ರಾಮಾಯಣ ಕಾಲದ ಪಂಚವಟಿಯ ನೆಲ ಈಗಿನ ಮಹಾರಾಷ್ಟ್ರದಲ್ಲಿದೆ.ಆ ರಾಜ್ಯದಲ್ಲಿಯ ಪ್ರವಾಸ ಕಥನ ಕೃತಿ ಇದು.ಪುರಾಣ ಕಾವ್ಯದ ಶೋಧನೆ ಇಲ್ಲಿದೆ. ರಾಮ ಲಕ್ಷ್ಮಣ, ಸೀತೆ ತಮ್ಮ ಹದಿನಾಲ್ಕು ವರ್ಷಗಳ ನವವಾಸವನ್ನು ಈ ಪಂಚವಟಿಕೆ ಎಂಬ ಸ್ಥಳದಲ್ಲಿ ನೆಲೆಸಿದರು. ಈ ಇಡೀ ಪಂಚವಟಿಕೆಯ ವಿಸ್ತಿರ್ಣ ಐದು ಕಿ. ಮೀ. ಪಂಚವಟಿಕೆ ಎಂದರೆ 5 ವಿಶಾಲವಾದ ಆಲದ ಮರವಾಗಿದೆ. ರಾವಣ ಸೀತೆಯನ್ನು ಅಪಹರಿಸಿದ್ದ ಸ್ಥಳ ಈ ಪಂಚವಟಿಕೆ. ಪಂಚವಟಿಕೆಯ ನೆಲದಲ್ಲಿ ಪ್ರವಾಸ ಕಥನ ಹೀಗೆ ವಿವಿಧ ವಿಧಗಳಲ್ಲಿ ನಮ್ಮ ಸಾಂಕ್ಕೃತಿಕ ಲೋಕದ ಮಾಧುರ್ಯವನ್ನು ಹೆಚ್ಚಿಸುವ ಕಥನಕಾರ ಹೊನ್ಕಲ್.
ಸೃಜನಶಿಲತೆಯ ಬಹುಮುಖಿ ಆಯಾಮಗಳಲ್ಲಿ ತೊಡಗಿಸಿಕೊಂಡಿರುವ ಕವಿ ಸಿದ್ಧರಾಮ ಹೊನ್ಕಲ್ ಅವರು ಯಾದಗಿರಿ ಜಿಲ್ಲೆಯ, ಶಹಾಪುರ ತಾಲೂಕಿನ ಸಗರ ಗ್ರಾಮದವರು. ಎಂ ಎ., (ಎಲ್.ಎಲ್.ಬಿ ), ಡಿ.ಎನ್.ಹೆಚ್.ಇ , ಪಿ ಜಿ.ಡಿಎಮ್.ಸಿ.ಜೆ ಪದವೀಧರರು. ಕಥೆ, ಕಾವ್ಯ, ಹನಿಗವನ, ಲಲಿತ ಪ್ರಬಂಧ, ಪ್ರವಾಸ ಕಥನ, ವ್ಯಕ್ತಿ ಚಿತ್ರಣ, ಸಂಪಾದನೆ - ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳ 40 ಕೃತಿಗಳನ್ನು ರಚಿಸಿದ್ದಾರೆ. ಆರೋಗ್ಯ ಶಿಕ್ಷಣಾಧಿಕಾರಿಯಾಗಿ ನಿವೃತ್ತರು. ಕೃತಿಗಳು: ಕಥೆ ಕೇಳು ಗೆಳೆಯ, ಬಯಲು ಬಿತ್ತನೆ, ನೆಲದ ಮರೆಯ ನಿನಾದ, ಅಂತರಂಗದ ಹನಿಗಳು, ಹೊಸ ಹಾಡು, ಬೆವರು, ನೆಲದ ನುಡಿ, ಗಾಂಧಿಯ ನಾಡಿನಲ್ಲಿ, ಪಂಚನಾದಿಗಳ ನಾಡಿನಲ್ಲಿ ಮುಂತಾದವು. ...
READ MORE