‘ದೇಗುಲಗಳ ದಾರಿ’ ಕೆಂಗೇರಿ ಚಕ್ರಪಾಣಿಯವರು ರಚಿಸಿರುವ ಪ್ರವಾಸ ಸಾಹಿತ್ಯ. ಇದಕ್ಕೆ ಟಿ.ಎಸ್. ಗೋಪಾಲ್ ಅವರ ಮುನ್ನುಡಿ ಬರಹವಿದೆ; ಕೃತಿಯ ಕುರಿತು ಬರೆಯುತ್ತಾ 'ಕೆಂಗೇರಿ ಚಕ್ರಪಾಣಿಯವರ "ದೇಗುಲಗಳ ದಾರಿ" ಒಂದು ವಿಶಿಷ್ಟ ಮಾದರಿಯ ಪ್ರವಾಸ ಸಾಹಿತ್ಯ. ಕರ್ನಾಟಕದ ಅಪರೂಪದ ಅನೇಕ ದೇವಾಲಯಗಳ ಕುರಿತು ಇಲ್ಲಿ ಸಂಕ್ಷಿಪ್ತ ಪರಿಚಯವಿದೆ. ನಮ್ಮ ಕರ್ನಾಟಕದಾದ್ಯಂತ ಹಳ್ಳಿ ಮೂಲೆಗಳಲ್ಲಿರುವ ಈ ದೇವಾಲಯಗಳು ಬಹುಪಾಲು ಪ್ರವಾಸಿಗರ ಯಾದಿಯಲ್ಲಿ ಕಾಣಸಿಗಲಾರವು! ಶಿಲ್ಪಕಲೆ, ಚರಿತ್ರೆಯ ದೃಷ್ಟಿಯಿಂದ ಮಹತ್ವದವಾಗಿರುವ ಈ ಮಂದಿರಗಳು ಜನಪ್ರಿಯವಲ್ಲ ನಿಜ, ಆದರೆ ನಮ್ಮ ಜನ ಎಂದೂ ಮರೆಯಬಾರದ. ವಾಸ್ತವವಾಗಿ ಹೆಮ್ಮೆ ಪಡಬೇಕಾದ ದೇವಮಂದಿರಗಳು. ನಾವು ಓದದ ನಮ್ಮ ಚರಿತ್ರೆಯದೇ ಈ ಭಾಗಗಳು ಮರೆವೆಗೆ ಸಲ್ಲದಂತೆ ಲೇಖಕರು ಶ್ರಮ ವಹಿಸಿದ್ದಾರೆ. ಆಯಾ ಊರುಗಳನ್ನು ಹೇಗೆ ತಲುಪಬಹುದು, ಯಾರನ್ನು ಸಂಪರ್ಕಿಸಬೇಕು ಎಂದೂ ಇಲ್ಲಿ ಮಾಹಿತಿ ನೀಡಲಾಗಿದೆ. ದೇವಾಲಯಗಳ, ದೇವತಾ ಮೂರ್ತಿಗಳ ಅಪರೂಪದ ಚಿತ್ರಗಳಿವೆ. ಮುದ್ದಾದ ಪ್ರಕಟಣೆ. ಈ ಪುಸ್ತಕದಲ್ಲಿ ಲೇಖಕರೇ ತೆಗೆದ, ದೇವಾಲಯಗಳ, ದೇವತಾಮೂರ್ತಿಗಳ ಛಾಯಾಚಿತ್ರಗಳನ್ನು ಸಂಯೋಜಿಸ ಲಾಗಿದೆ. ಕರ್ನಾಟಕದ ದೇವತಾ ಶಿಲ್ಪಕಲಾ ಪರಂಪರೆಯ ಕುರಿತು ಹೊಸ ಅರಿವು ಮೂಡಿಸಬಲ್ಲ ಪುಸ್ತಕ ಇದು.
ಪ್ರಾಚೀನ ದೇಗುಲಗಳ ಬಗ್ಗೆ ಇಂದಿನ ದಿನದಲ್ಲಿ ಹೇಳುವಾಗ ಕನ್ನಡಿಗರಿಗೆ ಥಟ್ ಅಂತ ನೆನಪಾಗುವ ಹೆಸರು ಕೆಂಗೇರಿ ಚಕ್ರಪಾಣಿ. ಕನ್ನಡ ನಾಡಿನ ಮೂಲೆ ಮೂಲೆಯಲ್ಲಿರುವ ದೇಗುಲಗಳನ್ನೆಲ್ಲಾ ಸುತ್ತಿ ಅದರ ದೃಶ್ಯದರ್ಶನ ಸೌಭಾಗ್ಯವನ್ನು ಎಲ್ಲ ಕನ್ನಡಿಗರಿಗೆ ಮುಕ್ತವಾಗಿ ನೀಡುತ್ತಿರುವ ಕೆಂಗೇರಿ ಚಕ್ರಪಾಣಿಯವರದು ಸರಳ ಸಜ್ಜನಿಕೆಯಿಂದ ಕೂಡಿದ ವಿಶಾಲ ಮನಸ್ಸು. ಬಿ ಎಸ್ ಎನ್ ಎಲ್ ಕೇಂದ್ರದಲ್ಲಿ ದೂರಸಂಪರ್ಕ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿ ಇತ್ತೀಚೆಗೆ ನಿವೃತ್ತರಾಗಿರುವ ಕೆಂಗೇರಿ ಚಕ್ರಪಾಣಿ ಅವರಿಗೆ ಈ ಹವ್ಯಾಸ ತಮ್ಮ ಸಹೋದ್ಯೋಗಿಗಳೊಂದಿಗೆ ವಿವಿಧ ಪ್ರಾಚೀನ ದೇಗುಲಗಳಿರುವ ಊರುಗಳಿಗೆ ಪ್ರವಾಸ ಹೋಗುವುದರ ಮೂಲಕ ಮೊದಲ್ಗೊಂಡಿತು. ಹೀಗೆ ಮೊದಲ್ಗೊಂಡ ಪ್ರವಾಸ ಚಕ್ರಪಾಣಿ ...
READ MORE