‘ಹೈಡ್ ಪಾರ್ಕ್’ ಪತ್ರಕರ್ತ, ಲೇಖಕ ವೈ.ಎನ್.ಕೆ ಅವರ ಪ್ರವಾಸ ಕಥನ. ಅರವತ್ತರ ದಶಕದಲ್ಲಿ ಕನ್ನಡದ ಹೊಸ ಸಾಹಿತ್ಯದ ಹಿಂದೆ ಅದೃಶ್ಯ ಶಕ್ತಿಯಂತಿದ್ದ ವೈ.ಎನ್.ಕೆ ತರುಣರ ಬರವಣಿಗೆಗೆ ಹೆಚ್ಚು ಪ್ರೋತ್ಯಾಹಿಸುತ್ತಿದ್ದರು. ಸ್ವತಃ ಬರೆದದ್ದು ಸ್ವಲ್ಪವೇ. ಈ ಸ್ವಲ್ಪ ಬರವಣಿಗೆಯಲ್ಲಿ ಅವರ ವಿಶಿಷ್ಟ ಛಾಪು ಕಾಣಬಹುದು. ಅವರ ವಿನೋದ, ಶಬ್ದ ಚಮತ್ಕಾರ, ವಿಸ್ತಾರವಾದ ಓದು, ಜನರ ನಿರೀಕ್ಷಣೆ ಇವೆಲ್ಲವೂ ಹದವರಿತು ಬರುವ ಬರವಣಿಗೆ ಲವಲವಿಕೆಯನ್ನು ತುಂಬಿಕೊಂಡಿರುತ್ತದೆ. ಪ್ರಪಂಚ ಪರ್ಯಟನೆ ಮಾಡಿದ ವೈ.ಎನ್.ಕೆ ಒಬ್ಬರು. ಬ್ರಿಟನ್, ರಷ್ಯಾ, ಪಶ್ಚಿಮ ಜರ್ಮನಿ, ಪೂರ್ವ ಯುರೋಪಿನ ಕೆಲವು ದೇಶಗಳಿಗೆ ಕೊಟ್ಟ ಭೇಟಿಯ ಸಂದರ್ಭದಲ್ಲಿ ಮೂಡಿದ ಅನಿಸಿಕೆಗಳನ್ನು ಈ ಕೃತಿಯಲ್ಲಿ ದಾಖಲಿಸಿದ್ದಾರೆ. ಇಲ್ಲಿ ಆಯಾ ದೇಶದ ಒಂದೊಂದು ತುಣುಕನ್ನು ಸ್ವಾರಸ್ಯಕರವಾಗಿ ನಿರೂಪಿಸುವುದರಲ್ಲಿ ಲೇಖನಗಳು ಗೆದ್ದಿವೆ.
ಪತ್ರಕರ್ತ, ಲೇಖಕ ವೈಎನ್‍ಕೆ ಅವರು 1926ರ ಮೇ 17ರಂದು ಜನಿಸಿದರು. 1949ರಲ್ಲಿ ಪ್ರಜಾವಾಣಿಗೆ ಉಪಸಂಪಾದಕರಾಗಿ ಸೇರಿದ ವೈಎನ್‍ಕೆ ದೇಶಬಂಧು ಹಾಗೂ ಛಾಯಾ ಪತ್ರಿಕೆಗಳಲ್ಲಿಯೂ ದುಡಿದಿದ್ದರು. 1967ರಲ್ಲಿ ಥಾಮ್ಸನ್ ವಿದ್ಯಾರ್ಥಿವೇತನ ಪಡೆದು ಪತ್ರಿಕೋದ್ಯಮ ವ್ಯಾಸಂಗ ಮಾಡಿದ್ದು, ಪತ್ರಿಕೋದ್ಯಮ ಕುರಿತಾಗಿ ಕೃತಿಗಳನ್ನು ರಚಿಸಿದ್ದಾರೆ. ರಷ್ಯಾ, ಕೆನಡಾ, ಅಮೇರಿಕಾ ಹಾಗೂ ಯುರೋಪ ದೇಶಗಳಿಗೆ ಆ ದಿನಗಳಲ್ಲೇ ಪ್ರವಾಸಕ್ಕೆ ತೆರಳಿದ್ದ ವೈಎನ್‍ಕೆ ಹೈಡ್ ಪಾರ್ಕ್ ಅನ್ನುವ ಪ್ರವಾಸ ಕಥನವನ್ನು ರಚಿಸಿದ್ದಾರೆ. ಅಲ್ಲದೇ, ಇವರ ಇದು ಸುದ್ದಿ ಇದು ಸುದ್ದಿ ಅಂಕಣ ಸಂಕಲನ ಪತ್ರಿಕೋದ್ಯಮಕ್ಕೆ ಕೈಪಿಡಿಯಾಗಿದೆ. ಸಾಹಿತ್ಯಕ್ಷೇತ್ರ, ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ...
READ MORE