ಲೇಖಕ ಎಸ್.ಪಿ. ಪದ್ಮಪ್ರಸಾದ್ ಅವರು 2019ರ ಜೂನ್ ತಿಂಗಳಲ್ಲಿ ಎಂಟು ದಿನ ಬಾಲಿ ದ್ವೀಪದಲ್ಲಿ ಪ್ರವಾಸ ಮಾಡಿದ ದಟ್ಟ ಅನುಭವಗಳನ್ನು, ಅಲ್ಲಿನ ಹಸಿರು ಅನನ್ಯತೆಯನ್ನು ತಮ್ಮ ಕೃತಿಯಲ್ಲಿ ಓದುಗರಿಗೆ ಮನೋಜ್ಞವಾಗಿ ನಿರೂಪಿಸಿದ್ದಾರೆ. “ಇಂಡೋನೇಷ್ಯಾ ಮತ್ತು ಬಾಲಿಯ ಪೂರ್ವಾಪರ, ಡೆನ್ ಪಸಾರ್ ನಿಲ್ದಾಣದಲ್ಲಿ...., ಮಟನ್ ಸಾರಿ ಹಾರ್ಬರ್, ಪುರಾತೀರ್ಥ ಎಂಪುಲ್ ದೇಗುಲದಲ್ಲಿ...., ಅಬಿಯನ್ ಕುಸುಮಸಾರಿ, ಪೆನ್ಸಿಪುರವೆಂಬ ಸ್ವಚ್ಛಗ್ರಾಮದಲ್ಲಿ…, ತಾಂಜುಂಗ್ ಬೀಚ್ ಮತ್ತು ಆಮೆ ದ್ವೀಪ, ಉಲುವಟು ಮಂದಿರ ಮತ್ತು ರಾಮಾಯಣ ರೂಪಕ, ಕಡಲ ದಂಡೆಯಲ್ಲಿ ಪ್ರಶಾಂತ ಭೋಜನ” ಮುಂತಾದ ಬರೆಹಗಳನ್ನು ಇಲ್ಲಿ ಕಾಣಬಹುದಾಗಿದೆ.
ಎಸ್.ಪಿ. ಪದ್ಮಪ್ರಸಾದ್ ಜಾನಪದ, ಕಾವ್ಯ, ನಾಟಕ, ವಿಮರ್ಶೆ ಮುಂತಾದ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಪದ್ಮ ಪ್ರಸಾದವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಹೊಸನಗರದಲ್ಲಿ. ತಂದೆ ಎಸ್.ಪಿ. ಪಾಯಪ್ಪಶೆಟ್ಟಿ, ತಾಯಿ ಜಿನ್ನಮ್ಮ. ಪ್ರಾರಂಭಿಕ ಶಿಕ್ಷಣ ಹೊಸನಗರದಲ್ಲಿ. ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನಿಂದ ಬಿ.ಎಸ್ಸಿ ಪದವಿ ಮತ್ತು ನ್ಯಾಷನಲ್ ಕಾಲೇಜ್ ಆಫ್ ಎಜುಕೇಷನ್‌ನಿಂದ ಬಿ.ಇಡಿ. ಪದವಿಯನ್ನೂ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. (ಕನ್ನಡ) ಹಾಗೂ ‘‘ಜೈನ ಜನಪದ ಸಾಹಿತ್ಯ-ಸಂಪಾದನೆ ಹಾಗೂ ಅಧ್ಯಯನ’’ ಪ್ರಬಂದ ಮಂಡಿಸಿ ಬೆಂಗಳೂರು ವಿಶ್ವ ವಿದ್ಯಾಲಯದಿಂದ ಪಡೆದ ಪಿಎಚ್.ಡಿ. ಪದವಿ ಪಡೆದಿದ್ದಾರೆ. ಹೈಸ್ಕೂಲು ಅಧ್ಯಾಪಕರಾಗಿ ಪಿಎಚ್.ಡಿ. ಪದವಿಗಳಿಸಿದ ರಾಜ್ಯದ ಮೊದಲ ವ್ಯಕ್ತಿ ...
READ MORE