ಲೇಖಕ ನಿಡಸಾಲೆ ಪುಟ್ಟಸ್ವಾಮಯ್ಯ ಅವರ ಪ್ರವಾಸ ಕಥನ-ಹಳ್ಳಿಹೈದನ ವಿದೇಶ ಪ್ರವಾಸ. ಥೈಲ್ಯಾಂಡ್, ಮಲೇಶಿಯಾ, ಹಾಂಗ್ ಕಾಂಗ್ ಹಾಗೂ ಸಿಂಗಾಪುರ ದೇಶಗಳಿಗೆ ಪ್ರವಾಸ ಕೈಗೊಂಡಿದ್ದು, ಅಲ್ಲಿಯ ಸ್ಥಳಗಳು, ಸ್ಮಾರಕಗಳು, ಅನುಭವಗಳನ್ನು ದಾಖಲಿಸಿದ್ದಾರೆ. ವಿದ್ವಾಂಸ ಪ್ರೊ. ಟಿ.ಆರ್. ಮಹಾದೇವಯ್ಯ ಅವರು ಕೃತಿಗೆ ಬೆನ್ನುಡಿ ಬರೆದು ‘ಲೇಖಕರು ತಮ್ಮ ಪ್ರವಾಸದ ವೀಕ್ಷಕ ವಿವರಣೆಯನ್ನು ನೀಡುತ್ತಾ ಹೋಗಿದ್ದಾರೆ. ಆ ವಿವರಣೆ ಶುಷ್ಕವಾಗದೇ ರಸಮಯವಾಗಿದೆ. ವಿದೇಶ ಪ್ರಯಾಣಕ್ಕೆ ಬೇಕಾದ ಪೂರ್ವ ಸಿದ್ಧತೆ, ಪಾಲಿಸಬೇಕಾದ ರೀತಿ-ರಿವಾಜುಗಳು, ಹೊರದೇಶದ ಊಟ-ವಸತಿ, ಆಚಾರ-ವಿಚಾರ ಮೊದಲಾದುವನ್ನು ಅವರು ರೋಚಕವಾಗಿ ಹೇಳುತ್ತಾ ಹೋಗಿದ್ದಾರೆ. ಭಾರತದದೊಳಗಿನ ತಮ್ಮ ಎರಡು ಪ್ರವಾಸಕಥನಗಳನ್ನು ಹೇಳಿದ್ದು ನಂತರ ವಿದೇಶ ಪ್ರಯಾಣ ಕುರಿತು ಹೇಳಿದ್ದರಿಂದ ದೇಶ-ವಿದೇಶದ ಅನುಭವ ಕಥನಗಳನ್ನು ದಾಖಲಿಸಿದ್ದಾರೆ. ಮುಗ್ಧ ಹಳ್ಳಿ ಹೈದನೊಬ್ಬ ನವನಾಗರಿಕತೆ ತಂದು ಕೊಟ್ಟ ಯಾಂತ್ರಿಕ ಜೀವನದ ಪರಿಣಾಮವನ್ನು ಅದರಲ್ಲೂ ಮಾನವ ಸಂಬಂಧಗಳು ಕಳಚಿ ಹೋಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿರುವ ರೀತಿ ಕಚಗುಳಿ ಇಡುತ್ತದೆ’ ಎಂದು ಪ್ರಶಂಸಿಸಿದ್ದಾರೆ.
©2024 Book Brahma Private Limited.