"ಯೂರೋಪ್ ಯಾತ್ರೆ" ಪ್ರವಾಸ ಕಥನದ ಲೇಖಕರಾದ ಮಂಜುಳಾ ರಾಜ್ ಪತಿಯೊಂದಿಗೆ ಯೂರೋಪ್ ಗೆ ಹೋದ ಅನುಭವಗಳ ಲೇಖನಗಳನ್ನು ಸುಧಾ, ತರಂಗ, ಗೃಹಶೋಭ, ಪ್ರಿಯಾಂಕ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದವು. ಪ್ರಕಟಿತ ಲೇಖನಗಳ ಸಂಗ್ರಹವೇ ಯೂರೋಪ್ ಯಾತ್ರೆ ಪುಸ್ತಕ ರೂಪದಲ್ಲಿ ಬಂದಿದೆ. ಲೇಖಕಿ ಯೂರೋಪ್ ಪ್ರವಾಸಕ್ಕೆ ತಮ್ಮ ಯಜಮಾನರೊಂದಿಗೆ ಹಲವಾರು ದೇಶಗಳನ್ನು ಸುತ್ತಿ ಅಲ್ಲಿಯ ಮಹತ್ವದ ಅಂಶಗಳನ್ನು ಓದುಗರಿಗೆ ನೀಡಿದ್ದಾರೆ. ಹನ್ನೆರಡು ಅಧ್ಯಾಯಗಳಲ್ಲಿ ಸಚಿತ್ರಗಳೊಂದಿಗೆ ಮಾಹಿತಿ ನೀಡಿದ್ದಾರೆ. ಮೊದಲು ಕಾಲಿಟ್ಟ ದೇಶವೆಂದರೆ ಜರ್ಮನಿ. ಜರ್ಮನಿಯ ಪ್ರಾಂಕ್ ಫರ್ಟ್ ನಗರದಿಂದ ಇವರ ಪ್ರವಾಸ ಪ್ರಾರಂಭವಾಗುತ್ತದೆ. ಜರ್ಮನಿಯ ನೆಕರ್ ನದಿ, ಡ್ರುಬ್ನಾದಲ್ಲಿನ ಕೂಕೂ ಗಡಿಯಾರ, ಹೈಡಲ್ ಬರ್ಗ್ ಸೊಬಗಿನ ಬಗ್ಗೆ ಚೆನ್ನಾಗಿ ವಿವರಿಸಿದ್ದಾರೆ.
ಪ್ರವಾಸ ಸಾಹಿತ್ಯ ಬರವಣಿಗೆಯಲ್ಲಿ ಓದುಗರನ್ನು ಆಕರ್ಷಿಸುವ ಮಂಜುಳಾ ರಾಜ್ ಅವರು ಹವ್ಯಾಸಿ ಪತ್ರಕರ್ತೆ. 1952 ಏಪ್ರಿಲ್ 29 ರಂದು ಚಿಕ್ಕಮಗಳೂರಿನಲ್ಲಿ ಜನಿಸಿದರು. ‘ಯುರೋಪ್ ಯಾತ್ರೆ-2007, ಒಳಾಂಗಣ ವಿನ್ಯಾಸ, ಭೂಮಿಕಾ, 'ಶಿಕ್ಷಣ' ಒಂದು ನೋಟ, ಅಮೆರಿಕ ಪ್ರವಾಸ ಕಥನ, ಅಮೆರಿಕ-ಅಮೆರಿಕ, 'ಮನೆ' ಒಳಾಂಗಣ ವಿನ್ಯಾಸ’ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಯೂನಿಸೆಫ್ ಎಚ್.ಐ.ವಿ.ಏಡ್ಸ್, ಎಚ್.ಐ.ವಿ. ಬಗ್ಗೆ ಲೇಖನ ಬರೆಯಲು ಯೂನಿಸೆಫ್ ಸಂಸ್ಥೆಯಿಂದ ಅನುದಾನ ಪಡೆದಿದ್ದರು. ’ಅವೋಪಾ ಸಂಸ್ಥೆಯಿಂದ ಮಹಿಳಾ ಸಾಧಕಿ ಪ್ರಶಸ್ತಿ, ಕನ್ನಡ ಪತ್ರಿಕೋದ್ಯಮ ಪ್ರಶಸ್ತಿಗಳು’ ಸಂದಿವೆ. ...
READ MORE