ಲೇಖಕ ನಾಗತಿಹಳ್ಳಿ ಚಂದ್ರಶೇಖರ ಅವರ ಏಳನೆಯ ಪ್ರವಾಸ ಗ್ರಹಿಕೆ-ನನ್ನ ಗ್ರಹಿಕೆಯ ಅಲಾಸ್ಕ. ಇದು ಪ್ರವಾಸ ಕಥನವಾಗಿದ್ದು, ಜೀವನ ಮೌಲ್ಯ ಕುರಿತು ಮಾತನಾಡುತ್ತದೆ. ಈ ಕೃತಿಯಲ್ಲಿ ಮೂರು ಭಾಗಗಳಿವೆ. ಅಲಾಸ್ಕ ಮೊದಲ ಭಾಗ. ನಂತರದ 2 ಹಾಗೂ 3 ನೇ ಭಾಗಗಳಲ್ಲಿ ಉಪಯುಕ್ತತೆ ಕುರಿತಾಗಿದೆ. ಲೇಖಕರು ತುಂಬಾ ಗೌರವಿಸುವ, ಅಚ್ಚರಿಯಿಂದ ಕಾಣುವ ವ್ಯಕ್ತಿಚಿತ್ರಗಳು ಎರಡನೇ ಭಾಗದಲ್ಲಿವೆ. ಎರಡು ಹೋರಿಗಳನ್ನು ಬೇಕೆಂತಲೇ ವ್ಯಕ್ತಿಚಿತ್ರಗಳಲ್ಲಿ ಸೇರಿಸಿದ್ದಾರೆ. ಪ್ರಸ್ತುತ ಸಮಸ್ಯೆಗಳನ್ನು ಕುರಿತ ಬಿಡಿ ಬರಹಗಳು ಮೂರನೆಯ ಭಾಗದಲ್ಲಿ ಇವೆ.
ನಾಗತಿಹಳ್ಳಿ ಚಂದ್ರಶೇಖರ್ ಮೂಲತಃ ಮಂಡ್ಯ ಜಿಲ್ಲೆಯ ನಾಗತಿಹಳ್ಳಿಯವರು. ತಂದೆ ತಿಮ್ಮಶೆಟ್ಟಿ ಗೌಡರು, ತಾಯಿ ಪಾರ್ವತಮ್ಮ. ಪ್ರಾರಂಭಿಕ ಶಿಕ್ಷಣವನ್ನು ತಮ್ಮಊರಾದ ನಾಗತಿಹಳ್ಳಿಯಲ್ಲಿ ಪಡೆದ ಅವರು ಮುಂದೆ ತಮ್ಮ ವಿದ್ಯಾಭ್ಯಾಸವನ್ನು ಮೈಸೂರಿನಲ್ಲಿ ಪೂರ್ಣಗೊಳಿಸಿದರು. ಸ್ನಾತಕೋತ್ತರ ಪದವಿಯನ್ನು ಹಲವಾರು ಸ್ವರ್ಣಪದಕಗಳೊಂದಿಗೆ ಗಳಿಸಿದ ಚಂದ್ರಶೇಖರ್ ತಮ್ಮ ಗ್ರಾಮ ನಾಗತಿಹಳ್ಳಿಯಲ್ಲಿ ‘ಅಭಿವ್ಯಕ್ತಿ ಸಾಂಸ್ಕೃತಿಕ ವೇದಿಕೆ’ಯನ್ನು ಆರಂಭಿಸಿದರು. ಜೊತೆಗೆ ಪ್ರತಿ ಯುಗಾದಿಯ ಸಂದರ್ಭದಲ್ಲಿ `ನಾಗತಿಹಳ್ಳಿ ಸಾಂಸ್ಕೃತಿಕ ಹಬ್ಬ’ಕ್ಕೆ ಸಹಾ ಚಾಲನೆ ನೀಡಿದರು. ಈ ವೇದಿಕೆಯ ಮೂಲಕ ಗ್ರಾಮದಲ್ಲಿ ಸುಸಜ್ಜಿತ ಗ್ರಂಥಾಲಯ, ರಂಗಮಂದಿರ, ಕಂಪ್ಯೂಟರ್ ಕೇಂದ್ರಗಳನ್ನು ತೆರೆಯುವ ಮೂಲಕ ಗ್ರಾಮೀಣ ಜನರ ಸಾಂಸ್ಕೃತಿಕ ಪ್ರಜ್ಞೆಯನ್ನು ಜಾಗೃತಿಗೊಳಿಸುವ ಕೆಲಸವನ್ನು ...
READ MORE