ಗಗನಸಖಿಯರ ಸೆರಗ ಹಿಡಿದು ಪ್ರವಾಸ ಲೇಖನಗಳ ಪುಸ್ತಕ. ಇದು ಪತ್ರಕರ್ತ, ಲೇಖಕ ನಾಗೇಶ ಹೆಗಡೆ ಅವರ ಕೃತಿ. "ಇದು ಕನ್ನಡಕ್ಕೆ ಹೊಸ ಬಗೆಯ ಪ್ರವಾಸ ಕಥನವಾಗಿದ್ದು, 25ವರುಷಗಳ ಹಿಂದೆ ಕನ್ನಡ ಓದುಗರ ಕೈತುಂಬಲೆಂದು ಬಂದಿದೆ" ಎಂದು ಬೆನ್ನುಡಿಯಲ್ಲಿ ವಿವರಿಲಾಗಿದೆ. ಪಯಣದ ಆರಂಭ, ಸೊಬಗಿನ ಬೆಡಗಿನ ಸಿಂಗಾಪೂರ್, ಪೂರ್ವಾರ್ಧ ಅಪೂರ್ವ ಹಾಂಗ್‌ಕಾಂಗ್ ಯೆಲ್ಲೋಸ್ಟೋನ್ ಪಾರ್ಕ್, ಓಹ್ ಕ್ಯಾಲಿಫೋರ್ನಿಯಾ, ಅಮರ ಮರಗಳ ನೆರಳಿನಲ್ಲಿ, ಅಮೆರಿಕಾದಲ್ಲಿ ಭೂತಾರಾಧನೆ, ಗಗನ ಸಖಿಯರ ಸೆರಗು ಹಿಡಿದು, ಜೈಲಲ್ಲಿ ಜರ್ನಲಿಸ್ಟ್ ಹೀಗೆ ಹಲವಾರು ಕುತೂಹಲಭರಿತ ಅಧ್ಯಾಯಗಳನ್ನು ಈ ಪುಸ್ತಕವು ಒಳಗೊಂಡಿದೆ. ಲೇಖಕ ನಾಗೇಶ ಹೆಗಡೆಯವರ ಇಲ್ಲಿನ ಬರಹಗಳು ಒಮ್ಮೆ ಕಥೆಯಂತಾದರೆ, ಒಮ್ಮೆ ವರದಿಯಂತಾಗಿ, ಮರುಕ್ಷಣದಲ್ಲೇ ಛಂಗನೆ ಅತ್ಯಪೂರ್ವ ಪ್ರವಾಸಕಥನಗಳಾಗಿಬಿಡುತ್ತವೆ.
ಕನ್ನಡದ ಪ್ರಮುಖ ಲೇಖಕರಲ್ಲೊಬ್ಬರಾದ ನಾಗೇಶ ಹೆಗಡೆ ಅವರ ಹುಟ್ಟೂರು ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಬಕ್ಕಮನೆ. ಮಾಧ್ಯಮಿಕ ಶಿಕ್ಷಣವನ್ನು ಯಡಳ್ಳಿಯ ವಿದ್ಯೋದಯ ಹೈಸ್ಕೂಲಿನಲ್ಲಿ ಪೂರೈಸಿದ ಅವರು ಶಿರಸಿಯ ಮೋಟಿನಸರ ಸ್ಮಾರಕ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಭೂವಿಜ್ಞಾನದಲ್ಲಿ ಬಿಎಸ್‍ಸಿ ಮುಗಿಸಿದರು. ಖರಗಪುರ ಐಐಟಿಯಲ್ಲಿ ಆನ್ವಯಿಕ ಭೂವಿಜ್ಞಾನದಲ್ಲಿ ಎಂಎಸ್‍ಸಿ (ಟೆಕ್) ಮಾಡಿದರು. ದೆಹಲಿಯ ಜವಾಹರಲಾಲ ನೆಹರು ವಿಶ್ವವಿದ್ಯಾಲಯದಲ್ಲಿ ಪರಿಸರ ವಿಜ್ಞಾನದಲ್ಲಿ ಎಂ.ಫಿಲ್ ಮಾಡಿದರು. ಶಿಕ್ಷಕ, ಪರಿಸರವಾದಿ ಹಾಗೂ ಪತ್ರಕರ್ತರಾಗಿ ವಿಭಿನ್ನ ಪಾತ್ರಗಳನ್ನು ವಹಿಸುತ್ತಿರುವ ನಾಗೇಶ ಹೆಗಡೆ ಸುಧಾ ವಾರಪತ್ರಿಕೆಯ ಸಹಾಯಕ ಸಂಪಾದಕರಾಗಿದ್ದರು. ಕನ್ನಡದಲ್ಲಿ ವಿಜ್ಞಾನ-ತಂತ್ರಜ್ಞಾನದ ಲೇಖನಗಳನ್ನು ಬರೆದಿರುವ ...
READ MORE