ಇದೊಂದು ಪ್ರವಾಸ ಕಥನ. ಉತ್ತರ ಕರ್ನಾಟಕ ಕಲಬುರ್ಗಿಯಿಂದ ನೇಪಾಳದ ಕಾಠಮಂಡುವಿಗೆ ಬೆಳೆಸಿದ ಪ್ರವಾಸದ ಅನುಭವವನ್ನು ಈ ಕೃತಿಯಲ್ಲಿ ದಾಖಲಿಸಲಾಗಿದೆ. ಪ್ರವಾಸದಲ್ಲಿ ಆಸಕ್ತಿ ಹೊಂದಿರುವ ಕೆಲವರ ತಂಡ ನೇಪಾಳವರೆಗೆ ಹಾಗೂ ಬುದ್ಧಗಯಾ, ಸೂರ್ಯದೇವಾಲಯ ಸುತ್ತಿದ ಅನುಭವ ಕಥನ ಇದು. ದೇಶ ವಿದೇಶದ ಸುಂದರ ನೆನಪುಗಳನ್ನು ಹಾಸ್ಯಮಯವಾಗಿ ಕಟ್ಟಿಕೊಟ್ಟ ಕೃತಿ ಇದಾಗಿದೆ.
ಈ ಕೃತಿಗೆ ಸೇಡಂ ದ ವಿಶ್ವ ಸೇವಾ ಸಂಸ್ಥೆಯಿಂದ ವಿಶ್ವ ಪುರಸ್ಕಾರ ದೊರೆತಿದೆ.
ಸೃಜನಶಿಲತೆಯ ಬಹುಮುಖಿ ಆಯಾಮಗಳಲ್ಲಿ ತೊಡಗಿಸಿಕೊಂಡಿರುವ ಕವಿ ಸಿದ್ಧರಾಮ ಹೊನ್ಕಲ್ ಅವರು ಯಾದಗಿರಿ ಜಿಲ್ಲೆಯ, ಶಹಾಪುರ ತಾಲೂಕಿನ ಸಗರ ಗ್ರಾಮದವರು. ಎಂ ಎ., (ಎಲ್.ಎಲ್.ಬಿ ), ಡಿ.ಎನ್.ಹೆಚ್.ಇ , ಪಿ ಜಿ.ಡಿಎಮ್.ಸಿ.ಜೆ ಪದವೀಧರರು. ಕಥೆ, ಕಾವ್ಯ, ಹನಿಗವನ, ಲಲಿತ ಪ್ರಬಂಧ, ಪ್ರವಾಸ ಕಥನ, ವ್ಯಕ್ತಿ ಚಿತ್ರಣ, ಸಂಪಾದನೆ - ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳ 40 ಕೃತಿಗಳನ್ನು ರಚಿಸಿದ್ದಾರೆ. ಆರೋಗ್ಯ ಶಿಕ್ಷಣಾಧಿಕಾರಿಯಾಗಿ ನಿವೃತ್ತರು. ಕೃತಿಗಳು: ಕಥೆ ಕೇಳು ಗೆಳೆಯ, ಬಯಲು ಬಿತ್ತನೆ, ನೆಲದ ಮರೆಯ ನಿನಾದ, ಅಂತರಂಗದ ಹನಿಗಳು, ಹೊಸ ಹಾಡು, ಬೆವರು, ನೆಲದ ನುಡಿ, ಗಾಂಧಿಯ ನಾಡಿನಲ್ಲಿ, ಪಂಚನಾದಿಗಳ ನಾಡಿನಲ್ಲಿ ಮುಂತಾದವು. ...
READ MORE