ಲೇಖಕಿ ಬಿ.ವಿ. ಭಾರತಿ ಅವರ ಪ್ರವಾಸ ಕಥನ-'ನಕ್ಷತ್ರಗಳ ಸುಟ್ಟ ನಾಡಿನಲ್ಲಿ'. ಈ ಕೃತಿಯು ನಾಜಿಗಳ ಕ್ರೌರ್ಯ, ಯಹೂದಿಗಳ ಸಾವು- ನೋವುಗಳ ಇತಿಹಾಸವಿರುವ ಪೋಲೆಂಡ್ ದೇಶಕ್ಕೆ ಭೇಟಿ ನೀಡಿ ಅಲ್ಲಿಯ ತಮ್ಮ ಅನುಭವಗಳನ್ನು ಇಲ್ಲಿ ದಾಖಲಿಸಿದ್ದಾರೆ. ಆಕರ್ಷಕ ನಿರೂಪಣಾ ಶೈಲಿಯಿಂದ ಈ ಕೃತಿಯು ಓದುಗರ ಗಮನ ಸೆಳೆಯುತ್ತದೆ. ಇಲ್ಲಿ ಪಯಣಾಂಕುರ, ಈ ಹಿಟ್ಲರ್ ಕಾಲುಗುಣ ಸರಿಯಿಲ್ಲ ಕಣ್ರೀ, ಅಂತೂ ಇಂತೂ ಟೇಕಾಫ್, ನಾವು ಬಂದೆವಾ..ಪೋಲೆಂಡ್ ನೋಡಲಿಕ್ಕೆ, ಹುಚ್ಚು ಹಿಟ್ಲರನ ಹತ್ತು ಮುಖಗಳು, ಎಡವಟ್ಟಣ್ಣಯ್ಯನ ಊರಿನಲ್ಲಿ, ಜ್ಯೂಗಳ ವಠಾರದಲ್ಲಿ, ಇಷ್ಟು ಹೇಳಲೇಬೇಕಿತ್ತು, ಅತ್ಯಂದ ಆರಂಭ, ಜಗತ್ತಿನ ಅತಿ ದೊಡ್ಡ ಸ್ಮಶಾನ ಆಶ್ವಿಟ್ಜ್ ನಲ್ಲಿ, ಹಾಲೋಕಾಸ್ಟ್, ಶಿಂಡ್ಲರ್ ಎಂಬ ಅಪ್ಪಟ ಮನುಷ್ಯ, ವಾರ್ಸಾ ಎಂಬ ಫೀನಿಕ್ಸ್, ಕೋಟೆ ಕಟ್ಟಿ ಮೆರೆದೋರೆಲ್ಲ ಏನಾದರೂ, ಮುಗಿಯದ ಯುದ್ಧ, ದೋ ವಿದ್ಜೇನಿಯಾ ಪೋಲೆಂಡ್ ಎಂಬ ಹದಿನಾರು ಅನುಭವ ಕಥನಗಳು ಸಂಕಲನಗೊಂಡಿವೆ.
©2024 Book Brahma Private Limited.