ಲೇಖಕಿ ಆರ್‍ಯಾಂಬ ಪಟ್ಟಾಭಿ ಅವರ ಕೃತಿ ವಿದೇಶ ಪ್ರವಾಸ. ಕೃತಿಯ ಕುರಿತು ಲೇಖಕಿಯೇ ಹೇಳಿಕೊಳ್ಳುವಂತೆ, ವಿದೇಶಗಳಿಗೆ ಭಾರತದಿಂದ ಪ್ರತಿವರ್ಷ ಹೋಗಿ ಬರುವವರ ಸಂಖ್ಯೆ ಬೆಳೆಯುತ್ತಿದೆ. ಪ್ರವಾಸ ಮಾಡಿ ಬಂದವರಲ್ಲಿ ಕೆಲವರು ಅಲ್ಲಿ ಕಂಡ ಪ್ರೇಕ್ಷಣೀಯ ಸ್ಥಳ ಹಾಗೂ ಅನುಭವಗಳನ್ನು ಕುರಿತು ಬರೆದಿದ್ದಾರೆ. ಅನೇಕ ಭಾರತೀಯರು ವಿದೇಶಗಳಲ್ಲೇ ಶಾಶ್ವತವಾಗಿ ನೆಲಸಿ ಸುಖಜೀವನ ನಡೆಸುತ್ತಿದ್ದಾರೆ. ಅಲ್ಲಿಯ ಪ್ರಜೆಗಳೆನಿಸಿಕೊಂಡಿದ್ದರೂ ಮಾತೃ ದೇಶದ ಸಂಸ್ಕೃತಿಯನ್ನು ಮರೆಯದೆ ಕೆಲವರಾದರೂ ಕಾಪಾಡಿಕೊಂಡು ಬಂದಿದ್ದಾರೆ ಎನ್ನುವುದು ಸಮಾಧಾನಕರವಾದ ವಿಚಾರ,ಕೆಲವು ದಿನಗಳ ಅಥವಾ ವಾರಗಳ ಅವಸರದ ವಿದೇಶ ಪ್ರವಾಸ ನನ್ನದಲ್ಲ. ಯಾಕೆಂದರೆ ಮೂರು ಸಲ ಪ್ರವಾಸ ಮಾಡಿ ಒಟ್ಟಾರೆ ಎರಡು ವರ್ಷ ಅಮೆರಿಕ ದೇಶದಲ್ಲಿ ವಾಸವಾಗಿದ್ದು ಭಾರತಕ್ಕೆ ಹಿಂತಿರುಗಿದ ಮೇಲೆ ನನಗುಂಟಾದ ಅನುಭವದ ಸಂಪತ್ತು ವಿಶಾಲ ಮತ್ತು ವಿಪುಲ, ತೆರೆದ ಕಣ್ಣು, ತೆರೆದ ಕಿವಿ ಮತ್ತು ವಿಶಾಲ ಮನೋಧರ್ಮದಿಂದ ಪ್ರವಾಸ ಮಾಡಿ ಅಧ್ಯಯನ ನಡೆಸಿದ್ದೇನೆ. ಪ್ರವಾಸದ ಅನುಭವಗಳಿಂದ ಸೃಷ್ಟಿ ಯಾದ ಹೊಸ ದೃಷ್ಟಿ, ಮನಸ್ಸಿಗುಂಟಾದ ನೂತನ ಸಂಸ್ಕಾರಗಳ ಫಲ ವಾಗಿ ಹುಟ್ಟಿದ ಹೊಸ ವಿಚಾರಗಳು, ಪರಿಷ್ಕಾರಗಳಿಂದಾಗಿ ಬಹಳ ವರ್ಷ ಗಳಿಂದ ನಂಬಿದ್ದ ಕೆಲವು ಬದುಕಿನ ಮೌಲ್ಯಗಳು ಬದಲಾವಣೆ ಹೊಂದಿ ನಾನು ಹಿಂದಿನವಳಾಗಿ ಉಳಿಯದೆ ಹೊಸತನದ ಬೌದ್ಧಿಕತೆಯಲ್ಲಿ ಅಭಿವ್ಯಕ್ತಗೊಂಡಿದ್ದೀನಿ ಎಂದು ಹೇಳ ಬಯಸುತ್ತೇನೆ. ಪ್ರವಾಸ ನನ್ನ ಅಂತರಂಗದ ಭೂಪಟದ ಮೇಲೆ ಬಲವಾದ ಮುದ್ರೆಯನ್ನೊತ್ತಿತಲ್ಲದೆ ಅದರ ಬಗ್ಗೆ ಇತರರಿಗೂ ತಿಳಿಸಬೇಕೆಂಬ ಅಪೇಕ್ಷೆಯುಂಟಾಯಿತು. ಅದರ ಪರಿಣಾಮವಾಗಿ ಈ ಕೃತಿ ನನ್ನಿಂದ ರಚನೆಯಾಯಿತು ಎನ್ನಬಹುದು ಎಂಬುದಾಗಿ ತಿಳಿಸಿದ್ದಾರೆ.
©2024 Book Brahma Private Limited.