ಲೇಖಕಿ ಶಾಂತಾ ಪಸ್ತಾಪುರ ಅವರ ಪ್ರವಾಸ ಕಥನ-ಗೆಳತಿಯರ ದಂಡು ಯುರೋಪ್ ಗೆ ಹೋಗಿದ್ದು. ಸಾಹಿತಿ ಇಂದಿರಾ ಶಿವಣ್ಣ ಅವರು ಕೃತಿಗೆ ಮುನ್ನುಡಿ ಬರೆದು ‘ ತಮ್ಮ ಗೆಳತಿಯರು ಸೇರಿ ಯುರೋಪ ಪ್ರವಾಸಕ್ಕೆ ಕೈಗೊಂಡ ಸಿದ್ಧತೆ ಹಾಗೂ ಅವರವರ ಕುಟುಂಬದ ಸದಸ್ಯರು ಸಹಕರಿಸಿದ ರೀತಿಯ ವಿವರಣೆಯೊಂದಿಗೆ ಪ್ರವಾಸ ಕಥನ ಆರಂಭವಾಗುತ್ತದೆ. ತಾವು ನೋಡಿದ್ದನ್ನು, ಅನುಭವಿಸಿದ್ದನ್ನು, ಅಧ್ಯಯನ ಮಾಡಿ ಓದುಗರಿಗೆ ಉಣಬಡಿಸಿದ ಶಾಂತಾ ಪಸ್ತಾಪುರ ಅವರ ಪ್ರವಾಸ ಕಥನವು ಸಾಹಿತ್ಯಕವಾಗಿ ಸಾರ್ಥಕ ಕೃತಿ ಎಂದು ಪ್ರಶಂಸಿಸಿದ್ದಾರೆ.
ಪ್ರವಾಸ ಹೋಗಲು ಪೂರ್ವ ತಯಾರಿ, ಬೆಂಗಳೂರಿನಿಂದ ಮುಂಬಯಿಗೆ, ಮುಂಬಯಿಯಿಂದ ಲಂಡನ್ ಗೆ,, ಸುಂದರ ನಗರ ಲಂಡನ್, ಫ್ಯಾಷನ್ ನಗರಿ ಪ್ಯಾರಿಸ್, ಡೈಮಂಡ್ ನಗರ ಬೆಲ್ಜಿಯಂ, ಹೂವಿನ ನಗರ ನೆದರಲ್ಯಾಂಡ್, ಸೌಂದರ್ಯದ ಮಡಿಲು ಸ್ವಿಟ್ಜರ್ ಲ್ಯಾಂಡ್, ಹರಳುಗಳ ನಗರ ಆಸ್ರೀಯಾ, ತೇಲುವ ನಗರ ವೆನಿಸ್, ಅದ್ಭುತಗಳಲ್ಲಿ ಒಂದು ಪೀಸಾನಗರ, ಪ್ರಾಚೀನ ನಗರ ರೋಮ್, ಹಿಂತಿರುಗಿ ನಮ್ಮ ದೇಶಕ್ಕೆ... ಹೀಗೆ ಶೀರ್ಷಿಕೆಗಳನ್ನು ಈ ಕೃತಿ ಒಳಗೊಂಡಿದೆ.
ಕವಿಯತ್ರಿ ಶಾಂತಾ ಪಸ್ತಾಪುರ ಮೂಲತಃ ಬೀದರದವರು. ತಂದೆ ರಾಚಪ್ಪ ಭಂಡಾರ, ತಾಯಿ ಮಹಾದೇವಿ ಭಂಡಾರ. ಎಸ್.ಎಸ್.ಎಲ್.ಸಿ.ವರೆಗೆ ಶಿಕ್ಷಣ. ಕಲಬುರಗಿಯಲ್ಲಿ ವಾಸವಿದ್ದಾರೆ. ಕೃತಿಗಳು: ಮನದಾಳದ ಮಾತು (ಕವನ ಸಂಕಲನ) ಪಯಣ (ಪ್ರವಾಸ ಕಥನ), ನೆನಪಿನಂಗಳ (ಕವನ ಸಂಕಲನ), ಕುಸುಮ ಬಾಲೆ (ಕವನ ಸಂಕಲನ), ಗೆಳೆತಿಯರ ದಂಡು ಯೂರೋಪ್ ಗೆ ಹೋಗಿದ್ದು (ಪ್ರವಾಸ ಕಥನ), ಬದುಕೇ ಒಂದು ಕಥೆ (ಕಥಾ ಸಂಕಲನ), ಅನುಭವ -ಅಭಿವ್ಯಕ್ತಿ ಮತ್ತು ಚಿಂತನ (ಲಲಿತ ಪ್ರಬಂಧಗಳು) , ಕಾವ್ಯಧಾರೆ (ಅವರು ರಚಿಸಿ, ಹಾಡಿದ ಧ್ವನಿ ಸುರುಳಿ) ಪ್ರಶಸ್ತಿ-ಪುರಸ್ಕಾರಗಳು: ಬದುಕೆ ಒಂದು ಕಥೆ ಕಥಾ ಸಂಕಲನಕ್ಕೆ ಶ್ರೇಷ್ಠ ಸಾಹಿತ್ಯ ಕೃತಿ ಪ್ರಶಸ್ತಿ, ಅಖಿಲ ...
READ MORE