದ್ದರೆ, ಲೇಖಕ ಟಿ.ಎಸ್. ನಾಗರಾಜ್ ಅವರು ‘ಚೀನಾದ ಹಳೆಯ ಸ್ಮಾರಕಗಳು, ಹಳೆಯ ಗೋಡೆ ಇತ್ಯಾದಿ ಕುರಿತ ವಿವರಣೆಗಳು ಅತಿಶಯೋಕ್ತಿಯೂ ಅಲ್ಲ; ಅನವಶ್ಯಕವೂ ಅನ್ನಿಸುವುದಿಲ್ಲ’ ಎಂದು ಇಲ್ಲಿಯ ಬರಹದ ಆಕರ್ಷಕ ರೀತಿಯನ್ನು ಪ್ರಶಂಸಿಸಿದ್ದಾರೆ.
ಲೇಖಕ ನಿಡಸಾಲೆ ಪುಟ್ಟಸ್ವಾಮಯ್ಯ ಅವರು ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ನಿಡಸಾಲೆ (ಜನನ: 05-02-1951) ಗ್ರಾಮದವರು. ತಂದೆ- ಮುಳವಾಗಲಯ್ಯ, ತಾಯಿ- ನಿಂಗಮ್ಮ. ನಿಡಸಾಲೆಯಲ್ಲಿ ಪ್ರಾಥಮಿಕ, ಹುಲಿಯೂರುದುರ್ಗದಲ್ಲಿ ಪ್ರೌಢಶಾಲೆಯವರೆಗೆ ವ್ಯಾಸಂಗ ಪೂರ್ಣಗೊಳಿಸಿದರು. 1968ರಲ್ಲಿ ಬೆಂಗಳೂರಿನ ಐ.ಟಿ.ಐ.ನಲ್ಲಿ ತರಬೇತಿ ಪಡೆದು, 1969ರಿಂದ ಕೃಷಿ ಇಲಾಖೆಯಲ್ಲಿ ಉದ್ಯೋಗ ಆರಂಭಿಸಿದರು. ರೇಣುಕಾಚಾರ್ಯ ಸಂಜೆ ಕಾಲೇಜಿನಲ್ಲಿ ಪಿ.ಯು.ಸಿ ತೇರ್ಗಡೆ ಯಾಗಿ ಬಿ.ಕಾಂ.ಗೆ ಸೇರ್ಪಡೆಯಾದರು. ಹಿರಿಯ ಸಾಹಿತಿ ಬಿ.ಜಿ. ಸತ್ಯಮೂರ್ತಿಯವರ ಒಡನಾಟದಲ್ಲಿ 1971ರಿಂದ ಸಾಹಿತ್ಯ ಕೃಷಿ ಆರಂಭಿಸಿದ ಅವರು ಸಣ್ಣ ಕಥೆ, ನಾಟಕ, ಕಾದಂಬರಿ ಸೇರಿದಂತೆ ಸಾಹಿತ್ಯ ವಿವಿಧ ಪ್ರಕಾರಗಳಲ್ಲಿ ಕೃತಿ ರಚಿಸಿದ್ದಾರೆ. ಕೃತಿಗಳು: ಗೊಲ್ಲಳ್ಳಿ ತೋಟ’, ‘ಸಾಧನೆಯ ...
READ MORE