ಶಿಕ್ಷಕನ ನೋಟದಲ್ಲಿ ಅಮೆರಿಕಾ-ಪ್ರವಾಸ ಕಥನ

Author : ಲಿಂಗರಾಜ ರಾಮಾಪೂರ

Pages 160

₹ 130.00




Year of Publication: 2018
Published by: ಶ್ರೀ ಚೂಡಾ ಪ್ರಕಾಶನ
Address: 275, ಎಪ್ 6, 4ನೆ ವೆಸ್ಟ್ ಕ್ರಾಸ್, ಉತ್ತರಾದಿಮಠ ರಸ್ತೆ, ಮೈಸೂರು-570004
Phone: 9740129274

Synopsys

 ಅಮೆರಿಕಾ ಪ್ರವಾಸವನ್ನು ಕೇಂದ್ರೀಕರಿಸಿ ಇದೀಗ ‘ಶಿಕ್ಷಕನ ನೋಟದಲ್ಲಿ ಅಮೆರಿಕಾ’ ಎಂಬ ಪ್ರವಾಸ ಕಥನವನ್ನು ಲೇಖಕ ಲಿಂಗರಾಜ ರಾಮಾಪೂರ ರಚಿಸಿದ್ದಾರೆ. ಶಾಲಾ ಶಿಕ್ಷಕರಾಗಿ ಅಮೆರಿಕಾದ ಪರಿಸರ, ವಿಜ್ಞಾನ, ಕೃಷಿ, ಸಾಮಾಜಿಕ ವ್ಯವಸ್ಥೆ, ರಾಜಕೀಯ ಅವಲೋಕನ, ಜನಜೀವನ, ಜನಮನದ ಸ್ಪಂದನೆಗಳು ಹೀಗೆ ಹಲವು ಆಯಾಮಗಳಲ್ಲಿ ತಮ್ಮ ಸುತ್ತಾಟದ ಅನುಭವವವನ್ನು ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. 

About the Author

ಲಿಂಗರಾಜ ರಾಮಾಪೂರ
(22 July 1978)

ಡಾ.ಲಿಂಗರಾಜ ರಾಮಾಪೂರ ವ್ರತ್ತಿಯಲ್ಲಿ ಶಿಕ್ಷಕರು. ಪ್ರವ್ರತ್ತಿಯಲ್ಲಿ ಬರಹಗಾರರು. ಪ್ರಸ್ತುತ ಹುಬ್ಬಳ್ಳಿ ತಾಲೂಕು ಕಿರೇಸೂರ ಸರಕಾರಿ ಪ್ರೌಢಶಾಲೆಯ ಆಂಗ್ಲ ಭಾಷೆಯ ಶಿಕ್ಷಕ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಕ್ಕಳ ಸಾಹಿತ್ಯದ ಎಲ್ಲ ಪ್ರಕಾರಗಳ ಕ್ರಷಿ ಮಾಡಿದ್ದಾರೆ. 25ಕೂ ಹೆಚ್ಚು ಕೃತಿ ರಚಿಸಿದ್ದಾರೆ. 200ಕೂ ಹೆಚ್ಚು ಲೇಖನ ಪ್ರಕಟಿಸಿದ್ದಾರೆ. ಹುಗ್ಗಿ ಅಂದ್ರ ಹಿಂಗೈತಿ, ಪುಟ್ಟರಾಜ, ಭೂಮಿ ಮಾರಾಟಕ್ಕಿಲ್ಲ, ನಿಸಗ೯ ನ್ಯಾಯ, ನೀರ್ ಬಾರ್ ಮಕ್ಕಳ ನಾಟಕ ಕೃತಿಗಳು. ಪರಿಸರದೊಳಗಿನ ಸತ್ಯದ ಮಾತು, ವಿಜ್ಞಾನದ ಬೆಳಕಿನಲ್ಲಿ ಇವು ಬರಹಗಳನ್ನೊಳಗೊಂಡ ಕೃತಿಗಳು. ಗುಬ್ಬಿಗೊಂದು ಮನೆ ಮಾಡಿ ಮಕ್ಕಳ ಕಾದಂಬರಿ. ಶಿಕ್ಷಕನ ನೋಟದಲ್ಲಿ ಅಮೇರಿಕಾ, ವಿಜ್ಞಾನದ ...

READ MORE

Reviews

ಶಿಕ್ಷಕನ ನೋಟದಲ್ಲಿ ಅಮೆರಿಕಾ-ಪ್ರವಾಸ ಕಥನದ ವಿಮರ್ಶೆ
ಡಾ.ಲಿಂಗರಾಜ ರಾಮಾಪೂರ ಅವರು ವೃತ್ತಿಯಿಂದ ಶಿಕ್ಷಕರಾದರೂ, ಸೃಜನಶೀಲರಾಗಿ ಮತ್ತು ಪ್ರಯೋಗಶೀಲರಾಗಿ, ಸಾಹಿತಿಯಾಗಿ, ಗುರುಪುರಸ್ಕಾರಕ್ಕೆ ಆಯ್ಕೆಯಾಗಿ, ಅಮೆರಿಕೆಯಲ್ಲಿರುವ ಶಾಲೆಗಳ ಅಧ್ಯಯನಕ್ಕಾಗಿ ಅಲ್ಲಿನ ಶೈಕ್ಷಣಿಕ ಸಂಪತ್ತನ್ನು ತುಲನಾತ್ಮಕವಾಗಿ ಅಭ್ಯಸಿಸುವುದರೊಂದಿಗೆ ಅಲ್ಲಿಯ ಪರಿಸರ, ವಿಜ್ಞಾನ, ಕೃಷಿ, ಸಾಮಾಜಿಕ ವ್ಯವಸ್ಥೆ, ರಾಜಕೀಯ ಅವಲೋಕನ, ಜನಜೀವನ, ಜನಮನದ ಸ್ಪಂದನೆಗಳನ್ನು ಪ್ರಸ್ತುತ ಕೃತಿ ‘ಶಿಕ್ಷಕನ ನೋಟದಲ್ಲಿ ಅಮೆರಿಕಾ’ ಪ್ರವಾಸ ಕಥನದಲ್ಲಿ ಸ್ವಾರಸ್ಯಕರವಾಗಿ ನಿರೂಪಿಸಿದ್ದಾರೆ.
ಟೆಕ್ಸಾಸ್ ರಾಜ್ಯದ ಆಸ್ಟಿನ್, ಡಾಲ್ಲಲ್, ಸ್ಯಾನ್ ಅಂಟಾನಿಯೋ ಹಾಗೂ ಹ್ಯೂಸ್ಟನ್ ನಗರಗಳ ಶಾಲೆಗಳು ಹಾಗೂ ಆಸ್ಟಿನ್ ನಗರದ ಟೆಕ್ಸಾಸ್ ವಿಶ್ವವಿದ್ಯಾಲಯದ ಶಿಕ್ಷಕ ತರಬೇತಿ ಕೇಂದ್ರ ‘ಯೂ ಟೀಚ್’ ಅಧ್ಯಯನ ನಡೆಸಿ ಕೆಲ ಶೈಕ್ಷಣಿಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ರಾಜ್ಯದ ಸರಕಾರಿ ಶಾಲೆಗಳ ಗುಣಮಟ್ಟ, ಹಾಜರಾತಿ ಬಗ್ಗೆ, ಶಾಲೆಗಳ ಹಾಗೂ ಶಿಕ್ಷಕರ ಗುಣಮಟ್ಟ, ಶಾಲೆಗಳಲ್ಲಿಯ ಸೌಲಭ್ಯಗಳು, ಶಿಕ್ಷಣ ನೀಡುವ ಪದ್ಧತಿನ ಮೆಚ್ಚಿಕೊಂಡಿದ್ದಾರೆ. ಭಾರತದಲ್ಲಿಯ ಸರಕಾರಿ ಶಾಲೆಗಳು ಎಮದು ಆ ಮಟ್ಟವನ್ನು ತಲುಪಬಲ್ಲವು ಎಂಬ ಪ್ರಾಮಾಣಿಕ ಕಳಕಳಿ ಹಾಗೂ ಕಳವಳ ವ್ಯಕ್ತಪಡಿಸಿದ್ದಾರೆ.
ಸರ್ವಪಲ್ಲಿ ಡಾ.ರಾಧಾಕೃಷ್ಣನ್ ಮತ್ತು ಡಾ.ಅಬ್ದುಲ್ ಕಲಾಂ ನಮ್ಮ ರಾಷ್ಟ್ರದ ಅತ್ಯುತ್ತಮ ಶ್ರೇಣಿಯ ರಾಷ್ಟ್ರಪತಿಗಳು, ವಿಜ್ಞಾನಿ, ರಾಷ್ಟ್ರಪತಿ, ಅಬ್ದುಲ್ ಕಲಾಂ ಅವರಂತಹ ಆದರ್ಶ ಶಿಕ್ಷಕರಿಂದ ಸ್ಫೂರ್ತಿಯ ಸೆಲೆ ಪಡೆದು, ಡಾ.ರಾಮಾಪೂರವರು ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಂಡಿದ್ದಾರೆ.
ವೀಸಾ ಪಡೆಯುವ ಅನುಭವ, ಪ್ರವಾಸ ಪ್ರಯಾಸಗಳು, ಜೆಟ್ ಲಾಗ್, ಅಲ್ಲಿಯ ಕನ್ನಡಿಗರ ಔದಾರ್ಯ, ಆತಿಥ್ಯದ ಅನುಭವಗಳನ್ನು ವಿವರವಾಗಿ ನಿರೂಪಿಸಿದ್ದಾರೆ.
ಶಿಕ್ಷಣವೆಂದರೆ ಆದರ್ಶ ವ್ಯಕ್ತಿಗಳನ್ನಾಗಿ ರೂಪಿಸಿ, ಜೀವನವನ್ನು ಯಶಸ್ವೀಯಾಗಿ ನಿರ್ವಹಿಸುವಂತೆ ತಯಾರಿಸುವ ಶೈಕ್ಷಣಿಕ ಕಲ್ಪನೆ ಹಾಗೂ ಆದರ್ಶಗಳನ್ನು ಹೊಂದಿರುವ ಅಮೆರಿಕೆಯ ಶಾಲೆಗಳಲ್ಲಿಯ ಪರಿಸರವನ್ನು ಮೆಚ್ಚಿದ್ದಾರೆ. ಕ್ಲಾಸ್ ರೂಮುಗಳಲ್ಲಿರುವ ಸಂಗೀತಮಯ ವಾತಾವರಣ, ಮಕ್ಕಳ ಮನೋವಿಜ್ಞಾನದ ಅರಿವುಳ್ಳ ಶಿಕ್ಷಕರು, ಕಲಿಸುವ ಪದ್ಧತಿಯಲ್ಲಿ ಆಧುನಿಕ ತಂತ್ರಜ್ಞಾನದ ಅಳವಡಿಕೆ, ಮಕ್ಕಳಲ್ಲಿ ಚಿಕ್ಕಂದಿನಿಂದಲೇ ಓದುವ ಹವ್ಯಾಸ ಹಾಗೂ ಸಾಮಾಜಿಕ ಪ್ರಜ್ಞೆ ಬೆಳೆಸುವುದನ್ನು ಲೇಖಕರು ಮೆಚ್ಚಿಕೊಂಡಿದ್ದಾರೆ. ಅಕಾಡೆಮಿಕ್ ವಾತಾವರಣ, ಕ್ರೀಡೆಗಳಲ್ಲಿ ಆಸಕ್ತಿ, ಶಿಕ್ಷಕರ ಪ್ರತಿಭೆಗಳನ್ನು ಪ್ರಶಂಸಿಸಿದ್ದಾರೆ.
ಬಾಹ್ಯಾಕಾಶದಲ್ಲಿ ಮೈಲುಗಲ್ಲು ಸ್ಥಾಪಿಸಿದ ನಾಸಾ, ಜಗತ್ತಿಗೆ ಹಲವು ಪ್ರತಿಭೆಗಳ ಪರಿಚಯಿಸಿದ ಯುನಿವರ್ಸಿಟಿ ಆಫ್ ಟೆಕ್ಸಾಸ್, ಭೂತ ಪ್ರೇತಗಳ ಹಬ್ಬ ಹಾಲೋವೀನ್, ಭೂಗರ್ಭದೊಳಗಿನ ಕೌತುಕ ಇನ್ನರ್ ಕೇವ್, ಮ್ಯಾಥ ಸೆಂಟರ್ ಮತ್ತು ಕಮ್ಯೂನಿಟಿ ಕಾಲೇಜು, ಬೇಲಿ ಮಿಡಲ್ ಸ್ಕೂಲ್, ಮಾಲ್ ಜೀವನ ಇವೆಲ್ಲವುಗಳನ್ನು ಓದುಗರಿಗೆ ಪರಿಚಯಿಸಿದ್ದಾರೆ.
ನೃತ್ಯಕಲೆ ಶಾಲಾ ಪಠ್ಯಕ್ರಮದ ಭಾಗ, ಜೀವನವೊಂದು ನಾಟಕ, ಅದಕ್ಕೆ ಈ ನಾಟಕ ಕಲೆ, ಜೀವನ ನಿರೂಪಣೆಯ ತರಬೇತಿ, ಸ್ವಚ್ಛತೆ ಮಂತ್ರ ಸದಾ ಜಾಗ್ರತ, ಅಮೆರಿಕೆಯ ಶಾಲೆಗಳಲ್ಲಿ ನೀಡುವ ಸೌಲಭ್ಯಗಳು ಇತ್ಯಾದಿಗಳನ್ನು ಓದುಗರ ಗಮನಕ್ಕೆ ತಂದಿದ್ದಾರೆ.
ಅಮೆರಿಕೆಯಲ್ಲಿ ನೆಲೆಸಿದ ಕನ್ನಡಿಗರ ಸಾಧನೆ, ಅವರ ಆದರ ಆತಿಥ್ಯಗಳು, ಕನ್ನಡ ಭಾಷೆ, ಸಂಸ್ಕøತಿಗಳ ಬಗೆಗೆ ಅವರಿಗೆ ಇರುವ ಕಾಳಜಿ, ಮಹಾತ್ಮಾ ಗಾಂಧಿಯವರ ಬಗೆಗೆ ಅಮೆರಿಕನ್ನರಿಗೆ ಇರುವ ಗೌರವ ಮತ್ತು ಆದರ್ಶಗಳ ಕಲ್ಪನೆ, ಸ್ವಾರಸ್ಯಕರ ವೈವಿಧ್ಯಮಯ ತಿಂಡಿ ತೀರ್ಥಗಳು, ಸ್ವಚ್ಚತೆಯ ಪರಿಸರ ಪ್ರಜ್ಞೆ ವಿಷಯಗಳನ್ನು ಸಾಂದರ್ಭಿಕವಾಗಿ ವಿವರಿಸಿದ್ದಾರೆ.
 ಲೇಖಕರ ಪ್ರತಿಭೆ, ಆಸಕ್ತಿ, ಕ್ರಿಯಾಶೀಲತೆ, ಅವರ ಸಾಧನೆಯ ಪಕ್ಷಿನೋಟ ಸ್ಪೂರ್ತಿದಾಯಕವಾಗಿದೆ. ಭಾರತದ ಸರಕಾರಿ ಶಾಲೆಗಳು, ಅಮೆರಿಕ ಆದರ್ಶಗಳನ್ನು ಅಳವಡಿಸಿಕೊಂಡರೆ, ರಾಷ್ಟ್ರಪತಿ ಡಾ.ಅಬ್ದುಲ್ ಕಲಾಂ ಅವರ ಕನಸಿನ ಭವ್ಯಭಾರತ ನಿರ್ಮಾಣವಾಗಬಲ್ಲದು ಎಂಬ ಭಾವನೆ ಡಾ.ಲಿಂಗರಾಜ ರಾಮಾಪೂರವರ ಪ್ರಸ್ತುತ ಕೃತಿ ಆಶಾವಾದ ನಿರ್ಮಿಸಬಲ್ಲದು. ಲೇಖಕರು ಅಭಿನಂದನೆಗೆ ಪಾತ್ರರಾಗಿದ್ದಾರೆ.

-ಡಾ.ಎಂ.ಎಸ್.ಹುಲ್ಲೋಳಿ, ನಿವೃತ್ತ ಪ್ರಾಚಾರ್ಯರು, ಓಂನಗರ, ಹುಬ್ಬಳ್ಳಿ-31
 

Related Books