ಲೇಖಕಿ ಎಚ್. ಎಸ್. ಮುಕ್ತಾಯಕ್ಕ ಅವರ ಪ್ರವಾಸ ಕಥನ ‘ಮದಿರೆಯ ನಾಡಿನಲ್ಲಿ’. ಭೌಗೋಳಿಕ ಪರಿಸರದಲ್ಲಿ ಸಂಚರಿಸುತ್ತಲೇ ಆಂತರಿಕ ಸತ್ವ ಪಡೆಯುವ, ನೆಲ ಮುಗಿಲುಗಳ ನಡುವಿನ ನದಿ, ಬೆಟ್ಟ, ಗುಡ್ಡ, ಗಿಡ ಮರ ಬಳ್ಳಿಗಳೊಂದಿಗೆ ಬೆರೆಯುತ್ತಲೇ ನೆಲ ಮನೆಯನ್ನು ಪ್ರವೇಶಿಸಿ ಹೊರಬರುವ ವಿಶಿಷ್ಟ ಪ್ರಕ್ರಿಯೆಯ ಭಾಗವೇ ಈ ಪ್ರವಾಸ ಕಥನ.
ಎಚ್.ಎಸ್. ಮುಕ್ತಾಯಕ್ಕ ಅವರು 1954 ಜನವರಿ 28ರಂದು ಜನಿಸಿದರು. ಇವರು ಬರೆದ ಪ್ರಮುಖ ಕೃತಿಗಳೆಂದರೆ ನಾನು ಮತ್ತು ಅವನು, ನೀವು ಕಾಣಿರೇ ನೀವು ಕಾಣಿರೇ, ಡಕ್ಕೆಯ ಬೊಮ್ಮಣ್ಣ, ಶಿವಶರಣೆ ಮುಕ್ತಾಯಕ್ಕ, ಕಭೀ ಕಭೀ ಮುಂತಾದವು. ಇವ ನೀವು ಕಾಣಿರೇ ನೀವು ಕಾಣಿರೇ ಕವನ ಸಂಕಲನಕ್ಕೆ ಕರ್ನಾಟಕ ವಿದ್ಯಾವರ್ಧಕ ಸಂಘದ ರತ್ಮಮ್ಮ ಹೆಗ್ಗಡೆ ದತ್ತಿ ನಿಧಿ ಬಹುಮಾನ, ಕನ್ನಡ ಸಾಹಿತ್ಯ ಪರಿಷತ್ತಿನ ಮಲ್ಲಿಕಾ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಸಂದಿವೆ. ...
READ MORE