ಕನ್ನಡ ಅತ್ಯುತ್ತಮ ಪ್ರವಾಸ ಕಥನಗಳ ಸಾಲಿನಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಕೆ. ಶಿವರಾಮ ಕಾರಂತರ ಕೃತಿಗಳಿಗೂ ಉತ್ತಮ ಸ್ಥಾನವಿದೆ. ‘ಅಪೂರ್ವ-ಪಶ್ಚಿಮ’ ದಂತೆ ಪಾತಾಳಕ್ಕೆ ಪಯಣ ಕೃತಿಯು ಪ್ರವಾಸ ಕಥನದಲ್ಲಿ ಸೇರಿಕೊಂಡಿದೆ. ಸರಳ ಭಾಷೆ. ಉತ್ತಮ ಹಾಗೂ ಆಕರ್ಷಕ ಶೈಲಿಯೊಂದಿಗೆ ಓದಿಸಿಕೊಂಡು ಹೋಗುತ್ತದೆ.
ಅಮೆರಿಕಾ ಸಂಯುಕ್ತ ಸಂಸ್ಥಾನಕ್ಕೆ ಪ್ರವಾಸ ಹೋಗಿದ್ದ ಲೇಖಕರು, ಅಲ್ಲಿಯ ಮ್ಯೂಜಿಯಂಗಳು, ನೈಸರ್ಗಿಕ ಚೆಲುವಿನ ತಾಣನಗಳು, ರಂಗಕಲೆ ಇತ್ಯಾದಿ ಕುರಿತು ವಿವರಿಸಿದ್ದಾರೆ. ಜಂಬೋ ಸವಾರಿಯ ಯೋಗ, ಪಶ್ಚಿಮಾಭಿಮುಖಿ, ನ್ಯೂಯಾರ್ಕಿನಲ್ಲಿ ಮತ್ತಷ್ಟು ಸಮಯ, ಸೈಂಟ್ ಪಾಲಿನಲ್ಲಿ, ಸಾನ್ ಫ್ರಾನ್ಸಿಸ್ಕೋವಿನಲ್ಲಿ, ಸಿಕೋಯಾ ಉದ್ಯಾನ, ನಗರದ ಒಳಗೂ ಹೊರಗೂ, ಗ್ರ್‍ಯಾಂಡ್ ಕೆನಿಯನ್, ಇನ್ನೆರಡು ಅರಣ್ಯೋದ್ಯಾನಗಳು, ಯಲ್ಲೋಸ್ಟೋನ್ ಪಾರ್ಕ್, ನಂದನವನದಿಂದ ಸೈಂಟ್ ಪಾಲಿಗೆ, ವಾಷಿಂಗ್ಟನ್ ಯಾತ್ರೆ, ಅಮೆರಿಕದಲ್ಲಿ ಕೊನೆಯ ದಿನಗಳು ಹೀಗೆ ವಿವಿಧ ಅಧ್ಯಾಯಗಳಿವೆ.
ಬೆಂಗಳೂರಿನ ಐಬಿಎಚ್. ಪ್ರಕಾಶನವು 1973ರಲ್ಲಿ (ಪುಟ: 178) ಈ ಕೃತಿಯನ್ನು ಮೊದಲ ಬಾರಿಗೆ ಪ್ರಕಟಿಸಿತ್ತು.
©2024 Book Brahma Private Limited.