ವಿಶ್ವ ದರ್ಶನ ಮಾಲಿಕೆಯಡಿ ಪ್ರಕಟವಾದ ಎರಡನೇ ಪುಸ್ತಕ ಅಪೂರ್ವ ಅರಬ್. ಈ ಕೃತಿಯಲ್ಲಿ ಕತಾರ್, ಕುವೈತ್, ಯುಎಇ, ಸಿರಿಯಾ ದೇಶಗಳ ಪರಿಚಯ ಮಾಡಿಕೊಡಲಾಗಿದೆ. ಈ ಕೃತಿ ಮಾಹಿತಿಗಳ ಕೈಪಿಡಿ. ಪ್ರಸ್ತುತ ಪುಸ್ತಕ ಅರಬಸ್ಥಾನದ ಮರಳುಗಾಡಿನ ಕತಾರ್, ಕುವೈತ್ ,ಯು .ಎ .ಇ ಮತ್ತು ಸಿರಿಯಾ ದೇಶಗಳ ಕಥನವನ್ನು ಹೃದಯಂಗಮವಾಗಿ ಪರಿಚಯಿಸುತ್ತದೆ. ಆ ದೇಶಗಳ ಒಂದು ಸಮಗ್ರ ಚಿತ್ರಣ ಕಣ್ಣಿಗೆ ಕಟ್ಟಿದಂತೆ ನಮ್ಮೆದುರು ಬಿಚ್ಚಿಕೊಳುತ್ತದೆ. ಆಯಾ ದೇಶಗಳ ಇತಿಹಾಸ, ಸಂಸ್ಕೃತಿ, ಸಮಾಜ ಜೀವನ, ಕಲೆ-ಸಾಹಿತ್ಯ-ಸಂಗೀತ-ನೃತ್ಯ, ನಂಬಿಕೆ-ಸಂಪ್ರದಾಯಗಳನ್ನು ಕುರಿತ ವಿವರಗಳಿಂದ ಮಾಹಿತಿಗಳ ಗಣಿಯಾಗಿದೆ.
ಲೇಖಕ ಡಿ.ಎಸ್. ಲಿಂಗರಾಜು, ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕು, ಮಾಯಸಂದ್ರದವರು. ತಂದೆ- ಡಿ.ಎಸ್. ಶಿವರಾಜೇಗೌಡ, ತಾಯಿ- ಬಿ.ಕೆ ಜಯಮ್ಮ. ಮಾಯಸಂದ್ರ, ತುರುವೇಕೆರೆ, ಕೋಲಾರ ಮತ್ತು ಚುಂಚನಗಿರಿಯಲ್ಲಿ ವಿದ್ಯಾಭ್ಯಾಸ. ಮೈಸೂರು ವಿಶ್ವವಿದ್ಯಾನಿಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ ಎ ಪದವಿ (1985), ಕೆಲಕಾಲ ಕುಣಿಗಲ್ ತಾಲೂಕು ಎಡೆಯೂರಿನ ಕಾಲೇಜೊಂದರಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿ ಸೇವೆ. ನಂತರ ಕೆಎಎಸ್ ಗೆಜೆಟೆಡ್ ಪರೀಕ್ಷೆಯಲ್ಲಿ ಆಯ್ಕೆಯಾಗಿ 1991 ರಿಂದ ಕರ್ನಾಟಕ ಸರ್ಕಾರದ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಕಾರ್ಯ ನಿರ್ವಹಣೆ, ಪ್ರಸ್ತುತ ವಾಣಿಜ್ಯ ತೆರಿಗೆ ಇಲಾಖೆ ಉಪ ಆಯುಕ್ತರಾಗಿ ಬೆಂಗಳೂರಿನಲ್ಲಿ ಸೇವೆ ಸಲ್ಕಾಲಿಸುತ್ತಿದ್ದಾರೆ. ತುಷಾರ ಮಾಸ ಪತ್ರಿಕೆಯ ದೇಶ-ವಿದೇಶಗಳ ಪರಿಚಯ ಮಾಲೆಯಲ್ಲಿ ಸುಮಾರು ...
READ MORE