ಮರುಭೂಮಿಯಲ್ಲಿ ಚಿನ್ನ (ತೈಲ) ಬೆಳೆಯುತ್ತಿರುವ ನಾಡು ಸೌದಿಅರೇಬಿಯಾ. 6ನೆಯ ಶತಮಾನದಿಂದ ಮುಸ್ಲಿಂರ ಪವಿತ್ರ ಸ್ಥಳವಾದ ಮಕ್ಕಾ ಮದಿನಾಗಳು ಜಗತ್ತಿನ ಇಸ್ಲಾಂ ಬಾಂಧವರನ್ನು ಭಕ್ತಿ ಭಾವನೆಗಳಿಂದ ಆಕರ್ಷಿಸಿಕೊಂಡಿದ್ದವು. 19ನೆಯ ಶತಮಾನದ ಪೂರ್ವಾರ್ಧದಲ್ಲಿ (1932) ಅಮೇರಿಕನ್ ಸಲಹೆಗಾರರ, ಭೂಗರ್ಭಶಾಸ್ತ್ರಜ್ಞರ ಅಭಿಪ್ರಾಯದೊಂದಿಗೆ ಭೂಮಿಯ ಒಡಲಾಳದಿಂದ ತೈಲ ತೆಗೆಯುವ ಒಪ್ಪಂದ ಮಾಡಿಕೊಂಡು ಡಾಲರ್‌ಗಳ ಸುರಿಮಳೆಯೇ ಹರಿಯುವಂತೆ ಮಾಡಿಕೊಂಡರು. ಇಂದು ಸೌದಿ ಅರೇಬಿಯಾ ಜಗತ್ತಿನ ಅತೀ ಶ್ರೀಮಂತ ರಾಷ್ಟ್ರಗಳಲ್ಲಿ ಪ್ರಮುಖ ಹೆಸರು ಪಡೆದುಕೊಂಡಿದೆ. ಲತಾ ಗುತ್ತಿಯವರು ಸೌದಿ ಅರೇಬಿಯಾದಲ್ಲಿ ಸುಮಾರು 15 ವರ್ಷಗಳ ಕಾಲ ಉಳಿದುಕೊಂಡು ಅಲ್ಲಿಯ ಅನುಭವವನ್ನು ನಾ ಕಂಡಂತೆ ಅರೇಬಿಯಾ ಎಂಬ ಪ್ರವಾಸ ಕಥನವನ್ನು ಬರೆದಿದ್ದಾರೆ. ಈ ಪ್ರವಾಸ ಕಥನವನ್ನು ಗುಲಬರ್ಗಾ ವಿಶ್ವವಿದ್ಯಾಲಯದ ಪದವಿ ತರಗತಿಗೆ ಪಠ್ಯಪುಸ್ತಕವನ್ನಾಗಿ ಆಯ್ಕೆ ಮಾಡಿಕೊಂಡಿತ್ತು.
©2024 Book Brahma Private Limited.