‘ಅಟ್ಲಾಂಟಿಕದಾಚೆಗೆ’ ಲೇಖಕಿ ಸುಧಾಮೂರ್ತಿ ಅವರ ಪ್ರವಾಸಕಥನ. ವೇಗದ ವಿಮಾನಗಳಿಂದ ಈ ಪ್ರಪಂಚವೇ ಆಕುಂಚನ ಹೊಂದಿದೆ. ಅಂಥದರಲ್ಲಿ ಅಮೇರಿಕೆಗೆ ಹೋಗಿಬರುವುದು ಯಾವ ಪ್ರಯಾಸದ ಕೆಲಸವಲ್ಲ. ಅದರಲ್ಲಿಯೂ ಭಾಷೆಯನ್ನು ಬಲ್ಲವರಿಗೆ ಯಾವುದು ಕಷ್ಟ? ನಾನೇನು ನೀಲ್ ಆರ್ಮ್ ಸ್ಟ್ರಾಂಡ್ ನಾಗಲೀ, ಕೋಲಂಬಸ್ ಆಗಲಿ ಅಲ್ಲ, ಡೇವಿಡ್ ಲಿವಿಂಗಸ್ಟನ್ ನಾಗಲಿ ಅಲ್ಲ, ಅಥವಾ ಜೀವವನ್ನು ಒತ್ತೆ ಇಟ್ಟು ಕೇವಲ ಜ್ಞಾನಾರ್ಜುನೆಗಾಗಿ ಹೊರಟಂತಹ ಹುಯೇನ್ ತ್ಸುಂಗನೂ ಅಲ್ಲ. ನಾನು ಸಾಮಾನ್ಯ ಪ್ರವಾಸಿ ಎನ್ನುವ ಸುಧಾಮೂರ್ತಿ, ಅಪರಿಚಿತ ದೇಶದಲ್ಲಿ ನಾನು ಒಬ್ಬಳೇ ಎಲ್ಲ ಸ್ಥಳಗಳಿಗೆ ಹೋದಾಗ ನನಗೆ ಆಗಿರುವ ಅನುಭವವನ್ನು ನನ್ನ ದೃಷ್ಟಿಯಲ್ಲಿ ಯಾವುದು ಮಹತ್ವವಿದೆ ಅಂತಹ ಪ್ರಸಂಗವನ್ನು ನಾನು ಬರೆದಿರುವೆ ಎನ್ನುತ್ತಾರೆ ಸುಧಾಮೂರ್ತಿ.
©2024 Book Brahma Private Limited.