ಪತ್ರಕರ್ತ ಬರಹಗಾರ ಜಿ.ಎನ್. ಮೋಹನ್ ಅವರ ಪ್ರವಾಸ ಕಥನ ನನ್ನೊಳಗಿನ ಹಾಡು ಕ್ಯೂಬಾ. ಕ್ಯೂಬಾ ಎಂದ ಕೂಡಲೇ ಎಲ್ಲರಿಗೂ ಜ್ಞಾಪಕವಾಗುವ ವ್ಯಕ್ತಿ ಆರ್ನೆಸ್ಟೊ ಚೆಗುವೆರಾ. ಹ್ಹಾ ಚೆಗುವೆರಾ ಹೋರಾಡಿದ ನೆಲಕ್ಕೆ ಲೇಖಕರು ಪ್ರವಾಸ ಹೋಗಿದ್ದ ಸಮಯದಲ್ಲಿ ಅಲ್ಲಿ ಕಂಡುಂಡ ಅಂಶಗಳನ್ನು ಬರೆದಿದ್ದಾರೆ. ಈ ಪುಸ್ತಕವನ್ನು ಓದುವಾಗ ನಡೆಯುವ ಘಟನೆಗಳ ಭಾಗವಾಗಿ ನಾನು ಇದ್ದೇನೆ ಎಂತಲೂ ನಿಮಗೆ ಅನ್ನಿಸಬಹುದು. ಇದು ಲೇಖಕರ ಬರಹ ಶೈಲಿಯನ್ನು ವಿವರಿಸುತ್ತದೆ. ಇಡೀ ಪ್ರಪಂಚಕ್ಕೆ ಅತ್ಯುತ್ತಮ ವೈದ್ಯರನ್ನು ಕೊಡುಗೆಯಾಗಿ ನೀಡುವ ಈ ಪುಟ್ಟ ರಾಷ್ಟ್ರ ಸ್ವತಂತ್ರಗೊಂಡಿದ್ದೇಗೆ? ಎಂಬುದನ್ನು ತಿಳಿಯಲು ನೀವು ಓದಿ ನನ್ನೊಳಗಿನ ಹಾಡು ಕ್ಯೂಬಾ.
ಪತ್ರಕರ್ತ, ಲೇಖಕ ಜಿ.ಎನ್. ಮೋಹನ್ ಕನ್ನಡ ಪತ್ರಿಕೋದ್ಯಮದ ಪ್ರಮುಖರಲ್ಲೊಬ್ಬರು. ಪತ್ರಿಕೆ, ಎಲೆಕ್ಟ್ರಾನಿಕ್ ಹಾಗೂ ಆನ್ ಲೈನ್ ಮೂರು ಮಾಧ್ಯಮಗಳಲ್ಲಿ ನುರಿತವರು. ಬೆಂಗಳೂರು ವಿಶ್ವವಿದ್ಯಾಲಯದಿಂದ ನಾಟಕದಲ್ಲಿ ಮೊದಲ ರ್ಯಾಂಕ್ ನೊಂದಿಗೆ ಪದವಿ ಹಾಗೂ ಸಂವಹನದಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ಪ್ರಜಾವಾಣಿಯ ವರದಿಗಾರರಾಗಿ, ಈಟಿವಿ ಚಾನಲ್ ನ ಹಿರಿಯ ಸಂಪಾದಕರಾಗಿ, ಸಮಯ ಚಾನಲ್ ಹಾಗೂ ಅವಧಿಯ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದಾರೆ. 'ಸೋನೆಮಳೆಯ ಸಂಜೆ', 'ಪ್ರಶ್ನೆಗಳಿರುವುದು ಶೇಕ್ಸ್ ಪಿಯರನಿಗೆ' ಕವನ ಸಂಕಲನಗಳು, 'ನನ್ನೊಳಗಿನ ಹಾಡು ಕ್ಯೂಬಾ' (ಪ್ರವಾಸ ಕಥನ), 'ಕಾಫಿ ಕಪ್ಪಿನೊಳಗೆ ಕೊಲಂಬಸ್'(ವಿಚಾರ ಕಥನ) ಇವರ ಪ್ರಮುಖ ಕೃತಿಗಳು. ಸಾಹಿತ್ಯ, ನಾಟಕ, ...
READ MORE