‘ನಾಕಂಡ ಜರ್ಮನಿ’ ಲೇಖಕ ಹೊ. ಶ್ರೀನಿವಾಸಯ್ಯ ಅವರ ಪ್ರವಾಸಿ ಕಥನ. ಬಡತನದಲ್ಲಿ ಬೆಳೆದ ಶ್ರೀನಿವಾಸಯ್ಯ, ಪಾಶ್ಚಿಮಾತ್ಯ ದೇಶಗಳನ್ನು ನೋಡಬೇಕೆಂದು ಕನಸು ಕಾಣುತ್ತಿದ್ದವರು, ಎಂಜನಿಯರಿಂಗ್ ಕಾಲೇಜು ಬಿಟ್ಟು ಹಿಂದೂಸ್ಥಾನ ವಿಮಾನ ಕಾರ್ಖಾನೆಗೆ ಸೇರಿದ ಮೇಲೆ, ಭಾರತ ಸರ್ಕಾರದ ಸಹಾಯದಿಂದ ಹಿಂದೂಸ್ಥಾನ ವಿಮಾನ ಕಾರ್ಖಾನೆಯ ಮೂಲಕ ಜರ್ಮನಿಗೆ ಹೋಗುವ ಅವಕಾಶ ಲಭಿಸಿತು . ಕೆಲಸದ ನಿಮಿತ್ತ ಜರ್ಮನಿಗೆ ತೆರಳಿದ ಅವರು ಅವರ ಪ್ರವಾಸದ ವಿಭಿನ್ನ ಅನುಭವಗಳನ್ನು ‘ನಾನು ಕಂಡ ಜರ್ಮನಿ’ ಕೃತಿಯಲ್ಲಿ ದಾಖಲಿಸಿದ್ದಾರೆ.
ಹಿರಿಯ ಗಾಂಧಿವಾದಿ ಡಾ. ಹೊ. ಶ್ರೀನಿವಾಸಯ್ಯ ಅವರು ಮಂಡ್ಯ ಜಿಲ್ಲೆಯ ಚೌದರೀಕೊಪ್ಪಲಿನವರು. ತಂದೆ ಹೊನ್ನಪ್ಪ. ತಾಯಿ ತಿಮ್ಮಮ್ಮ. ಹೈಸ್ಕೂಲಿನಲ್ಲಿದ್ದಾಗಲೇ ಶಾಲೆಯಿಂದ ಹೊರಡಿಸುತ್ತಿದ್ದ ‘ವನಸುಮ’ ಎಂಬ ಪತ್ರಿಕೆಗೆ ಭಗವದ್ಗೀತೆಯ ತಾತ್ಪರ್ಯ, ಗೀತೆಯ ಸಂದೇಶದ ವಿಚಾರವಾಗಿ ಲೇಖನ ಮತ್ತು ಗೀತೋಪದೇಶದ ಚಿತ್ರಗಳನ್ನು ಬರೆಯುತ್ತಿದ್ದರು. ಭಾರತ್ ಅರ್ಥ್ ಮೂವರ್‍ಸ್ (ಲಿ) ಸಂಸ್ಥೆಯಲ್ಲಿ ಹಿರಿಯ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿರುವ ಅವರು ಸದ್ಯ ನಿವೃತ್ತರು. ಪ್ರಕೃತಿ ಜೀವನ ಕೇಂದ್ರದ ಸ್ಥಾಪಕರಾಗಿರುವ ಅವರು ಗಾಂಧಿ ಸಾಹಿತ್ಯ ಸಂಘ ಮತ್ತು ಸಿದ್ದವನಹಳ್ಳಿ ಕೃಷ್ಣರರ್ದ ಸ್ಮಾರಕ ಸಮಿತಿಗಳ ನಿಕಟ ಸಂಪರ್ಕದಲ್ಲಿದ್ದವರು. ಎಂಜಿನಿಯರ್ ಆಗಿದ್ದ ಅವರು ರಚಿಸಿದ ‘ನಾ ಕಂಡ ಜರ್ಮನಿ' ಪ್ರವಾಸ ಗ್ರಂಥಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ ದೊರೆತಿದೆ. ಪ್ರಕೃತಿ ...
READ MORE