ಲೇಖಕ ಹೆಚ್. ಆರ್. ವಿಶ್ವಾಸ ಅವರ ಸಂಸ್ಕೃತಭಾಷೆಯನ್ನು ಕಲಿಸುವುದಕ್ಕೆಂದು ತರುಣ ಸಂಸ್ಕೃತ ಕಾರ್ಯಕರ್ತರೊಬ್ಬರು ಅಮೆರಿಕಾಗೆ ತೆರಳಿ, ಅಲ್ಲಿ ಸುಮಾರು ನಾಲ್ಕು ತಿಂಗಳ ಕಾಲ ವಾಸವಿದ್ದು, ಅಮೆರಿಕಾದ ಹದಿನೆಂಟು ರಾಜ್ಯಗಳಲ್ಲಿ ಸಂಚರಿಸಿ, ವಿಶೇಷವಾಗಿ ಅಲ್ಲಿ ವಾಸಿಸುವ ಭಾರತೀಯರ ನಡುವೆ ಇದ್ದುಕೊಂಡು ಅವರಿಗಾಗಿ ಸಂಸ್ಕೃತ ತರಗತಿಗಳನ್ನು ನಡೆಸಿದ, ಅದರಲ್ಲೂ ಸಂಸ್ಕೃತದಲ್ಲಿ ಮಾತನಾಡುವುದನ್ನು ಕಲಿಸಿದ ಅವಧಿಯಲ್ಲಿ ಗಳಿಸಿದ ಅನುಭವಗಳನ್ನು ಇಲ್ಲಿ ಕಟ್ಟಿಕೊಡಲಾಗಿದೆ. ಅಮೆರಿಕಾ ನಿವಾಸಿಗಳಾಗಿರುವ ಭಾರತೀಯ ಕುಟುಂಬಗಳ ಮಾನಸಿಕ ಹೊಯ್ದಾಟ, ಸಾಂಸ್ಕೃತಿಕ ಸಂವೇದನೆಗಳೂ ಇಲ್ಲಿ ದಾಖಲಾಗಿವೆ. ಪ್ರೊ. ಜಿ. ವೆಂಕಟಸುಬ್ಬಯ್ಯನವರ ಅಮೂಲ್ಯ ’ಮೊದಲ ಮಾತು’ ಗ್ರಂಥದ ಆರಂಭದಲ್ಲಿದೆ.
ಮಲೆನಾಡಿನ ಕೊಪ್ಪ ತಾಲೂಕಿನ ಹುಲಿಯಾಳಿ ಗ್ರಾಮದ ವಿಶ್ವಾಸ ಅವರು ಸಂಸ್ಕೃತ ವಿದ್ವಾಂಸರು. ಎಂ.ಎ. ಮತ್ತು ಪಿ.ಹೆಚ್.ಡಿ. ಪದವೀಧರರು. ಸಂಸ್ಕೃತ - ಕನ್ನಡ ಎರಡೂ ಭಾಷೆಗಳಲ್ಲಿ ಕೃಷಿ ಮಾಡಿದ್ದಾರೆ. ಎಸ್. ಎಲ್. ಭೈರಪ್ಪನವರ ‘ಆವರಣ’ ಕಾದಂಬರಿಯ ಸಂಸ್ಕೃತ ಅನುವಾದಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ, ‘ದಾಟು’ ಕಾದಂಬರಿಯ ಸಂಸ್ಕೃತ ಅನುವಾದಕ್ಕಾಗಿ ಉತ್ತರಪ್ರದೇಶ ಸಂಸ್ಕೃತ ಅಕಾಡೆಮಿ ಹಾಗೂ ಸಂಸ್ಕೃತದಲ್ಲಿ ಬಾಲಸಾಹಿತ್ಯಕ್ಕಾಗಿಯೂ ಕೇಂದ್ರ ಸಾಹಿತ್ಯ ಅಕಾಡೆಮಿಯಿಂದಲೂ ಪುರಸ್ಕೃತರಾಗಿದ್ದಾರೆ. ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯದಿಂದ ‘ವಾಚಸ್ಪತಿ’ (ಡಿ.ಲಿಟ್) ಪದವೀಧರರು. ಸಾಹಿತಿ ಎಚ್. ಆರ್. ವಿಶ್ವಾಸ ಪ್ರಸ್ತುತ ಮಂಗಳೂರಿನ ಸಂಘನಿಕೇತನದಲ್ಲಿ ಅಖಿಲ ಭಾರತ ಪ್ರಶಿಕ್ಷಣ ಪ್ರಮುಖರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪಿಎಚ್.ಡಿ. ...
READ MORE