ಪ್ರಪಂಚದ ಮೂರು ಭೂಖಂಡಗಳಲ್ಲಿ ಗೈದ ಸಂಚಾರಗಳ ವೈಶಿಷ್ಟ್ಯ ಕಥನ "ಹಲವು ನಾಡು ಹೆಜ್ಜೆ ಹಾಡು" ಪುಸ್ತಕ. ಇವು ಕೆಲವೇ ದಿನಗಳಲ್ಲಿ ಪೂರೈಸಿದ ಪ್ಯಾಕೇಜ್ ಟೂರುಗಳಲ್ಲ. 2002ರಿಂದ 2020 ವರೆಗೆ ಹದಿನೆಂಟು ವರ್ಷಗಳ ವಿಸ್ತಾರದ ಅವಧಿಯಲ್ಲಿ ಬಿಡಿಬಿಡಿಯಾಗಿ ಒಂದೊಂದೇ ದೇಶವನ್ನು ತಿರುಗಾಡಿ ಕಂಡು ಗ್ರಹಿಸಿದ ಅನಿಸಿಕೆಗಳು. ಯೂರೋಪಿನ ಹದಿನೈದು ದೇಶಗಳು, ಅಮೇರಿಕಾದ ಪ್ರೇಕ್ಷಣೀಯತೆಯ ಬಹುಭಾಗ, ಕೆರಿಬಿಯನ್ ದ್ವೀಪಗಳ ಕ್ರೂಸ್ ಯಾನ, ಏಷ್ಯಾದ ಸಿಂಗಪೂರ್ ಇತ್ಯಾದಿಗಳಲ್ಲಿ ಅನೇಕ ಬಾರಿ ಸಂಚರಿಸಿದ ಅನುಭವಗಳು ಇಲ್ಲಿರುವ ಮೂವತ್ತೆರಡು ಅಧ್ಯಾಯಗಳಲ್ಲಿ ತೆರೆದುಕೊಂಡಿವೆ. 'ಫಿನ್ಲೆಂಡ್- ಮಧ್ಯರಾತ್ರಿ ಸೂರ್ಯನ ನಾಡು' 'ಬೊನಾವೆಂಚರ್ ಸಿಮೆಟ್ರಿ' 'ಗಾನ್ ವಿಥ್ ದ ವಿಂಡ್' ನ ಲೇಖಕಿ ಮಾರ್ಗರೆಟ್ ಮಿಚೆಲ್ ಮನೆ, ಸ್ವಿಜರ್ಲೆಂಡ್ ನ ಸಿರಿ' 'ಪೋಲೆಂಡ್ ನ ಕಾನ್ಸಂಟ್ರೇಶನ್ ಕ್ಯಾಂಪ್' ಗಳ ದಾರುಣ ದೃಶ್ಯಾವಳಿ, 'ರಷ್ಯದ ಕೌತುಕಮಯ ನಗರಿಗಳ ಅದ್ಭುತ ಝಲಕ್ ಗಳು, 'ಲೂವ್ರ್, ಐಫೆಲ್ ಟವರ್' ಗಳ ಅಸದೃಶ ಬೆರಗು, 'ಕ್ಯಾಟಕೋಂಬ್' ಗಳೆಂಬ ಅದ್ಭುತ ಭೂಗತ ಸಮಾಧಿಗಳ ವೃತ್ತಾಂತ, ಫಿನ್ಲೆಂಡ್ ನ ನೆಲ, ಜಲ, ಹಿಮ, ಸರೋವರ, ಸೌನಾ, ಜನಜೀವನದ ನಿಕಟ ನೋಟಗಳು, 'ಲಾಸ್ ವೆಗಾಸ್' ನ ರೋಚಕತೆ, 'ಒಲಿಂಪಿಕ್ ಟ್ರೇನಿಂಗ್ ಸೆಂಟರಿನ' ಅನುಭವ... 'ನೋಬೆಲ್ ಪಾರಿತೋಷಕ' ಪ್ರದಾನಿಸುವ ಕನ್ಸರ್ಟ್ ಹಾಲಿನೊಳಗೆ ಲೇಖಕಿ ಅನುಭವಿಸಿದ ಪುಳಕ, 'ಸೆಂಟ್ ಪೀಟರ್ಸ್‌ಬರ್ಗ್' ನ ಮಾತ್ರೂಷ್ಕಾ ಬೊಂಬೆಗಳ ಅಂದ, ಕಣ್ಣೇ ಕೀಳಲಾಗದಷ್ಟು ಚೆಲುವಿನ 'ಬುಡಾಪೆಸ್ಟ್ ಹಂಗೆರಿಯ ಪಾರ್ಲಿಮೆಂಟಿ'ನ ದೃಶ್ಯಗಳು, ' 'ಗ್ರ್ಯಾಂಡ್ ಕಾನ್ಯನ್' ಗಳ ಮೋಡಿ, ಡಾನ್ಯೂಬ್, ಸಿಯೆನ್, ಮಿಸ್ಸಿಸ್ಸಿಪ್ಪಿ, ಮಸ್ಸೂರಿ, ನೆವಿಸ್ಕೀ, ಚಟ್ಟಾಹೂಚೀ, ಕೊಲರೆಡೋದಂಥ ನದೀತಟಗಳು, ಸ್ವಿಸ್ ನಾಡಿನ ಸ್ವರ್ಗಸದೃಶ ಗಿರಿ, ಸರಸ್ಸುಗಳು, 'ಅಮೆರಿಕದ ಎರಡೂ ನಾಸಾ ಕೇಂದ್ರಗಳು' 'ಮಾರ್ಟಿನ್ ಲೂಥರ್ ಕಿಂಗ್' ಜ್ಯೂ.ಮತ್ತು ಗಾಂಧೀಜಿ ಒಟ್ಟಿಗಿರುವ ಮಾ. ಲೂ. ಕಿಂಗ್ ಮ್ಯೂಸಿಯಂ ನ ಐತಿಹಾಸಿಕ ಭಾವನಾತ್ಮಕತೆ, 'ಆಸ್ಟ್ರಿಯಾದ ಚೆಲುವು' ನ್ಯೂಯಾರ್ಕ್ ನ ಸ್ವಾತಂತ್ರ್ಯ ದೇವತೆಯ ಕಿರೀಟದೊಳಗಿನ ಗುಳೋಪಿನೊಳಗೆ ನಡೆದಾಡಿದ್ದು, 'ಹಿಮದ ನಾಡಿನ ಹಸಿ ಮನಸುಗಳ'ಲ್ಲಿ ಸಹೃದಯೀ ಸ್ನೇಹದ ಪರಿಚಯ, 'ಬರ್ಮುಡಾ ಟ್ರಯಾಂಗಲ್ ನಲ್ಲೊಂದು ಪಯಣ' 'ಸಿಂಗಪೂರಿನ ಬುದ್ಧ ದಂತ ದೇಗುಲ' ಇಂಥ ಅನೇಕ ಭಾವಪೂರಿತ ಕಥನಗಳಲ್ಲಿ ಲೇಖಕಿ ತೆರೆದಿಡುವ ಈ ಪ್ರಪಂಚದ ಸುತ್ತು ಕಣ್ಣೆದುರು ಆ ಸ್ಥಳಗಳನ್ನೇ ಪ್ರತ್ಯಕ್ಷವಾಗಿ ತಂದು ನಿಲ್ಲಿಸುತ್ತದೆ.
©2024 Book Brahma Private Limited.