ವಿಮರ್ಶಕ, ಬರಹಗಾರ, ಅನುವಾದಕರಾದ ಓ.ಎಲ್. ನಾಗಭೂಷಣ ಸ್ವಾಮಿಯವರ ’ನನ್ನ ಹಿಮಾಲಯ’ ಪುಸ್ತಕ ಒಂದು ನೆಲೆಯಲ್ಲಿ ಆತ್ಮ ಕಥಾನಕವೂ ಹೌದು, ಪ್ರವಾಸ ಕಥನವೂ ಹೌದು. ಇಲ್ಲಿರುವ ಅನುಭವ ಪ್ರವಾಸ ಬರಹಗಳು ಶಿವಮೊಗ್ಗ, ಬೆಂಗಳೂರು, ಕೊಡಚಾದ್ರಿ, ಹಿಮಾಲಯ, ದೆಹಲಿ, ಕನ್ಯಾಕುಮಾರಿ, ಹೀಗೆ ಹಲವು ಊರುಗಳಲ್ಲಿ, ಮನಸ್ಸುಗಳಲ್ಲಿ ಸಂಚರಿಸುವಂತದ್ದು. ಲೇಖಕರು ಹಿಮಾಲಯದಲ್ಲಿ ಚಾರಣ ಮಾಡಿದ್ದು 1986 ರಲ್ಲಿ, ನಂತರ ಮತ್ತೆ ಹಿಮಾಲಯದಲ್ಲಿ ಅಲೆದಾಡಿದರು. ಇವರ ಹಿಮಾಲಯದ ಅನುಭವಗಳ ಬರವಣಿಗೆಯು 1996 ರಲ್ಲಿ ಪುಸ್ತಕ ರೂಪ ಪಡೆಯಿತು
ಓ ಎಲ್ ನಾಗಭೂಷಣ ಸ್ವಾಮಿ- ಹುಟ್ಟಿದ್ದು22 ಸೆಪ್ಟೆಂಬರ್ 1953, ಬೆಂಗಳೂರು ಸಮೀಪದ ಹೊಸಕೋಟೆಯಲ್ಲಿ. ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ ಇಂಗ್ಲಿಷ್ (1873) , ಎಂ.ಎ. ಕನ್ನಡ(1975)ಪದವಿ, ಎಂಡಿಟಿಡಿಬಿ ಕಾಲೇಜು ಮೈಸೂರು, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು. ಶಿಕಾರಿಪುರ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆನೇಕಲ್. ಕನ್ನಡ ವಿಶ್ವವಿದ್ಯಾಲಯದಲ್ಲಿ ಭಾಷಾಂತರ ವಿಭಾಗದ ಪ್ರೊಫೆಸರ್ ಮತ್ತು ಮುಖ್ಯಸ್ಥರಾಗಿ ಸೇವೆ (1992-1998). ಜನವರಿ2005 ರಲ್ಲಿ ಉದ್ಯೋಗದಿಂದ ಸ್ವಯಂ ನಿವೃತ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ, ಕನ್ನಡ ವಿಶ್ವವಿದ್ಯಾನಿಲಯ ಕೆ. ಕೆ. ಬಿರ್ಲಾ ಫೌಂಡೇಷನ್, ಜೆ. ಕೃಷ್ಣಮೂರ್ತಿ ಪೌಂಡೇಷನ್ ಮುಂತಾದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಹಲವು ಮಹತ್ವದ ...
READ MORE