‘ಕಾಲ್ನಡಿಗೆಯ ಹಿಮಾಲಯ’ ಶಮಂತ ಡಿ.ಎಸ್ ಅವರ ಪ್ರವಾಸ ಕಥನವಾಗಿದೆ. ಹಿಮಾಲಯವು ನಿಗೂಢತೆಗಳ ಕಣಜ. ಕಂಡಷ್ಟೂ ಕೌತುಕಗಳು ಗೋಚರಿಸುತ್ತವೆ. ಅಲ್ಲಿಗೆ ಭೇಟಿ ನೀಡುವ ಪ್ರತಿಯೊಬ್ಬರಿಗೂ ಅವರದೇ ಆದ ವಿಶಿಷ್ಟ ರೋಚಕತೆಯನ್ನು ನೀಡುವ ವಿಸ್ಮಯದ ಶಿಖರ. ನಾವು ಭಾರತೀಯ ಪಾಲಿಗಂತೂ ದೈವ ಸ್ವರೂಪಿಯಾದ ಬ್ರಹ್ಮಾಂಡ ಯೋಗವೇ ಆಗಿದೆ. ಅದರ ಸುತ್ತಮುತ್ತಲಿನ ಜಾಗಗಳೆಲ್ಲವೂ ರಮಣೀಯವಾದ ಸ್ವರ್ಗತಾಣಗಳು… ನಿಸರ್ಗದ ಮಡಿಲಿನಲ್ಲಿ ತೇಲಾಡಿಸುವ ದಿವ್ಯ ಸೃಷ್ಟಿಗಳು. ಅಂಥ ಒಂದು ಅಪೂರ್ವ ಪ್ರದೇಶದ ಬಗ್ಗೆ ತಿಳಿದುಕೊಂಡಷ್ಟೂ ಚಂದವೇ. ಈ ಕೃತಿಯಲ್ಲಿ ಉಲ್ಲೇಖವಾಗುವ ಬಿಯಾಸ್ ನದಿ ಹರಿಯುವಷ್ಟೇ ನಯನ ಮನೋಹರವೆನ್ನಿಸುವ ದೃಶ್ಯಗಳ ಮೆರವಣಿಗೆ. ಆಗಷ್ಟೇ ಅರಳಿದ ಹೂವೊಂದರ ಘಮವನ್ನು ನೀಡುವಂತಹ ತಾಜಾತನದ ಜೊತೆ ಜೊತೆಯಾಗಿ ಓದುಗರಿಗೂ ಹೆಜ್ಜೆ ಹಾಕಿಸುವ ‘ಕಾಲ್ನಡಿಗೆಯ ಹಿಮಾಲಯಕ್ಕೆ’ ಕೃತಿಯು ಓದುಗರಿಗೆ ಒಂದಷ್ಟು ವಿಚಾರಗಳನ್ನು ಕಟ್ಟಿಕೊಡುತ್ತದೆ.
©2024 Book Brahma Private Limited.