ಲೇಖಕ ಕೆ. ಮುಕುಂದನ್ ಅವರ ಪ್ರವಾಸ ಕಥನವಾದ ’ಯುರೋಪ್ ಪ್ರವಾಸ’ ಕೃತಿಯು ಹಲವಾರು ದೇಶಗಳ, ಅನುಭವಗಳ ಕಥನವನ್ನು ಕಟ್ಟಿಕೊಡುತ್ತದೆ.
ಲೇಖಕರು ತಮ್ಮ ಕುಟುಂಬದೊಂದಿಗೆ 19 ದಿನಗಳಲ್ಲಿ 8 ದೇಶಗಳನ್ನು ನೋಡಿಬಂದಿರುವ ಅನುಭವಗಳನ್ನು ಈ ಕೃತಿಯಲ್ಲಿ ದಾಖಲಿಸಿದ್ದಾರೆ. ಅನುಭವ ಕಥನವನ್ನು ಹೇಳುತ್ತಾ ಅಲ್ಲಲ್ಲಿ ತಮ್ಮ ಹಾಸ್ಯಪ್ರವೃತ್ತಿಯನ್ನೂ ಸಹ ಓದುಗರೊಡನೆ ಹಂಚಿಕೊಂಡಿದ್ದಾರೆ. ಈ ಕೃತಿಯು ಲೇಖಕರ ಎರಡನೇ ಪ್ರವಾಸಾನುಭವದ ಕೃತಿಯಾಗಿದೆ. ಲಂಡನ್, ಹಾಲೆಂಡ್, ಫ್ರಾನ್ಸ್, ಇಟಲಿ, ಜರ್ಮನಿ, ಸ್ವಿಜರ್ ಲ್ಯಾಂಡ್, ನೆದರ್ ಲ್ಯಾಂಡ್, ಆಸ್ಟ್ರಿಯ ದೇಶಗಳ ಸುತ್ತಾಟದ ಅನುಭವವನ್ನು ಇಲ್ಲಿ ತಮ್ಮ ಪರಿಚಯಿಸಿದ್ದಾರೆ.
ಲೇಖಕ ಕೆ. ಮುಕುಂದನ್ ಅವರು ಮೂಲತಃ ಮೈಸೂರಿನವರು. ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿದ್ದಾರೆ. ತಂದೆ ಕೃಷ್ಣಸ್ವಾಮಿ ಅಯ್ಯಂಗಾರ್ ತಾಯಿ ಅಚ್ಚಮ್ಮ. ಪ್ರಾಥಮಿಕ ಶಿಕ್ಷಣವನ್ನು ಹಾಸನ ಜಿಲ್ಲೆಯ ಪೊನ್ನಾತ್ ಪುರದಲ್ಲಿ, ಪ್ರೌಢಶಿಕ್ಷಣವನ್ನು ಮೈಸೂರಿನಲ್ಲಿ ಹಾಗೂ ಉನ್ನತ ಶಿಕ್ಷಣವನ್ನು ಬೆಂಗಳೂರಿನಲ್ಲಿ ಪೂರೈಸಿದ್ದಾರೆ. ಕನ್ನಡ ಪ್ರಾಧ್ಯಪಕರಾಗಿ ಹಾಗೂ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿದ್ದಾರೆ. ಲಲಿತಾ ಕಲಾ ಅಕಾಡೆಮಿಯಲ್ಲಿ ರಿಜಿಸ್ಟ್ರಾರ್, ಕನ್ನಡ ಅಭಿವೃದ್ದಿ ಪ್ರಾಧಿಕಾರದಲ್ಲಿ ಹಾಗೂ ಪುಸ್ತಕ ಪ್ರಾಧಿಕಾರದಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಕೃತಿಗಳು: ಯುರೋಪ್ ಪ್ರವಾಸ, ಕಿವಿ-ಕಾಂಗರೂಗಳ ನಾಡಿನಲ್ಲಿ, ಅಮೆರಿಕ ಅಮೆರಿಕ ಅಮೆರಿಕ ...
READ MORE