ಲೇಖಕ ಎಂ ನಂಜುಂಡಸ್ವಾಮಿ ಅವರು ಐಪಿಎಸ್ ಅಧಿಕಾರಿಯಾಗಿದ್ದು, ವಿಶ್ವ ಸಂಸ್ಥೆಯ ಸಾಂತಿ ಸ್ಥಾಪನಾ ಕಾರ್ಯ (2007) ನಿಮಿತ್ತ ಅವರು ಕೊಸೊವಾ ದೇಶಕ್ಕೆ ಹೋದಾಗ ಅಲ್ಲಿಯ ಜನರ ಭಾಷೆ, ಆಚಾರ--ವಿಚಾರಗಳನ್ನು ದಾಖಲಿಸಿಬೇಕೆಂಬ ಉದ್ದೇಶದೊಂದಿಗೆ ಬರೆದ ಕೃತಿ ಇದು. ಆ ಜನರ ಇತಿಹಾಸ, ಭಾವನೆ, ಪ್ರೀತಿ, ಸಿಟ್ಟು, ದ್ವೇಷ, ದೇಶಪ್ರೇಮ, ನಂಬಿದ ಬದುಕಿನ ನೀತಿ ಇತ್ಯಾದಿ ಸಾಹಿತ್ಯಕವಾಗಿ, ಸಾಂಸ್ಕೃತಿಕವಾಗಿ ವಿವರಗಳನ್ನು ಅಚ್ಚುಕಟ್ಟಾಗಿ ಕಟ್ಟಿಕೊಡಲಾಗಿದೆ ಪ್ರವಾಸ ಕಥನದಂತೆ ನೇರವಾಗಿ ಹೇಳುತ್ತಾ ಹೋಗದು ಈ ಕೃತಿ. ಸಾಂಸ್ಕೃತಿಕವಾಗಿ, ಸಾಹಿತ್ಯವಾಗಿ, ಜನಪದೀಯ ಆಚರ-ವಿಚಾರಗಳನ್ನು ದಾಖಲಿಸುತ್ತಾ, ಕವಿತೆಗಳ ರೂಪದಲ್ಲಿ, ಸಣ್ಣ ಸಣ್ಣ ಕಥೆಗಳ ರೂಪದಲ್ಲಿ, ಆ ದೇಶದ ಜನರ ಅನುಭವದ ಬೆಳಕಿನಲ್ಲಿ ಸಂಗತಿಗಳು ದಾಖಲಾಗುತ್ತಾ ಹೋಗುವುದು ಇಲ್ಲಿಯ ಬರೆಹಗಳ ವಿಶೇಷ.
©2024 Book Brahma Private Limited.