‘ಲುಂಡೀರಿಯಾ’ ಉದಯಕುಮಾರ್ ಹಬ್ಬು ಅವರು ಪ್ರವಾಸದ ಮಾದರಿಯಲ್ಲಿ ಬರೆದ ಕಾಲ್ಪನಿಕ ಕಾದಂಬರಿ. ಧೈರ್ಯ ಮತ್ತು ಕರುಣೆಯ ಆನ್ಯಲೋಕಕ್ಕೆ ಎಂಬ ಉಪಶೀರ್ಷಿಕೆಯಡಿ ತಮ್ಮ ಕಲ್ಪನೆಗಳನ್ನು ದಾಖಲಿಸಿದ್ದಾರೆ. ಸಂಶೋಧನೆ ಮತ್ತು ಧೈರ್ಯದ ಈ ಕಥೆಯಲ್ಲಿ ಭೂಮಿಯ ಇಬ್ಬರು ಮಕ್ಕಳು ಎದ್ದೇಳುವಾಗ ಅವರು ತಮ್ಮ ಮನೆಯ ಹಾಸಿಗೆಯಲ್ಲಿರದೆ ದೊಡ್ಡ ಬಂಡೆಗಲ್ಲುಗಳ ನಡುವೆ ಇರುವ ಜ್ವಾಲಾಮುಖಿಗುಂಡಿ ಲುಂಡೇರಿಯಾ ಎಂಬ ಅನ್ಯಲೋಕದಲ್ಲಿ ಎದ್ದೇಳುತ್ತಾರೆ. ವಿಸ್ಮಯ ಮತ್ತು ಭಯಭರಿತ ಮಕ್ಕಳು ನೋಡಿದೆಡೆಯಲ್ಲಿ ಪ್ರಾಣಿಗಳನ್ನು ಕಾಣುತ್ತಾರೆ. ಅವುಗಳೂ ಕೂಡಾ ಈ ಮಕ್ಕಳನ್ನು ವಿಸ್ಮಯದಿಂದ ದಿಟ್ಟಿಸಿ ನೋಡುತ್ತಿವೆ. ಆದರೆ ಪ್ರಜ್ವಲ್ ಮತ್ತು ನೇಹಾರಿಗೆ ಇದು ಪ್ರಾರಂಭ ಮಾತ್ರ. ಅವರು ನೋಡುತ್ತಿರುವಂತೆ ಪ್ರಾಣಿಗಳು ಮಾತಾಡಲು ಪ್ರಾರಂಭಿಸಿದವು. ಅದುವೇ ಮಕ್ಕಳಿಗೆ ನಂಬಲಸಾಧ್ಯವಾಯಿತು.
ಭೂಮಿ ಮತ್ತು ಲುಂಡೀರಿಯಾ ತುಂಬ ಹೋಲಿಕೆಗಳಿರುವ ಜಗತ್ತುಗಳೆಂದು ಕಂಡು ಬಂದರೂ. ಅವುಗಳಲ್ಲಿ ಎರಡು ದೊಡ್ಡ ವ್ಯತ್ಯಾಸಗಳಿದ್ದವು. ಲುಂಡೀರಿಯಾದಲ್ಲಿ ಮನುಷ್ಯರಿರಲಿಲ್ಲ ಮತ್ತು ಎಲ್ಲ ಪ್ರಾಣಿಗಳೂ ಶಾಂತಿಯಿಂದ ಸೌಹಾರ್ದತೆಯಿಂದ ಪರಸ್ಪರ ಸಹಕಾರಿಯಾಗಿದ್ದವು. ಪ್ರಜ್ವಲ್ ಮತ್ತು ಲುಂಡೀರಿಯಾದಲ್ಲಿ ಯಾವ ಪ್ರಾಣಿಯೂ ಇನ್ನೊಂದು ಪ್ರಾಣಿಯನ್ನು ತಿನ್ನುವುದಿಲ್ಲ ಎಂದು ಕಲಿಯಲಿದ್ದಾರೆ. ಆಹಾರ ಸೇವನೆ ಅವರವರ ಆಯ್ಕೆ. ಆದರೆ ಮಾಂಸಾಹಾರ ನಮ್ಮ ದೇಹಕ್ಕೆ ಒಗ್ಗದು ಎಂದು ಹಲವಾರು ವಿಜ್ಞಾನಿಗಳು ಹೇಳಿದ್ದಾರೆ. ಈ ಪುಸ್ತಕವು ಕೇವಲ ಸಸ್ಯಾಹಾರದ ಮಹತ್ವ ಮತ್ತು ಅಗತ್ಯವನ್ನು ಹೇಳುವುದೆ ವಿನಃ ಮಾಂಸಾಹಾರವನ್ನು ತಿರಸ್ಕರಿಸುವುದಿಲ್ಲ. ಅನಿವಾರ್ಯವಾದಾಗ ಬದುಕುಳಿಯಲು ಮಾಂಸಾಹಾರವು ಒಂದು ಅಗತ್ಯ ಮತ್ತು ಅನಿವಾರ್ಯ ಎಂಬ ಸಂದೇಶವೂ ನೀಡುತ್ತದೆ.
©2024 Book Brahma Private Limited.