ಪಂಚನದಿಗಳ ನಾಡಿನಲ್ಲಿ ಪ್ರವಾಸ ಸಿದ್ಧರಾಮ ಹೊನ್ಕಲ್ ಅವರ ಪಂಜಾಬ್ ಪ್ರವಾಸದ ಕುರಿತು ಬರೆದ ಪ್ರವಾಸಕಥನವಾಗಿದೆ. ಪಂಜಾಬಿಗರೆಂದರೆ ನಮಗೆ ನೆನಪಾಗೊದು ಸಿಖ್ ಸಂಸ್ಕ್ರತಿ, ಹಾಗೂ ಬಂಗ್ರಾ ಪಂಜಾಬಿನ ಜನಪ್ರಿಯಾ ನೃತ್ಯ. ಟ್ರಕ್ ಡ್ರೈವರ್ ಗಳ ಒರಟು ನಡತೆಯುಳ್ಳವರೆಂದು ಭಾವಿಸಿಕೊಳ್ಳುವ ನಮಗೆ ಅಪ್ರತಿಮ ಅತಿಥಿ ಪ್ರಿಯಾರಾದ ಪಂಜಾಬ್ ಜನರ ಸ್ನೇಹಪರತೆಯನ್ನು ಹೃದಯ ವೈಶಾಲ್ಯತೆ, ಆತ್ಮೀಯತೆಯನ್ನು ಸೊಗಸಾಗಿ ಚಿತ್ರಿಸಿದ್ದಾರೆ. ಈ ಪ್ರವಾಸ ಕಥನಕ್ಕೆ ಸಾಹಿತ್ಯ ಅಕಾಡೆಮಿ ಪುರಸ್ಕಾರ ಸಂದಿದೆ, ಕೋಲ್ಹಾಪುರ ವಿ.ವಿ.ಯಲ್ಲಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಪಠ್ಯವಾಗಿತ್ತು.
ಸೃಜನಶಿಲತೆಯ ಬಹುಮುಖಿ ಆಯಾಮಗಳಲ್ಲಿ ತೊಡಗಿಸಿಕೊಂಡಿರುವ ಕವಿ ಸಿದ್ಧರಾಮ ಹೊನ್ಕಲ್ ಅವರು ಯಾದಗಿರಿ ಜಿಲ್ಲೆಯ, ಶಹಾಪುರ ತಾಲೂಕಿನ ಸಗರ ಗ್ರಾಮದವರು. ಎಂ ಎ., (ಎಲ್.ಎಲ್.ಬಿ ), ಡಿ.ಎನ್.ಹೆಚ್.ಇ , ಪಿ ಜಿ.ಡಿಎಮ್.ಸಿ.ಜೆ ಪದವೀಧರರು. ಕಥೆ, ಕಾವ್ಯ, ಹನಿಗವನ, ಲಲಿತ ಪ್ರಬಂಧ, ಪ್ರವಾಸ ಕಥನ, ವ್ಯಕ್ತಿ ಚಿತ್ರಣ, ಸಂಪಾದನೆ - ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳ 40 ಕೃತಿಗಳನ್ನು ರಚಿಸಿದ್ದಾರೆ. ಆರೋಗ್ಯ ಶಿಕ್ಷಣಾಧಿಕಾರಿಯಾಗಿ ನಿವೃತ್ತರು. ಕೃತಿಗಳು: ಕಥೆ ಕೇಳು ಗೆಳೆಯ, ಬಯಲು ಬಿತ್ತನೆ, ನೆಲದ ಮರೆಯ ನಿನಾದ, ಅಂತರಂಗದ ಹನಿಗಳು, ಹೊಸ ಹಾಡು, ಬೆವರು, ನೆಲದ ನುಡಿ, ಗಾಂಧಿಯ ನಾಡಿನಲ್ಲಿ, ಪಂಚನಾದಿಗಳ ನಾಡಿನಲ್ಲಿ ಮುಂತಾದವು. ...
READ MORE