‘ಮಧ್ಯಪ್ರದೇಶದ ಮಡಿಲಲ್ಲಿ’ ಕೃತಿಯು ಕೃಷ್ಣಾನಂದ ಕಾಮತ್ ಅವರ ಪ್ರವಾಸ ಸಾಹಿತ್ಯವಾಗಿದೆ. ಕೃತಿಯು 22 ಅಧ್ಯಾಯಗಳನ್ನು ಒಳಗೊಂಡಿದೆ. ಯಾವ ಊರು?, ಕೀರ್ತಿಯ ಹಾದಿಯಲ್ಲಿ, ಕಲಾಂಕನ, ಚಕ್ಕರ್ ರಸ್ತೆ, ಪವಾಡ., ಜಾಮುನ ಜರಿ, ವಿಂಗಡದ ಗುಡಿ, ಚಾಂದ ಮೇಟಾ, ಮಾಂಜರೆಕರ ಕುಟುಂಬದೊಂದಿಗೆ, ನಾಗದ್ವಾರಾ, ರಾಣಿ ರೂಪಮತಿಯ ಮಾಂಡು, ಜಟಾ ಶಂಕರ, ಚಂದೇಲರ ಹಳ್ಳಿಯಲ್ಲಿ, ಪಿಪರಿಯಾದಲ್ಲಿ, ಆದಿವಾಸಿಗಳಲ್ಲಿ ಹಚ್ಚೆ, ಘುರೇವಾ ಕಲೆ, ಆದಿವಾಸಿಗಳ ಕಲೆ, ಗೊಂಡಾರಣ್ಯದ ಗೊಂಡರು, ನರ್ಮದೆಯ ಗುಂಟ, ಕಷ್ಟಸಹಿಷ್ಣು ಕೊರ್ಕು, ರಸಿಕತೆಗೆ ಹೆಸರಾದ ಮಾವಾಶಿಯಾರು, ಆದಿವಾಸಿಗಳ ಸ್ಮಾರಕಗಳು ಇವೆಲ್ಲವನ್ನು ಒಳಗೊಂಡಿದೆ.
ಕೃತಿಗೆ ಬೆನ್ನುಡಿ ಬರೆದಿರುವ ಹಾ.ಮಾ. ನಾಯಕ ಅವರು, ಪ್ರವಾಸಕಥನ ಎಂದರೆ ಅದು ಸಾಮಾನ್ಯವಾಗಿ ವಿದೇಶದ್ದೇ ಆಗಿರಬೇಕೆಂದು ನಿರೀಕ್ಷಿಸುವವರು ನಾವು. ನಮಗೆ ನಮ್ಮದರಲ್ಲಿಯೇ ಆಸಕ್ತಿಯಿಲ್ಲ!. ನಮ್ಮ ದೇಶದ ಇತರ ಭಾಗಗಳನ್ನು ಕಂಡು ಬರೆಯುವವರು ಬಹಳ ಕಡಿಮೆಯೆಂದೇ ಹೇಳಬೇಕು. ಭಾರತದೊಳಗಿನ ಪ್ರವಾಸವನ್ನೇ ವಸ್ತುವಾಗಿಸಿಕೊಂಡು ಬರೆದವರಲ್ಲಿ ಕೃಷ್ಣಾನಂದ ಕಾಮತರು ಬಹು ಮುಖ್ಯರೆಂದು ನನ್ನ ಭಾವನೆ. ಅವರ ಪ್ರವಾಸ ಕಥನಗಳನ್ನು ಓದುತ್ತಿರುವಾಗ ನಮಗೆ ನಾವೇ ಅಪರಿಚಿತರಾಗಿ ಬಿಡುತ್ತೇವೆ. ನಮ್ಮ ದೇಶದಲ್ಲಿ ನಮಗೇ ಗೊತಿಲ್ಲದಿರುವ ಸಂಗತಿಗಳು ಎಷ್ಟೊಂದು ಎಂದು ಆಶ್ಚರ್ಯವೂ ಆಗುತ್ತದೆ! ಇಂಥ ವೈವಿಧ್ಯಮಯ ಬದುಕನ್ನು ನಮ್ಮೆದುರು ಇಟ್ಟುಕೊಂಡರೂ, ನಮ್ಮ ಪ್ರವಾಸ ಕಥನಗಳಿಗಾಗಿ ಲಂಡನ್, ಪ್ಯಾರಿಸ್, ನ್ಯೂಯಾರ್ಕ್ ಮೊದಲಾದ ಮಹಾನಗರಗಳನ್ನು ಹುಡುಕಿಕೊಂಡು ಹೋಗುವುದು ಅರ್ಥಹೀನವೆಂದು ತೋರುತ್ತದೆ’. ಮಣ್ಣಿನ ಮಕ್ಕಳ ಬೆವರ ವಾಸನೆ’ ಪರೀಕ್ಷಿಸಲು ಹೊರಟ ಇವರ ‘ಮಧ್ಯಪ್ರದೇಶದ ಮಡಿಲಲ್ಲಿ’ ಮಾಯಾ ಲೋಕವಿದ್ದಂತೆ….. ಆದಿವಾಸಿಗಳಲ್ಲಿ ಹಚ್ಚೆ, ಕಲಾವಂತಿಕೆ, ಸೌಂದರ್ಯಪ್ರಜ್ಞೆ, ಅವರು ಶೋಷಣೆಗೆ ಒಳಗಾಗುವ ಪರಿಗಳನ್ನೆಲ್ಲ ಕಾಮತರು ತುಂಬಾ ಸೊಗಸಾಗಿ, ಪರಿಣಾಮಕಾರಿಯಾಗಿ ವರ್ಣಿಸುತ್ತಾರೆ’ ಎಂದು ಪ್ರಶಂಸಿಸಿದ್ದಾರೆ.
©2025 Book Brahma Private Limited.