‘ಅಲೆದಾಟದ ಅಂತರಂಗ’ ನವೀನಕೃಷ್ಣ ಎಸ್. ಉಪ್ಪಿನಂಗಡಿ ಅವರ ಪ್ರವಾಸ ಕಥನವಾಗಿದೆ. ಈ ಪುಸ್ತಕವನ್ನು ಓದುತ್ತಾ ಹೋದಂತೆ ಆಪ್ತವಾಗುತ್ತಾ ಸಾಗುವುದು ಎಂ.ಕಾಂ. ವ್ಯಾಸಂಗ ಮಾಡುತ್ತಿರುವ ಲೇಖಕರ ಬರವಣಿಗೆಯ ಶೈಲಿ. ತಾನು ಅನುಭವಿಸಿದ ಪ್ರವಾಸದ ಅನುಭವವನ್ನು ಓದುಗ ಸ್ವತಃ ಅನುಭವಿಸುವಷ್ಟು ವಿಸ್ತಾರವಾಗಿ, ಆಕರ್ಷಕವಾಗಿ ಕಟ್ಟಿಕೊಟ್ಟಿದ್ದಾರೆ. ಪ್ರತಿಯೊಂದು ಸ್ಥಳಗಳ ಬಗೆಗಿನ ಐತಿಹಾಸಿಕ ಹಿನ್ನೆಲೆ, ರಮಣೀಯತೆ ಎಲ್ಲವನ್ನೂ ಈ ರೀತಿಯಲ್ಲಿ ಗ್ರಹಿಸಿ ಅಚ್ಚಾಗಿಸುವುದು ಸುಲಭದ ಮಾತಲ್ಲ. ಸೂಕ್ಷ್ಮಗ್ರಾಹಿಗಳಿಗೆ ಮಾತ್ರ ಸಾಧ್ಯ.
ನವೀನಕೃಷ್ಣ ಎಸ್. ಉಪ್ಪಿನಂಗಡಿ ಅವರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿಯವರು. ಇವರು ಚೂಂತಾರು ಹಾಗೂ ಮುಕ್ರುಂಪಾಡಿಯ 'ದ್ವಾರಕಾ'ದಲ್ಲಿ ನಡೆಯುವ ವಸಂತ ವೇದಪಾಠ ಶಿಬಿರದಲ್ಲಿ ಕಳೆದ 8 ವರ್ಷಗಳಿಂದ ವೇದ ಅಧ್ಯಾಪಕರಾಗಿ ತೊಡಗಿಸಿಕೊಂಡಿದ್ದಾರೆ. ಪ್ರಕೃತಿ-ಪ್ರಾಣಿ-ಪಕ್ಷಿಗಳ ಕುರಿತಾದ, ಸಾಹಿತ್ಯ ಕೃತಿಗಳ ಬಗೆಗಿನ ಇವರ ಅನೇಕ ಲೇಖನಗಳು ವಿಶ್ವವಾಣಿ, ವಿಜಯಕರ್ನಾಟಕ, ಭಾರತವಾಣಿ, ಜ್ಞಾನತಾಣ, ಉದಯವಾಣಿ ಮುಂತಾದ ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ವನ್ಯಜೀವಿ ಛಾಯಾಗ್ರಹಣ, ಪಕ್ಷಿ ವೀಕ್ಷಣೆ, ಪ್ರವಾಸ, ಓದು-ಬರೆಹ ಇವರ ಹವ್ಯಾಸಗಳು. ಕೃತಿಗಳು: ಹೆಜ್ಜೆ ಊರುವ ತವಕ ...
READ MORE